ಕಲರ್‌ಫುಲ್‌ ಲೆಹೆಂಗಾದಲ್ಲಿ ಬೊಂಬೆಯಂತೆ ಕಂಗೊಳಿಸಿದ ನಮ್ರತಾ ಗೌಡ: ಕಾರ್ತಿಕ್ ಜೊತೆ ಡೇಟಿಂಗ್ ಯಾವಾಗ ಎಂದ ಫ್ಯಾನ್ಸ್‌!

Published : Feb 17, 2024, 01:00 AM IST

ಬಿಗ್ ಬಾಸ್ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡಿದ ನಟಿ ನಮ್ರತಾ ಗೌಡ . ಇದೀಗ ಈ ನಟಿಯ ಹೊಸ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ನೋಡಿ ಅಭಿಮಾನಿಗಳು ನಟಿಯ ಸ್ಟೈಲ್ ಸೆನ್ಸ್‌ ಅನ್ನು ಮೆಚ್ಚಿಕೊಂಡಿದ್ದಾರೆ.

PREV
17
ಕಲರ್‌ಫುಲ್‌ ಲೆಹೆಂಗಾದಲ್ಲಿ ಬೊಂಬೆಯಂತೆ ಕಂಗೊಳಿಸಿದ ನಮ್ರತಾ ಗೌಡ: ಕಾರ್ತಿಕ್ ಜೊತೆ ಡೇಟಿಂಗ್ ಯಾವಾಗ ಎಂದ ಫ್ಯಾನ್ಸ್‌!

ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ನಮ್ರತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇತ್ತೀಚೆಗೆ ಸೀರೆಯುಟ್ಟು ಮದುಮಗಳ ಹಾಗೆ ಸಿಂಗಾರಗೊಂಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದೀಗ ನಮ್ರತಾ ಗೌಡ ಹೊಸ ಡ್ರೆಸ್‌ನಲ್ಲಿ ಮತ್ತೊಂದಿಷ್ಟು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.

27

ನಮ್ರತಾ ಗೌಡ 'ನಾಗಿಣಿ 2' ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದರು. ಅಲ್ಲದೇ ಕನ್ನಡಿಗರ ಮನೆ ಮಾತಾಗಿದ್ದರು. ಇದೀಗ ನಮ್ರತಾ ಗೌಡ ಲೆಹೆಂಗಾ ತೊಟ್ಟು ಚೆಂದದ ಪೋಸ್ ಕೊಟ್ಟಿದ್ದು, ಫೋಟೋಗಳು ಫುಲ್ ವೈರಲ್ ಆಗಿದೆ.

37

ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಕಿರುತೆರೆ, ಯೂಟ್ಯೂಬ್​ ಚಾನೆಲ್​ನಲ್ಲಿ ಸದ್ದು ಮಾಡ್ತಿದ್ದ ನಮ್ರತಾ ಗೌಡ, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಚೆಂದದ ಲೆಹೆಂಗಾ ತೊಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ.

47

ಬಿಗ್​ ಬಾಸ್​ ಬೆಡಗಿಯ ಅಂದಕ್ಕೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಬ್ಯೂಟಿಫುಲ್, ಹಾಯ್ ನಾಗಿಣಿ, ಸ್ನೇಹಿತ್‌ನ ಮೀಟ್ ಮಾಡೋಲ್ವಾ, ಕಾರ್ತಿಕ್ ಜೊತೆ ಯಾವಾಗ ಡೇಟಿಂಗ್ ಹೋಗ್ತೀರಾ ಎಂದು ತರೇಹವಾರಿ ಕಮೆಂಟ್ ಮಾಡಿದ್ದಾರೆ. ಜೊತೆಗೆ ನಮ್ರತಾ ಫೋಟೋಗಳಿಗೆ ಲೈಕ್​ಗಳ ಸುರಿಮಳೆಯಾಗಿದೆ. 

57

ನಟನೆಯ ಜೊತೆ ನಮ್ರತಾ ಗೌಡ ಮಾಡೆಲಿಂಗ್ ಕ್ಷೇತ್ರದಲ್ಲಿ ಬಹಳ ಒಳ್ಳೆ ಮಾಡಿದ್ದಾರೆ. ಅನೇಕ ಜಾಹೀರಾತುಗಳಿಗೆ ಮಾಡೆಲ್ ಆಗಿ ಕೆಲಸ ಮಾಡುತ್ತಾ ಒಳ್ಳೆ ಸಂಭಾವನೆ ಕೂಡ ಪಡೆಯುತ್ತಿದ್ದಾರೆ. ಬಿಗ್​ ಬಾಸ್​ ಮನೆಗೆ ಹೋಗಿ ಬಂದ ಬಳಿಕ ನಮ್ರತಾಗೆ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ.

67

ಕನ್ನಡ ಕಿರುತೆರೆಯಲ್ಲಿ ಕೆಲ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ನಮ್ರತಾ ಗೌಡ, ಜೀ ಕನ್ನಡದಲ್ಲಿ ಪ್ರಸಾರವಾಗುವ ನಾಗಿಣಿ 2 ಸೀರಿಯಲ್ ಮೂಲಕ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದಾರೆ. ತಮ್ಮ ಉತ್ತಮ ನಟಿಯಿಂದ ಮನೆ ಮಾತಾಗಿದ್ದರು.

77

ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಮ್ರತಾ ಗೌಡ, ಅನೇಕ ಸೀರಿಯಲ್​ಗಳಲ್ಲಿ ನಟಿಸಿ ಮನೆ ಮಾತಾಗಿದ್ರು. ಇದೀಗ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾದ ಬಳಿಕ ಬಿಗ್ ಬಾಸ್ ನಮ್ಮು ಎಂದೇ ಫೇಮಸ್ ಆಗಿದ್ದಾರೆ. ನಮ್ರತಾಗೆ ಅಭಿಮಾನಿಗಳ ಬಳಗ ಹೆಚ್ಚಾಗಿದೆ.

Read more Photos on
click me!

Recommended Stories