Bigg Boss ನಮ್ರತಾ ಗೌಡ- ಕಾರ್ತಿಕ್​ ಮಹೇಶ್​ ಮದ್ವೆಗೆ ಸಂಗೀತಾ ಶೃಂಗೇರಿ ಗ್ರೀನ್ ಸಿಗ್ನಲ್​: ನಟಿ ಹೇಳಿದ್ದೇನು?

Published : Feb 10, 2026, 01:30 PM IST

ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ ಮತ್ತು ಕಾರ್ತಿಕ್ ಮಹೇಶ್ ಅವರ ಮದುವೆಯ ವದಂತಿಗಳು ಹರಿದಾಡುತ್ತಿವೆ. ಈ ಬಗ್ಗೆ ಇಬ್ಬರೂ ಸ್ಪಷ್ಟನೆ ನೀಡದಿದ್ದರೂ, ಇದೀಗ ಅವರ ಸ್ನೇಹಿತೆ ಸಂಗೀತಾ ಶೃಂಗೇರಿ ಈ ಜೋಡಿ ಮದುವೆಯಾದರೆ ತನಗೆ ಖುಷಿ, ಅವರಿಬ್ಬರೂ ಚೆನ್ನಾಗಿ ಕಾಣುತ್ತಾರೆ ಎಂದು ಹೇಳುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ

PREV
16
ನಮ್ರತಾ- ಕಾರ್ತಿಕ್​ ಮದ್ವೆ ಗುಲ್ಲು!

ಬಿಗ್ ಬಾಸ್ ಖ್ಯಾತಿಯ ನಮ್ರತಾ ಗೌಡ ಮತ್ತು ಕಾರ್ತಿಕ್ ಮಹೇಶ್ ನಡುವಿನ ಸಂಬಂಧದ ಬಗ್ಗೆ ಕಳೆದ ಕೆಲವು ತಿಂಗಳುಗಳಿಂದ ಸುದ್ದಿ ಹರಿದಾಡುತ್ತಲೇ ಇದೆ. ನಟಿ ನಮ್ರತಾ ಗೌಡ ಅವರು ಆಗಾಗ ಟ್ರಿಪ್‌ ಮಾಡುತ್ತಿರುತ್ತಾರೆ. ಇತ್ತೀಚೆಗೆ ಅವರು ವಿದೇಶಕ್ಕೆ ಹೋಗಿದ್ದರು. ಅಲ್ಲಿ ಅವರು ಭೇಟಿ ನೀಡಿರುವ ಸ್ಥಳಗಳಲ್ಲಿ ಫೋಟೋ, ವಿಡಿಯೋ ಮಾಡಿಕೊಂಡಿದ್ದರು. ಆ ವೇಳೆ ಅವರು ಒಬ್ಬರ ಕೈ ಹಿಡಿದುಕೊಂಡು ತಿರುಗಿದ್ದಾರೆ. ಆ ಕೈಗೆ ಹಾಕಿಕೊಂಡ ಬ್ಲ್ಯಾಕ್‌ ಬಾಂಡ್‌ ಹಾಗೂ ಕಾರ್ತಿಕ್‌ ಮಹೇಶ್‌ ಹಾಕಿಕೊಂಡ ಬ್ಯಾಂಡ್‌ ಎರಡೂ ಸೇಮ್‌ ಇದೆ ಎನ್ನಲಾಗಿತ್ತು.

26
ಕಾರ್ತಿಕ್​ ಮಹೇಶ್​ ಏನ್​ ಹೇಳಿದ್ರು?

ಈ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ ಉತ್ತರ ನೀಡಿದ ಕಾರ್ತಿಕ್‌ ಮಹೇಶ್‌ ಅವರು, “ಇಲ್ಲ, ಏನಾದರೂ ಇದ್ದಾಗ ನಾವು ಹೇಳುತ್ತೀವಿ. ನಾನು ಕೈಗೆ ಬ್ಯಾಂಡ್‌ ಹಾಕಿಕೊಂಡಿಲ್ಲ. ಈ ರೀತಿ ಜೋಡಿ ಮಾಡಿದ್ದನ್ನು ನಾನು, ನಮ್ರತಾ ಚರ್ಚೆ ಮಾಡಿಕೊಂಡು ನಕ್ಕಿದ್ದೇವೆ. ಅಭಿಮಾನಿಗಳು ಪೋಸ್ಟ್‌ ಹಾಕಿದಾಗ ಖುಷಿ ಆಗುತ್ತದೆ, ಈ ರೀತಿ ಬೇರೆಯವರ ಜೊತೆ ಕೂಡ ಫೋಟೋ ಹಾಕಿದ್ದಾರೆ. ಏನಾದರೂ ಇದ್ದರೆ ತಿಳಿಸುತ್ತೇವೆ” ಎಂದು ಹೇಳಿದ್ದರು.ಆದರೂ ಇವರಿಬ್ಬರ ನಡುವಿನ ಸಂಬಂಧ (Bigg Boss Karthik Mahesh and Namratha Gowda marriage) ಮದುವೆಯವರೆಗೂ ಹೋಗಲಿದೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಸುದ್ದಿ ಸದ್ದು ಮಾಡುತ್ತಲೇ ಇರುತ್ತದೆ.

36
ನುಣುಚಿಕೊಂಡಿದ್ದ ನಟಿ

ಕೆಲವು ದಿನಗಳ ಹಿಂದೆ, ನಟಿಗೆ ಈ ಬಗ್ಗೆ ಪ್ರಶ್ನೆ ಕೇಳಿದ್ದಾಗ, ನುಣುಚಿಕೊಂಡಿದ್ದ ಅವರು, ನಿಮ್ಮ ಮತ್ತು ಕಾರ್ತಿಕ್​ ಮಹೇಶ್​ ನಡುವೆ ಗಾಸಿಪ್​ ಕೂಡ ಇದೆ, ಅದರ ಬಗ್ಗೆ ಎಂದು ಕೇಳುತ್ತಲೇ ಓಕೆ ಬೈ ಎಂದು ಅಲ್ಲಿಂದ ಹೋಗೇ ಬಿಟ್ಟರು. ಇದು ನಿಜನೂ ಅನ್ನದೇ, ಸುಳ್ಳು ಎಂದೂ ಹೇಳದ ನಟಿ, ನಾನು ಮದುವೆಯಾದರೆ ಖಂಡಿತ ಎಲ್ಲರನ್ನೂ ಕರೆಯುತ್ತೇನೆ. ಎಲ್ಲರಿಗೂ ಹೇಳುತ್ತೇನೆ ಎಂದಿದ್ದರು.

46
ಸಂಗೀತಾ ಶೃಂಗೇರಿ ಹೇಳಿದ್ದೇನು?

ನೋಡಿ ನಾವೊಂದು ಪ್ಲ್ಯಾನ್​ ಮಾಡಿರಬಹುದು. ನಮ್ಮ ಅಪ್ಪ-ಅಮ್ಮ ಇನ್ನೊಂದು ಪ್ಲ್ಯಾನ್​ ಮಾಡಿರುತ್ತಾರೆ. ದೇವರು ಒಂದು ಪ್ಲ್ಯಾನ್​ ಮಾಡಿರುತ್ತಾನೆ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದರು. ಹಣೆಯಲ್ಲಿ ಯಾರು ಬರೆದಿದ್ದಾನೋ ಅವರನ್ನೇ ಮದುವೆಯಾಗುತ್ತೇನೆ. ಮದುವೆ ಆಗಬೇಕು ಎಂದುಕೊಂಡಿದ್ದೇನೆ. ನೋಡೋಣ ಎಂದಿದ್ದರು.

56
ತುಂಬಾ ಖುಷಿಯಾಗುತ್ತೆ

ಇದೀಗ ನಮ್ರತಾ ಗೌಡ ಅವರ ಸ್ನೇಹಿತೆ ಬಿಗ್​ಬಾಸ್​ ಖ್ಯಾತಿಯ ಸಂಗೀತಾ ಶೃಂಗೇರಿ (Sangeethaa Sringeri) ಅವರಿಗೆ ಇವರಿಬ್ಬರ ಮದುವೆಯ ಬಗ್ಗೆ ಬಾಸ್​ ಟಿವಿಯಲ್ಲಿ ಪ್ರಶ್ನಿಸಿದಾಗ, ಅವರು ಮದುವೆಯಾದರೆ ನನಗೆ ತುಂಬಾ ಖುಷಿಯಾಗುತ್ತದೆ. ಅವರು ಗಂಡ- ಹೆಂಡತಿಯಾಗಿ ತುಂಬಾ ಚೆನ್ನಾಗಿ ಕಾಣಿಸುತ್ತಾರೆ. ಇಬ್ಬರೂ ಒಳ್ಳೆಯ ಡಾನ್ಸರ್​, ಕರಿಯರ್​ ಕೂಡ ಒಟ್ಟಾಗಿ ಶುರು ಮಾಡಿದ್ರು, ತುಂಬಾ ಖುಷಿಯಾಗುತ್ತದೆ ಎಂದಿದ್ದಾರೆ.

66
ಸಂಗೀತಾ- ಕಾರ್ತಿಕ್​ ಮನಸ್ತಾಪ

ಅವರಿಬ್ಬರ ಜೋಡಿ ತುಂಬಾ ಚೆನ್ನಾಗಿದೆ. ನನಗಂತೂ ತುಂಬಾ ಖುಷಿಯಾಗುತ್ತದೆ ಎನ್ನುವ ಮೂಲಕ ಸಂಗೀತಾ ಶೃಂಗೇರಿ ಅವರ ಮದುವೆಗೆ ಗ್ರೀನ್ ಸಿಗ್ನಲ್​ ಕೊಟ್ಟಿದ್ದಾರೆ. ಅಷ್ಟಕ್ಕೂ, ಬಿಗ್ ಬಾಸ್ ಕನ್ನಡ ಸೀಸನ್ 10ನ ಸ್ಪರ್ಧಿಗಳಾದ ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್ ಮಹೇಶ್, ಷೋನಲ್ಲಿ ಸಿಕ್ಕಾಪಟ್ಟೆ ಕ್ಲೋಸ್​ ಆಗಿದ್ದರು. ಆದರೆ ಆ ಬಳಿಕ ಅವರ ಮಧ್ಯೆ ಮನಸ್ತಾಪ ಆಗಿತ್ತು. ವರ್ಷಗಳ ನಂತರ ಮತ್ತೆ ಒಟ್ಟಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories