ಬಿಗ್ ಬಾಸ್ ಮೂಲಕ ಜನಪ್ರಿಯತೆ ಪಡೆದ ನಟಿ ನಮ್ರತಾ ಗೌಡ (Namratha Gowda) ಇದೀಗ ತಮ್ಮ ಪ್ರವಾಸ, ಡ್ಯಾನ್ಸ್, ವಿಡೀಯೋ, ಶೂಟಿಂಗ್ ಎಲ್ಲಾದರಿಂದಲೂ ಬ್ರೇಕ್ ಪಡೆದು ಚಾಮುಂಡೇಶ್ವರಿ ದೇವಿ ದರ್ಶನ ಪಡೆದು ಬಂದಿದ್ದಾರೆ.
ಮಂಡ್ಯ, ಚನ್ನಪಟ್ನದಲ್ಲೆಲ್ಲಾ ಕುಟುಂಬದ ಜೊತೆ ಹೋಗಿ ಬಂದಿರುವ ನಟಿ ನಮೃತಾ ಚನ್ನಪ್ರಟ್ನದ ಗೌಡಗೆರೆ ಗ್ರಾಮದಲ್ಲಿರುವ ಚಾಮುಂಡೇಶ್ವರಿ ದೇವಿ (Chamundeshwari Devi) ದೇಗುಲಕ್ಕೆ ಭೇಟಿ ನೀಡಿ, ದೇವಿಗೆ ಪೂಜೆ ಸಲ್ಲಿಸಿ ಬಂದಿದ್ದಾರೆ.
ನಟಿ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಚಾಮುಂಡೇಶ್ವರಿ ದರ್ಶನ ಹಾಗೂ ಚಾಮುಂಡೇಶ್ವರಿ ದೇವಿಯ ಬೃಹತ್ ಮೂರ್ತಿಯ ಫೋಟೋವನ್ನು ಶೇರ್ ಮಾಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ಇದಲ್ಲದೇ ಮಂಡ್ಯದಲ್ಲಿನ ಕೆಲವೊಂದು ಫೋಟೋಗಳನ್ನು ಸಹ ನಟಿ ಹಂಚಿಕೊಂಡಿದ್ದು, ಮನೆಯೊಂದರ ಮೆಟ್ಟಿಲಿನಲ್ಲಿ ಕುಳಿತು ನಟಿ ಕುರಿಮರಿಯೊಂದನ್ನು ಮುದ್ದು ಮಾಡುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಹಸಿರು ಬಣ್ಣದ ಕುರ್ತಾ, ಬಿಳಿ ಬಣ್ಣದ ಪ್ಯಾಂಟ್ ಧರಿಸಿರುವ ನಟಿ, ಹಣೆ ತುಂಬಾ ಚಾಮುಂಡೇಶ್ವರಿಯ ವಿಭೂತಿ, ಕುಂಕುಮ ಹಚ್ಚಿಕೊಂಡಿದ್ದಾರೆ, ಕೈಯಲ್ಲಿ ಕುರಿಮರಿ ಹಿಡಿದಿದ್ದು Endlessly blessed, Forever grateful ಎಂದು ಕ್ಯಾಪ್ಶನ್ ಹಾಕಿದ್ದಾರೆ.
ನಟಿಯ ಫೋಟೋ ನೋಡಿ ಅಭಿಮಾನಿಗಳು ನಮ್ರತಾ ನೀನು ಪಡ್ಡೆ ಹುಡುಗರ ಕ್ರಷ್ ಹಾಗೆ ಡ್ರೀಮ್ ಗರ್ಲ್ ಎಂದು ಒಬ್ಬರು ಹೇಳಿದ್ರೆ, ಆಕ್ಟಿಂಗ್, ಫ್ಯಾಷನ್, ಮಾರ್ಡನ್ ಡ್ರೆಸ್ಸ್, ಎಲ್ಲಾದರ ಮಧ್ಯ ನಿಮ್ಮ ನಿಜವಾದ ಜೀವನಕೆ ನಿಮಗೆ ಸ್ವಾಗತ ನಮ್ರತಾ ಎಂದು ಕಾಮೆಂಟ್ ಮಾಡಿದ್ದಾರೆ.
ಬಿಗ್ ಬಾಸ್ ಬಳಿಕ ನಮೃತಾ ವಿಡೀಯೋ, ರೀಲ್ಸ್ ನಲ್ಲೇ ಬ್ಯುಸಿಯಾಗಿದ್ದಾರೆ. ಇಲ್ಲಿವರೆಗೂ ಯಾವುದೇ ಸೀರಿಯಲ್ ಮತ್ತು ಸಿನಿಮಾದಲ್ಲಿ ನಟಿಸುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ನಟಿ ಕೂಡ ಈ ಬಗ್ಗೆ ಏನೂ ಹೇಳಿಲ್ಲ. ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ನಟಿಯನ್ನ ಮತ್ತೆ ತೆರೆ ಮೇಲೆ ನೋಡೋದಕ್ಕೆ ಕಾಯ್ತಿದ್ದಾರೆ.