BBK9 ಬಿಗ್ ಬಾಸ್‌ ಮನೆಯಿಂದ ಸಾನ್ಯಾ ಐಯರ್ ಔಟ್; ರೂಪೇಶ್‌ ಶೆಟ್ಟಿ ಮತ್ತೆ ಸಿಂಗಲ್?

Published : Nov 06, 2022, 03:34 PM IST

ಕಿರುತೆರೆ ವೀಕ್ಷಕರಿಗೆ ಬಿಗ್ ಶಾಕ್. ಬಿಬಿ ಮನೆಯಿಂದ ಹೊರ ನಡೆದಿರುವ ಸಾನ್ಯಾ ಐಯರ್, ಎಲಿಮಿನೇಟ್ ಆಗಲು ಕಾರಣವೇನು?  

PREV
16
BBK9 ಬಿಗ್ ಬಾಸ್‌ ಮನೆಯಿಂದ ಸಾನ್ಯಾ ಐಯರ್ ಔಟ್; ರೂಪೇಶ್‌ ಶೆಟ್ಟಿ ಮತ್ತೆ ಸಿಂಗಲ್?

ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ ಬಾಲನಟಿಯಾಗಿ ಕನ್ನಡ ಕಿರುತೆರೆಗೆ ಕಾಲಿಟ್ಟ ಸಾನ್ಯಾ ಐಯರ್ ಬಿಗ್ ಬಾಸ್ ರಿಯಾಲಿಟಿ ಶೋಯಿಂದ  ಪ್ರತಿಯೊಬ್ಬ ಕನ್ನಡಿಗರ ಮಗಳಾಗಿದ್ದಾರೆ. 

26

 ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ನಂತರ ಸಾನ್ಯಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದರು. ಹೀಗಾಗಿ ಬಿಗ್ ಬಾಸ್ ಓಟಿಟಿ ಸೀಸನ್ 1ಕ್ಕೆ ಸ್ಪರ್ಧಿಯಾಗಿ ಪ್ರವೇಶಿಸಿದ್ದರು. 

36

ಓಟಿಟಿ ಫಿನಾಲೆ ಹಂತ ತಲುಪಿ 50 ದಿನ ಪೂರೈಸಿ ಅತಿ ಹೆಚ್ಚು ವೋಟ್ ಪಡೆದ ಕಾರಣ ಟಿವಿ ಬಿಗ್ ಬಾಸ್ ಸೀಸನ್ 9ಕ್ಕೆ ನೇರವಾಗಿ ಪ್ರವೇಶಿಸಿದ್ದಾರೆ.

46

ಬಿಗ್ ಬಾಸ್ ಸೀಸನ್ 9ರಲ್ಲಿ 42 ದಿನಗಳನ್ನು ಪೂರೈಸಿ ಕಡಿಮೆ ವೋಟ್‌ಗಳನ್ನು ಪಡೆದ ಕಾರಣ ಎಲಿಮಿನೇಟ್ ಆಗಿದ್ದಾರೆ. ಬಿಬಿ ಮನೆಯಿಂದ ಹೊರ ಬಂದಿರುವ 6ನೇ ಸ್ಪರ್ಧಿ ಸಾನ್ಯಾ.

56

ಸಾನ್ಯಾ ಮತ್ತು ಗೆಳೆಯ ರೂಪೇಶ್ ಶೆಟ್ಟಿ ಕಾಂಬಿನೇಷನ್‌ ಸೂಪರ್ ಡೂಪರ್ ಆಗಿತ್ತು. ಸದಾ ಟಾಮ್ ಆಂಡ್ ಜೆರಿ ರೀತಿ ಆಡುವ ಈ ಜೋಡಿ ಟಾಸ್ಕ್‌ ಬಂದ್ರೆ ತುಂಬಾನೇ ಸ್ಟ್ರಿಟ್‌ ಆಗಿರುತ್ತಿದ್ದರು.

66

 ಈಗ ಸಾನ್ಯಾ ಐಯರ್ ಮನೆಯಿಂದ ಹೊರ ಬಂದಿರುವ ಕಾರಣ ರೂಪೇಶ್ ಶೆಟ್ಟಿ ಸಿಂಗಲ್ ಆಗಿರುತ್ತಾರೆ ಅನ್ನೋದೆ ವೀಕ್ಷಕರಿಗಿರುವ ಸಣ್ಣ ನೋವು. 

Read more Photos on
click me!

Recommended Stories