ಕಾರಿನ ಪಕ್ಕದಲ್ಲಿದ್ದ ಮಕ್ಕಳ ಬಳಿ ಬಂದು 'ಚುಕ್ಕಿ ತಾರೆ' ಬರೆದ ಸಿಂಗರ್ ನವೀನ್ ಸಜ್ಜು!

First Published | Feb 17, 2024, 4:45 PM IST

ಶರ್ಟ್ ಮತ್ತು ಪಂಚೆ ಧರಿಸಿ ಹಳ್ಳಿ ಹುಡುಗನ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ನವೀನ್ ಸಜ್ಜು, ಭಾರೀ ಗಮನ ಸೆಳೆಯುತ್ತಿದ್ದಾರೆ ಎನ್ನಬಹುದು. ಚುಕ್ಕಿತಾರೆ ಕಥೆ ಏನಿರಬಹುದು, ಹೇಗಿರಬಹುದು ಎಂಬ ಕುತೂಹಲ ಸಹಜವಾಗಿಯೇ ಮೂಡತೊಡಗಿದೆ. 

'ಬಿಗ್ ಬಾಸ್ ಕನ್ನಡ ಸೀಸನ್ 6'ರ (Bigg Boss Kannada 6) ರನ್ನರ್ ಅಪ್ ಹಾಗೂ ಸಿಂಗರ್ ನವೀನ್ ಸಜ್ಜು (Naveen Sajju) ಬಣ್ಣ ಹಚ್ಚಿ ಕ್ಯಾಮೆರಾ ಮುಂದೆ ನಿಂತಿದ್ದಾರೆ. ಅಮೋಘ ಗಾಯನದ ಮೂಲಕ ಕರ್ನಾಟಕದ ಜನಮನವನ್ನು ಗೆದ್ದಿರುವ ನವೀನ್ ಸಜ್ಜು, ಈಗ ಕಿರುತೆರೆ ಪ್ರೇಕ್ಷಕರಿಗೆ ದರ್ಶನ ಕೊಡಲು ಸಜ್ಜಾಗಿದ್ದಾರೆ. 
 

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಲಿರುವ 'ಚುಕ್ಕಿತಾರೆ' ಎಂಬ ಹೊಸ ಸೀರಿಯಲ್‌ನಲ್ಲಿ ನವೀನ್ ಸಜ್ಜು ನಟಿಸುತ್ತಿದ್ದಾರೆ. ಚುಕ್ಕಿತಾರೆ ಸೀರಿಯಲ್ ಪ್ರೊಮೋ ಬಿಡುಗಡೆಯಾಗಿದ್ದು, ಹಳೆಯ ಕಾರಿನ ಮುಂದೆ ಇಬ್ಬರು ಹುಡುಗಿಯರು ನಿಂತು, ತಮ್ಮಿಷ್ಟದ ಹೆಸರುಗಳನ್ನು ಬರೆದಿದ್ದಾರೆ. 

Tap to resize

ಅದೇ ಸಮಯಕ್ಕೆ ನವೀನ್ ಸಜ್ಜು ಬಂದಿದ್ದು, ಕಲರ್‌ಫುಲ್ ಬಲೂನ್‌ಗಳನ್ನು ತಂದಿದ್ದಾರೆ. ಕಾರಿನ ಮೇಲೆ 'ಚುಕ್ಕಿತಾರೆ' ಎಂದು ಬರೆದು ನಗುತ್ತಲೇ ಮುಂದೆ ಸಾಗಿದ್ದಾರೆ ನವೀನ್ ಸಜ್ಜು. ಈ ಪ್ರೋಮೋ ಈಗ ಸಾಕಷ್ಟು ಮೆಚ್ಚುಗೆ ಗಳಿಸುತ್ತಿದ್ದು ವೈರಲ್ ಆಗುತ್ತಿದೆ.

ಶರ್ಟ್ ಮತ್ತು ಪಂಚೆ ಧರಿಸಿ ಹಳ್ಳಿ ಹುಡುಗನ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ನವೀನ್ ಸಜ್ಜು, ಭಾರೀ ಗಮನ ಸೆಳೆಯುತ್ತಿದ್ದಾರೆ ಎನ್ನಬಹುದು. ಚುಕ್ಕಿತಾರೆ ಕಥೆ ಏನಿರಬಹುದು, ಹೇಗಿರಬಹುದು ಎಂಬ ಕುತೂಹಲ ಸಹಜವಾಗಿಯೇ ಕಿರುತೆರೆ ಪ್ರೇಕ್ಷಕರ ಮನದಲ್ಲಿ ಮೂಡತೊಡಗಿದೆ. 

ಇಷ್ಟು ದಿನ ಸಿಂಗರ್ ಆಗಿದ್ದ ನವೀನ್ ಸಜ್ಜು, ಈಗ ಬಣ್ಣ ಹಚ್ಚಿ ಕ್ಯಾಮೆರಾ ಮುಂದೆ ನಿಂತಿದ್ದು ಅವರನ್ನು ಕಿರುತೆರೆ ಪ್ರೇಕ್ಷಕರು ಹೇಗೆ ಸ್ವೀಕರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. 
 

ಸ್ಯಾಂಡಲ್‌ವುಡ್ ಪ್ರೇಕ್ಷಕರಿಗೆ ನವೀನ್ ಸಜ್ಜು ಕಂಚಿನ ಕಂಠ ಹೊಸದೇನೂ ಅಲ್ಲ. ಕನ್ನಡ ಸಿನಿಮಾಗಳಾದ ಲೂಸಿಯಾ, ಗೋಲಿ ಸೋಡ, ಕನಕ ಹಾಗು ಸಿಂಗ  ಸೇರಿದಂತೆ ಹಲವು ಸಿನಿಮಾಗಳಲ್ಲಿ ನವೀನ್ ಸಜ್ಜು ತಮ್ಮ ಗಾಯನದ ಸುಧೆ ಹರಿಸಿದ್ದಾರೆ. 

ಬಹಳಷ್ಟು ಕಡೆ ವೇದಿಕೆಗಳಲ್ಲಿ ಲೈವ್ ಕಾರ್ಯಕ್ರಮ ನೀಡುವುದರಲ್ಲಿ ಕೂಡ ನವೀನ್ ಸಜ್ಜು ಸಿದ್ಧಹಸ್ತರು. ಹಾಡುವುದರ ಜತೆಗೆ ಸಂಗೀತ ನಿರ್ದೇಶನವನ್ನೂ ಮಾಡುತ್ತಿದ್ದಾರೆ  ನವೀನ್ ಸಜ್ಜು. ಸದ್ಯ ನಟನಾ ಕ್ಷೇತ್ರಕ್ಕೆ ಕೂಡ ಕಾಲಿಟ್ಟಿರುವ ನವೀನ್ ಅಲ್ಲಿ ಕೂಡ ತಮ್ಮ ಮಿಂಚನ್ನು ಹರಿಸಲಿದ್ದಾರೆ. 

ಈ ಸಂಗತಿ ತಿಳಿದ ನವೀನ್ ಸಜ್ಜು ಫ್ಯಾನ್ಸ್‌ಗಳು ಸಖತ್ ಥ್ರಿಲ್ ಆಗಿದ್ದಾರೆ. ನವೀನ್ ಸಜ್ಜು 2018ರಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 6ರಲ್ಲಿ ಸ್ಪರ್ಧಿಯಾಗಿದ್ದರು. 100 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ನವೀನ್ ಸಜ್ಜು, ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. 

ಅಂದು ಮಾಡ್ರನ್ ರೈತ ಶಶಿ ಬಿಗ್ ಬಾಸ್ ವಿನ್ನರ್ ಆಗಿದ್ದರೆ ನವೀನ್ ಸಜ್ಜು ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಬಳಿಕ ನವೀನ್ ತಮ್ಮ ಗಾಯನದ ಮೂಲಕ ಕ್ರಿಯಾಶೀಲರಾಗಿದ್ದಾರೆ. ಈಗ ನಟನಾ ಕ್ಷೇತ್ರಕ್ಕೆ ಕಾಲಿಟ್ಟು ಹೊಸ ಕನಸಿನೊಂದಿಗೆ ಹೊರಟಿದ್ದಾರೆ.

Latest Videos

click me!