ಕಲರ್ಸ್ ತಾರೆಯರ ರೋಡ್ ಟ್ರಿಪ್ : ವಿಜಯ್ ಜೊತೆ ಗೀತಾ ಓಕೆ, ರಾಮಾಚಾರಿ ಜೊತೆ ನಕ್ಷತ್ರ ಯಾಕೆ?

First Published | Jan 31, 2024, 1:30 PM IST

ಕಲರ್ಸ್ ಕನ್ನಡಲ್ಲಿ ಪ್ರಸಾರವಾಗುತ್ತಿರುವ ವಿವಿಧ ಸೀರಿಯಲ್ ಮೂಲಕವೇ ಜನಪ್ರಿಯತೆ ಗಳಿಸಿದ ನಟರಾದ ಧನುಷ್ ಗೌಡ, ಭವ್ಯ ಗೌಡ, ರಿತ್ವಿಕ್ ಕೃಪಾಕರ್, ವಿಜಯಲಕ್ಷ್ಮಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. 
 

ಕಲರ್ಸ್ ಕನ್ನಡ (Colors Kannada) ಚಾನೆಲ್ ನ ಪ್ರತಿಯೊಂದು ಸೀರಿಯಲ್ಸ್ ಮತ್ತು ಪಾತ್ರಧಾರಿಗಳು ತಮ್ಮ ವಿಭಿನ್ನ ಕಥೆ ಮತ್ತು ಪಾತ್ರಗಳಿಂದ ಈಗಾಗಲೇ ಜನರ ಮನಸ್ಸು ಗೆದ್ದಿದ್ದಾರೆ. ಇದೇ ಕಾರಣಕ್ಕೆ ರಾಜ್ಯದ ಯಾವುದೇ ಮೂಲೆಯಲ್ಲಿ ಕಾರ್ಯಕ್ರಮಗಳು ನಡೆದರೂ ಜನರ ಆಕರ್ಷಣೆಗಾಗಿ ಸೀರಿಯಲ್ ತಾರೆಯರನ್ನೇ ಕರೆಸುತ್ತಾರೆ. 
 

ಸೀರಿಯಲ್ ತಾರೆಯರು (Serial Actor) ಪ್ರತಿದಿನವೂ ತಮ್ಮ ಪಾತ್ರದ ಮೂಲಕ ಜನರ ಮನೆ ಪ್ರವೇಶಿಸಿ ಆ ಮನೆಯಲ್ಲಿ ತಾವು ಒಬ್ಬರಾಗುತ್ತಾರೆ. ಅದೇ ಕಾರಣಕ್ಕೆ ಸೀರಿಯಲ್ ತಾರೆಯರ ಕುರಿತು ಕ್ರೇಜ್ ಕೂಡ ಹೆಚ್ಚಿದೆ. ಇದೀಗ ಕಲರ್ ಕನ್ನಡದ ವಿವಿಧ ಸೀರಿಯಲ್ ತಾರೆಯರು ಸಹ ಜೊತೆಯಾಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾರೆ. 
 

Tap to resize

ಹೂವಿನ ಹಡಗಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗೀತಾ ಸೀರಿಯಲ್ ನಟರಾದ ಧನುಷ್ ಗೌಡ, ಭವ್ಯ ಗೌಡ, ರಾಮಾಚಾರಿ ಖ್ಯಾತಿಯ ರಿತ್ವಿಕ್ ಗೌಡ ಮತ್ತು ಲಕ್ಷಣ ಸೀರಿಯಲ್ ನ ನಕ್ಷತ್ರ ಪಾತ್ರಧಾರಿ ವಿಜಯಲಕ್ಷ್ಮಿ (Vijayalakshmi) ಭಾಗವಹಿಸಿದ್ದಾರೆ. 
 

ಹೂವಿನ ಹಡಗಲಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೆಂಗಳೂರಿನಿಂದ ಜೊತೆಯಾಗಿಯೇ ಹೊರಟ ಈ ತಾರೆಯರು ಸಣ್ಣದಾಗಿ ರೋಡ್ ಟ್ರಿಪ್ (roadtrip )ಮಾಡಿ, ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ಅಲ್ಲದೇ ತಮ್ಮ ಮೋಜು ಮಸ್ತಿಯ ವಿಡಿಯೋ, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

ಭವ್ಯ, ವಿಜಯಲಕ್ಷ್ಮಿ, ರಿತ್ವಿಕ್, ಧನುಷ್ ಜೊತೆಯಾಗಿ ಹಲವಾರು ಫೋಟೊಗಳನ್ನು ಕ್ಲಿಕ್ ಮಾಡಿದ್ದು, ಅನಿರೀಕ್ಷಿತ ಸ್ನೇಹ, ಅನಿರೀಕ್ಷಿತ ರೋಡ್ ಟ್ರಿಪ್ (Road Trip) ಮತ್ತು ಅನಿರೀಕ್ಷಿತ ಬಾಂಡಿಂಗ್ (Bonding) ಎಂದು ಭವ್ಯ ಗೌಡ (Bhavya Gowda) ತಮ್ಮ ಇನ್ ಸ್ಟಾಗ್ರಾಂ (Instagram) ನಲ್ಲಿ ಬರೆದುಕೊಂಡಿದ್ದಾರೆ. 
 

ಗೀತಾ ಸಿರಿಯಲ್ ಖ್ಯಾತಿಯ ಭವ್ಯ ಗೌಡ ಮತ್ತು ಧನುಷ್ ಗೌಡ (Dhanush Gowda) ಸದಾ ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಾರೆ, ಹಾಗಾಗಿಯೇ ಜನರು ಗೀತಾ ಜೊತೆ ವಿಜಯ್ ಓಕೆ, ಆದರೆ ರಾಮಾಚಾರಿ ಜೊತೆ ನಕ್ಷತ್ರ ಯಾಕಿದ್ದಾರೆ, ಚಾರು ಯಾಕಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. 
 

ಇನ್ನೂ ಕೆಲವರು ಭವ್ಯ ಗೌಡರನ್ನು ಸೌಂದರ್ಯ ದೇವತೆ ಎಂದರೆ, ಹಲವರು ಧನುಷ್ ಮತ್ತು ರಿತ್ವಿಕ್ (Ritwik Krupakar)ಪ್ರೆಂಡ್ ಶಿಪ್ ಬೆಸ್ಟ್. ನೀವಿಬ್ಬರು ಯಾವಾಗಲೂ ಹೀಗೆ ಇರಿ. ಇಬ್ಬರು ಹೀರೋಗಳನ್ನು ಜೊತೆಯಾಗಿ ನೋಡೋದೆ ಕಣ್ಣಿಗೆ ಹಬ್ಬ ಎಂದು ಬರೆದಿದ್ದಾರೆ. 
 

ಸದ್ಯ ನಾಲ್ಕು ಜನ ಸೀರಿಯಲ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಲಕ್ಷಣ ಸೀರಿಯಲ್ ಮುಗಿದ ಬಳಿಕ ಇದೀಗ ವಿಜಯಲಕ್ಷ್ಮೀ ಉದಯಟಿವಿಯಲ್ಲಿ ಪ್ರಸಾರವಾಗಲಿರುವ ಮೈನಾ ಸೀರಿಯಲ್ ನಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 
 

Latest Videos

click me!