ಬಿಗ್ ಬಾಸ್ ಸೀಸನ್ 9, 7ನೇ ವಾರಕ್ಕೆ ಕಾಲಿಟ್ಟಿದೆ. 6ನೇ ವಾರ ಬಿಗ್ ಬಾಸ್ ಮನೆಯಿಂದ ಸಾನ್ಯಾ ಅಯ್ಯರ್ ಔಟ್ ಆಗಿದ್ದಾರೆ. ಸಾನ್ಯಾ ಅಯ್ಯರ್ ಮತ್ತು ಎಲಿಮಿನೇಟ್ ಆಗುತ್ತಿದ್ದಾರೆ ಎಂದು ಅನೌನ್ಸ್ ಮಾಡುತ್ತಿದ್ದಂತೆ ರೂಪೇಶ್ ಶೆಟ್ಟಿ ಕಣ್ಣೀರು ಹಾಕಲು ಪ್ರಾರಂಭಿಸಿದರು. ಸಾನ್ಯಾ ಮನೆಯಿಂದ ಹೊರ ಬಂದು ಎರಡು ದಿನ ಆದರೂ ರೂಪೇಶ್ ಅವರ ಕಣ್ಣೀರು ನಿಂತಿಲ್ಲ.
ಸಾನ್ಯಾ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ ನಡುವೆ ಉತ್ತಮ ಸ್ನೇಹ ಬಾಂಧವ್ಯವಿತ್ತು. ಇಬ್ಬರೂ ಬಿಗ್ ಮನೆಯಲ್ಲಿ ಸದಾ ಜೊತೆಯಲ್ಲೇ ಇರುತ್ತಿದ್ದರು. ಇಬ್ಬರ ನಡುವೆ ಸ್ನೇಹಕ್ಕಿಂತ ಮಿಗಿಲಾದ ಬಾಂಧವ್ಯವಿದೆ ಎನ್ನುವುದು ಇಬ್ಬರ ಫೀಲಿಂಗ್ಸ್ ನೋಡಿದ್ರೆ ಗೊತ್ತಾಗುತ್ತಿದೆ.
ಸಾನ್ಯಾ ಅಯ್ಯರ್ ಮನೆಯಿಂದ ಹೊರಡುವಾಗ ರೂಪೇಶ್ ಶೆಟ್ಟಿ ಬದಲಾಗಬೇಡ ಎಂದು ಹೇಳಿದ್ದರು. ಮನೆಯಿಂದ ಹೊರ ಹೋದ ಮೇಲೆ ಇಲ್ಲಿ ಹೇಗೆ ಇದ್ದೆ ಹೊರಗೂ ಹಾಗೆ ಇರು ಎಂದು ಹೇಳುತ್ತಾ ಜೋರಾಗಿ ಕಣ್ಣೀರು ಹಾಕಿದರು. ಸಾನ್ಯಾ ಸಮಾಧಾನ ಮಾಡಿ ಮನೆಯಿಂದ ಹೊರಬಂದಿದ್ದರು.
ಮನೆಯಿಂದ ಹೊರಬಂದ ಮೇಲೆ ಸಾನ್ಯಾ ಸಾಮಾಜಿಕ ಜಾಲತಾಣದಲ್ಲಿ ರೂಪೇಶ್ ಶೆಟ್ಟಿ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಬದಲಾಗಲು ಸಾಧ್ಯವೇ ಇಲ್ಲ ರೂಪೀ....ಎಂದು ಹೇಳಿದ್ದಾರೆ. ಜೊತೆಗೆ ನನ್ನ ರಾಕ್‌ಸ್ಟಾರ್ ಎಂದು ಬರೆದುಕೊಂಡು ಪ್ರೀತಿ ವ್ಯಕ್ತಪಡಿಸಿದ್ದಾರೆ.
'ಬದಲಾಗಲು ಸಾಧ್ಯವೇ ಇಲ್ಲ roopieeeeeee. ಎಂದಿಗೂ ಆ ಮುದ್ದು ನಗುವಾಗಿ ನಿನ್ನಲ್ಲಿ ನಾನು. ಇದು ಅಂತರವಲ್ಲ ನಮ್ಮ ಮನಸ್ಸು ಇನ್ನು ಹತ್ತಿರ. ನಿನ್ನ ಶಕ್ತಿಯಾಗಲು ನಾನು ಯಾವಾಗಲೂ ಶ್ರಮಿಸುತ್ತೇನೆ ನನ್ನ ರಾಕ್‌ಸ್ಟಾರ್' ಎಂದು ಬರೆದುಕೊಂಡಿದ್ದಾರೆ.
ಸಾನ್ಯಾ ಮನೆಯಿಂದ ಹೊರಬಂದ ಬಳಿಕ ರೂಪೇಶ್ ಶೆಟ್ಟಿ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳುತ್ತಿದ್ದಾರೆ. ಪ್ರತಿ ಬಾರಿಯೂ ರೂಪೇಶ್ ಶೆಟ್ಟಿ ಬಿಗ್ ಮನೆಯಲ್ಲಿ ಸಾನ್ಯಾ ಹೆಸರು ಹೇಳುತ್ತಿದ್ದಾರೆ. ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಕಣ್ಣೀರು ಹಾಕುತ್ತಿದ್ದಾರೆ.
'ಸಾನ್ಯಾ ಬಿಟ್ಟು ಜೀವನ ಮಾಡುವುದಕ್ಕೆ ಕಷ್ಟ ಆಗುತ್ತುದೆ. ಒಂದು ದಿನವೂ ಸಾನ್ಯಾಗೆ ಗುಡ್ ಮಾರ್ನಿಂಗ್ ಹೇಳದೆ ದಿನ ಆರಂಭಿಸಿಲ್ಲ. 100 ದಿನ ಜೊತೆಗಿದ್ದು ಒಳ್ಳೆ ಜೀವನದ ಪಾಠ ಹೇಳಿಕೊಟ್ಟಿದ್ದಾಳೆ. ನನಗೆ ಹುಡುಗಿಯರು ಅಂದ್ರೆ ಇಷ್ಟಾನೇ ಇರಲಿಲ್ಲ ಬಿಬಿ ಮನೆಗೆ ಬಂದ ದಿನವೇ ಹೇಳಿದ್ದೆ ಲೈಫ್‌ಟೈಂ ಸಿಂಗಲ್ ಆಗಿರುತ್ತೀನಿ ಅಂತ. ಪ್ರತಿ ಸಲ ನಾನು ಗೆದ್ದಾಗಲ್ಲೂ ಸೆಲೆಬ್ರೇಟ್ ಮಾಡುತ್ತಿದ್ದಳು ಸೋತಾಗ ಪಕ್ಕ ನಿಲ್ಲುತ್ತಿದ್ದಳು. ಬಿಗ್ ಬಾಸ್‌ಯಿಂದ ನನ್ನ ಲೈಫ್‌ಗೆ ಸಿಕ್ಕಿರುವ ಬೆಸ್ಟ್ ಫ್ರೆಂಡ್ ಅವಳು ತುಂಬಾ ಒಳ್ಳೆ ಹುಡುಗಿ' ಎಂದು ಹೇಳಿ ಕಣ್ಣೀರು ಹಾಕಿದ್ದರು.