ನಾನು ಸೀರಿಯಲ್​​ ಬಿಡ್ತಾ ಇರೋದಕ್ಕೆ ಇದೇ ಕಾರಣ: ಕೊನೆಗೂ ಲೈವ್​ಗೆ ಬಂದು ಕಾರಣ ಕೊಟ್ಟ Sanjana Burli

Published : Mar 14, 2026, 12:03 PM IST

'ಪುಟ್ಟಕ್ಕನ ಮಕ್ಕಳು' ಖ್ಯಾತಿಯ ನಟಿ ಸಂಜನಾ ಬುರ್ಲಿ ಇದೀಗ 'ಗಂಧದ ಗುಡಿ' ಸೀರಿಯಲ್​ನಿಂದಲೂ ಹೊರಬಂದಿದ್ದಾರೆ. ಶಿಕ್ಷಣದ ಕಾರಣಕ್ಕೆ ಮೊದಲ ಸೀರಿಯಲ್ ಬಿಟ್ಟಿದ್ದ ಅವರು, ಇದೀಗ ತಮ್ಮ ವೈವಾಹಿಕ ಜೀವನದ ಸಲುವಾಗಿ ಗಂಧದ ಗುಡಿ ಧಾರಾವಾಹಿಯನ್ನು ತೊರೆಯುತ್ತಿರುವುದಾಗಿ ಖುದ್ದು ಸ್ಪಷ್ಟಪಡಿಸಿದ್ದಾರೆ.

PREV
16
ಅರ್ಧಕ್ಕೆ ಸೀರಿಯಲ್​ ಬಿಟ್ಟ ನಟಿ

ನಟಿ ಸಂಜನಾ ಬುರ್ಲಿ ಅರ್ಥಾತ್​ ಪುಟ್ಟಕ್ಕನ ಮಕ್ಕಳು ಖ್ಯಾತಿಯ ಡಿಸಿ ಮೇಡಂ ಸ್ನೇಹಾ, ಇದೀಗ ಗಂಧದ ಗುಡಿ (Gandhada Gudi) ಸೀರಿಯಲ್​ನಿಂದಲೂ ಹೊರಕ್ಕೆ ಬಂದಿದ್ದಾರೆ. ಪುಟ್ಟಕ್ಕನ ಮಕ್ಕಳು ಸೀರಿಯಲ್​ ಬಿಟ್ಟದ್ದಕ್ಕೆ ಕಾರಣ, ಶಿಕ್ಷಣ ಎಂದು ಹೇಳಿದ್ದರು ನಟಿ.

26
ಚಂದನಾ ಪಾತ್ರ ಬದಲು

ಆದರೆ, ಇದೀಗ ದಿಢೀರ್ ಎಂದು ಗಂಧದ ಗುಡಿಯಿಂದ ಬದಲಾಗಿದ್ದು, ಅವರ ಅಭಿಮಾನಿಗಳಿಗೆ ಆಘಾತ ತರಿಸಿತ್ತು. ನಟಿ ಸಂಜನಾ ಅವರ ಎಂಗೇಜ್​ಮೆಂಟ್​ ಆಗಿರುವುದನ್ನು ಹೇಳಿದ್ದರೂ, ಮದುವೆಯಾದ ಮೇಲೂ ಸೀರಿಯಲ್ ಮುಂದುವರೆಸಬಹುದಿತ್ತಲ್ಲವಾ? ಇದಾಗಲೇ ಕೆಲವು ನಟಿಯರು ಸೀರಿಯಲ್​ನಲ್ಲಿ ಇದ್ದುಕೊಂಡೇ ಮದುವೆಯಾಗಿ ನಟನೆ ಮುಂದುವರೆಸಿದ್ದಾರೆ ಎಂದು ಅಂದುಕೊಂಡವರೇ ಹೆಚ್ಚು.

36
ನಟಿಯಿಂದ ಉತ್ತರ

ಆದ್ದರಿಂದ ನಟಿ ಗಂಧದ ಗುಡಿ ಸೀರಿಯಲ್ ಬಿಡಲು ಬೇರೆ ಏನಾದ್ರೂ ಕಾರಣ ಇದೆಯಾ ಎನ್ನುವ ಸಂಶಯ ಅವರ ಅಭಿಮಾನಿಗಳನ್ನು ಕಾಡುತ್ತಿತ್ತು. ಇದೀಗ ಅದಕ್ಕೆ ಕಲರ್ಸ್​ ವಾಹಿನಿಯ ಮೂಲಕ ನಟಿಯೇ ಬಂದು ಖುದ್ದು ಉತ್ತರ ನೀಡಿದ್ದಾರೆ.

46
ಚಂದನಾ ಆಗಿ ಬಂದಿಲ್ಲ

ನಾನು ಇವತ್ತು ನಿಮ್ಮ ಮುಂದೆ ಗಂಧದ ಗುಡಿ ಚಂದನಾ ಆಗಿ ಬಂದಿಲ್ಲ, ಬದಲಿಗೆ ನಿಜವಾಗಿಯೂ ಸಂಜನಾ ಆಗಿ ಬಂದಿದ್ದೇನೆ ಎನ್ನುತ್ತಲೇ ಗಂಧದ ಗುಡಿ ಸೀರಿಯಲ್​ ಬಿಟ್ಟಿರುವುದು ಏಕೆ ಎಂದು ತಿಳಿಸಿದ್ದಾರೆ.

56
ಪ್ರಮುಖ ಘಟ್ಟ

ಪ್ರತಿಯೊಬ್ಬ ಹೆಣ್ಣಿನ ಬಾಳಿನಲ್ಲಿ ಮದುವೆ ಎನ್ನುವುದು ತುಂಬಾ ಪ್ರಮುಖ ಘಟ್ಟವಾಗಿದೆ. ನಾನು ಕೂಡ ಆ ಒಂದು ನಿರ್ಣಾಯಕ ಹಂತಕ್ಕೆ ಬಂದು ನಿಂತಿದ್ದೇನೆ. ನಾನು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದು ನಟಿ ಹೇಳಿದ್ದಾರೆ.

66
ಮದುವೆ ಎನ್ನುವುದು ಸ್ಪಷ್ಟ

ಇನ್ಮುಂದೆ ಗಂಧದ ಗುಡಿ ಚಂದನಾ ಆಗಿ ಇವರು ನಿಮ್ಮ ಮುಂದೆ ಬರಲಿದ್ದಾರೆ ಎಂದು ನಟಿಯನ್ನು ಪರಿಚಯಿಸಿದ್ದಾರೆ ಸಂಜನಾ. ಅಲ್ಲಿಗೆ ಸಂಜನಾ ಬುರ್ಲಿ ಸೀರಿಯಲ್ ಬಿಡಲು ಕಾರಣ, ಅವರ ಮದುವೆ ಎನ್ನುವುದು ಸ್ಪಷ್ಟವಾಗಿದೆ.ರಾ ಮಾಚಾರಿ ಹಾಗೂ ಶುಭಸ್ಯ ಶೀಘ್ರಂ ಧಾರಾವಾಹಿಯಲ್ಲಿ ನಟಿಸಿದ್ದ ಸ್ನೇಹಾ ಮಂಜುನಾಥ್‌ ಅವರು ಸಂಜನಾ ಆಗಿ ಎಂಟ್ರಿ ಕೊಟ್ಟಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories