ಸಾರಾ ಅಣ್ಣಯ್ಯ ಬರ್ತ್ ಡೇ ಸಂಭ್ರಮ …. ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ ಅಮೃತಧಾರೆ ನಟಿ!

First Published | Nov 9, 2024, 6:13 PM IST

ಕನ್ನಡ ಕಿರುತೆರೆ ನಟಿ ಸಾರಾ ಅಣ್ಣಯ್ಯ ತಮ್ಮ ಬೋಲ್ಡ್ ಫೋಟೊಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. 
 

ಕನ್ನಡತಿ ಧಾರಾವಾಹಿಯಲ್ಲಿ ವರೂಧಿನಿ ಪಾತ್ರದ ಮೂಲಕ ಮಿಂಚಿದ ಮಾಡರ್ನ್ ಸುಂದರಿ ಸಾರಾ ಅಣ್ಣಯ್ಯ (Sara Annaiah), ತಮ್ಮ ಸೈಕೋ ಪಾತ್ರದಿಂದಲೇ ಸಖತ್ ಫೇಮಸ್ ಆಗಿದ್ದರು. ಒಂಥರಾ ನೆಗೆಟೀವ್ ಶೇಡ್ ಆಗಿದ್ದರೂ ಸಹ ಜನ ಅವರನ್ನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. 
 

ಕನ್ನಡತಿ ಸೀರಿಯಲ್ (Kannadathi Serial) ಬಳಿಕ ಸಾರಾ ಅಣ್ಣಯ್ಯ ಕಾಣಿಸಿಕೊಂಡಿದ್ದು, ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ ಪಾತ್ರದ ಮೂಲಕ. ಮೊದಲಿಗೆ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡರು ಆನಂತರದಲ್ಲಿ ಪಾತ್ರ ಪಾಸಿಟಿವ್ ಶೇಡ್ ಗೆ ಬದಲಾಗಿತ್ತು, ಅಲ್ಲೂ ಸಹ ಜನ ಮಹಿಮಾ ಪಾತ್ರವನ್ನು ಒಪ್ಪಿಕೊಂಡಿದ್ದರು. 
 

Tap to resize

ಆದರೆ ಸದ್ಯ ಒಂದೆರಡು ತಿಂಗಳುಗಳಿಂದ ಅಮೃತಧಾರೆ ಧಾರಾವಾಹಿಯಲ್ಲಿ ಸಾರಾ ಅಣ್ಣಯ್ಯ ಕಾಣಿಸಿಕೊಳ್ಳುತ್ತಲೇ ಇಲ್ಲ, ಹಾಗಾಗಿ ವೀಕ್ಷಕರು ಸಾರಾ ಅಣ್ಣಯ್ಯ ಅವರನ್ನ ಸೀರಿಯಲ್ ನಲ್ಲಿ ಮಿಸ್ ಮಾಡಿಕೊಳ್ಳುತ್ತಿದ್ದಾರೆ. 
 

ನಟನೆಯಿಂದ ದೂರ ಇದ್ರೂ ಸಹ ಸಾರಾ ಸೋಶಿಯಲ್ ಮೀಡೀಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ತಮ್ಮ ಟ್ರಾವೆಲ್ ಫೋಟೊ, ಔಟಿಂಗ್ ಫೋಟೊ ವಿಡಿಯೋಗಳ ಮೂಲಕ ಅಭಿಮಾನಿಗಳ ಜೊತೆ ಕನೆಕ್ಟ್ ಆಗಿರುತ್ತಾರೆ. 
 

ಸದ್ಯ ವಿದೇಶದಲ್ಲಿರುವ ಸಾರಾ ಇದೀಗ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಸ್ನೇಹಿತರ ಜೊತೆಗಿನ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿದ್ದು, ಈ ಫೋಟೊಗಳು ಪಡ್ಡೆಗಳ ನಿದ್ದೆ ಕೆಡಿಸುವಂತಿದೆ, ಅಷ್ಟೊಂದು ಹಾಟ್ ಆಗಿ ಕಾಣಿಸಿದ್ದಾರೆ ಸಾರಾ. 
 

ಸಾರಾ ತಮ್ಮ ಬರ್ತ್ ಡೇ ಸಲುವಾಗಿ ವಿದೇಶದಲ್ಲಿ ಎಂಜಾಯ್ ಮಾಡ್ತಿದ್ದಾರೆ, ಸಮುದ್ರ ಮಧ್ಯದಲ್ಲಿ ಬೋಟ್ ನಲ್ಲಿ ತಮ್ಮ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡುತ್ತಿದ್ದು, ಬರ್ತ್ ಡೇ ಎಂದು ಕ್ಯಾಪ್ಶನ್ ಕೊಟ್ಟು ಟ್ಯೂಬ್ ಬ್ರಾದಂತಹ ಟಾಪ್ ಮತ್ತು ಅದಕ್ಕೆ ಮ್ಯಾಚ್ ಆಗುವ ಪ್ಯಾಂಟ್ ಧರಿಸಿ ಪೋಸ್ ಕೊಟ್ಟಿದ್ದಾರೆ. 

ಈ ಫೋಟೊಗಳಲ್ಲಿ ನಟಿ ಎಷ್ಟೊಂದು ಹಾಟ್ ಮತ್ತು ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ ಅಂದ್ರೆ ಫ್ಯಾನ್ಸ್ ಟೂ ಹಾಟ್, ಫೈರ್, ಪಡ್ಡೆ ಹುಡುಗರಿಗೆ ನಿದ್ದೆನೆ ಬರಲ್ಲ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಸಿಕ್ಕಾಪಟ್ಟೆ ಲೈಕ್ಸ್ ಹಾಗೂ ಫೈರ್ ಇಮೋಜಿ ಕೂಡ ಸಿಕ್ಕಿದೆ. 
 

Latest Videos

click me!