ತಮ್ಮ ಮುದ್ದಾದ ಫೋಟೊ ಶೇರ್ ಮಾಡಿ Don’t be Beautiful ಎಂದ ನಟಿ ಭೂಮಿ ಶೆಟ್ಟಿ

Published : Nov 09, 2024, 05:40 PM ISTUpdated : Nov 10, 2024, 07:57 AM IST

ನಟಿ ಭೂಮಿ ಶೆಟ್ಟಿ ಸೋಶಿಯಲ್ ಮಿಡಿಯಾದಲ್ಲಿ ಹೊಸ ಫೋಟೊಗಳನ್ನು ಶೇರ್ ಮಾಡಿದ್ದು, ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ.   

PREV
17
ತಮ್ಮ ಮುದ್ದಾದ ಫೋಟೊ ಶೇರ್ ಮಾಡಿ Don’t be Beautiful ಎಂದ ನಟಿ ಭೂಮಿ ಶೆಟ್ಟಿ

ಕಿನ್ನರಿ ಸೀರಿಯಲ್ ಮೂಲಕ ಸದ್ದು ಮಾಡಿದ ಸುಂದರಿ ಭೂಮಿ ಶೆಟ್ಟಿ (Bhoomi Shetty), ಬಳಿಕ ಬಿಗ್ ಬಾಸ್ ಸೀಸನ್ 7 ರಲ್ಲಿ ಸ್ಪರ್ಧಿಯಾಗಿ ಸಖತ್ ಮನರಂಜನೆ ಕೊಟ್ಟು ಜನಮನ ಗೆದ್ದಿದ್ದರು.

27

ಸದ್ಯಕ್ಕಂತೂ ಸಿನಿಮಾಗಳಿಂದ, ನಟನೆಯಿಂದ ದೂರವೇ ಉಳಿದಿದ್ದಾರೆ ಭೂಮಿ ಶೆಟ್ಟಿ, ಆಗೊಮ್ಮೆ ಈಗೊಮ್ಮೆ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ರೂ ಕೂಡ ಅವು ಸದ್ದು ಮಾಡಿದ್ದೇ ಕಡಿಮೆ. 
 

37

ಆದ್ರೆ ಸೋಶಿಯಲ್ ಮೀಡೀಯಾದಲ್ಲಿ (Social media) ಆಕ್ಟೀವ್ ಆಗಿರುವ ಭೂಮಿ ತಮ್ಮ ಹೊಸ ಹೊಸ ಫೋಟೊ ಶೂಟ್ ಗಳ ಮೂಲಕ ಯಾವಾಗ್ಲೂ ಸುದ್ದಿಯಲ್ಲಿರುತ್ತಾರೆ. ಒಮ್ಮೆ ಟ್ರೆಡಿಶನಲ್ ಅವತಾರದಲ್ಲಿ ಕಾಣಿಸಿದ್ರೆ, ಮತ್ತೊಮ್ಮೆ ಮಾಡರ್ನ್ ಆಗಿ ಕಾಣಿಸುತ್ತಿರುತ್ತಾರೆ ನಟಿ. 
 

47

ಕೆಲದಿನಗಳ ಹಿಂದೆ ಭೂಮಿ ಬಾಕ್ಸ್ ಬ್ರೈಡ್ಸ್ ಹೇರ್ ಸ್ಟೈಲ್ ಮಾಡಿಸುವ ಮೂಲಕ, ಹೊಸ ಲುಕ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದರು, ಮತ್ತೊಮ್ಮೆ ಜಾಕೆಟ್ ಗ್ಲೌಸ್ ತೊಟ್ಟು ಪಕ್ಕಾ ರೈಡರ್ ನಂತೆ ಪೋಸ್ ನೀಡಿದ್ದರು. 
 

57

ಒಂದಷ್ಟು ತಿಂಗಳು ವಿದೇಶಿ ನೆಲೆದಲ್ಲಿ ಅಲೆದಾಡುತ್ತಾ, ಅಲ್ಲಿ ಬೆಟ್ಟ ಗುಡ್ಡಗಳಲ್ಲಿ ಟ್ರಾವೆಲ್ ಮಾಡುತ್ತಾ, ಪ್ರವಾಸಿ ತಾಣಗಳನ್ನು ನೋಡುತ್ತಾ, ಅಲ್ಲಿನ ತಿನಿಸುಗಳನ್ನು ಟ್ರೈ ಮಾಡುತ್ತಾ, ತಮಗಿಷ್ಟವಾದ ಡ್ರೆಸ್ ಧರಿಸಿ ಬಿಂದಾಸ್ ಆಗಿ ಓಡಾಡಿದ್ದರು ಭೂಮಿ ಶೆಟ್ಟಿ. 
 

67

ಇದೀಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದು, ಕಲರ್ ಕಲರ್ ಬ್ಲಕ ಪ್ರಿಂಟ್ ಸ್ಕರ್ಟ್ ಧರಿಸಿದ್ದು, ಅದಕ್ಕೆ ವೈಟ್ ಬಣ್ಣದ ಕ್ರಾಪ್ ಟಾಪ್ ಧರಿಸಿದ್ದು, ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಇವರ ಅಂದವನ್ನು ನೋಡಿ ಅಭಿಮಾನಿಗಳು ಬ್ಲ್ಯಾಕ್ ಬ್ಯೂಟಿ, ಭಲೆ ಭಲೆ ಚೆಂದದ ಹೆಣ್ಣು, ಮುಂಜಾನೆಯ ಫೇವರಿಟ್ ಕಾಫಿ, ಸುಂದರಿ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

77

ಭೂಮಿ ತಮ್ಮ ಫೋಟೊಗಳ ಜೊತೆಗೆ ಒಂದು ಸುಂದಾರವಾದ ಪ್ಯಾರಾಗ್ರಾಫ್ ಇರುವ ಒಂದು ಫೋಟೊ ಕೂಡ ಶೇರ್ ಮಾಡಿದ್ದು, ಅದರಲ್ಲಿ Don’t be Beautiful ಎನ್ನುವ ಕ್ಯಾಪ್ಶನ್ ಜೊತೆಗೆ, ಹೆಣ್ಣುಮಕ್ಕಳಿಗೆ ಸುಂದರವಾಗಿರೋದು ಮುಖ್ಯ ಅಲ್ಲ, ಸಾಹಸ, ಕ್ರೇಜಿ, ಕೋಪ, ಉತ್ಸಾಹ, ಬುದ್ಧಿವಂತಿಕೆ, ತಮಾಷೆ ಇವೆಲ್ಲವೂ ಇಷ್ಟ ಅನ್ನೋದನ್ನ ಬರೆದಿದ್ದಾರೆ. 
 

click me!

Recommended Stories