9ನೇ ತಿಂಗಳಿಗೆ ಕಾಲಿಟ್ಟ ಕವಿತಾ ಗೌಡ ಫೋಟೊ ಶೂಟ್ ವೈರಲ್… ಸೀಮಂತ ಮಾಡ್ತಿದ್ರೆ ಚೆನ್ನಾಗಿತ್ತು ಎಂದ ಅಭಿಮಾನಿ

First Published | Sep 2, 2024, 2:41 PM IST

ಕಿರುತೆರೆ ನಟಿ ಕವಿತಾ ಗೌಡ ಮತ್ತು ಚಂದನ್ ಕುಮಾರ್ ಇನ್ನೇನು ಪೋಷಕರಾಗಿ ಭಡ್ತಿ ಪಡೆಯಲಿದ್ದು, ಇಬ್ಬರು ಜೊತೆಯಾಗಿ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ. 
 

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಚಿನ್ನು ಆಗಿ ಕನ್ನಡಿಗರ ಮನ ಗೆದ್ದ ನಟಿ ಕವಿತಾ ಗೌಡ (Kavitha Gowda), ಇದೀಗ ತಾಯಿಯಾಗುವ ಸಂಭ್ರಮದಲ್ಲಿದ್ದು, ಒಂಭತ್ತನೇ ತಿಂಗಳಿಗೆ ಕಾಲಿಟ್ಟಿದ್ದು, ತಮ್ಮ ಪ್ರೆಗ್ನೆನ್ಸಿಯನ್ನು ಎಂಜಾಯ್ ಮಾಡುತ್ತಿರುವ ಅಕ್ವಿತಾ, ಪತು ಜೊತೆಗೆ ಮೆಟರ್ನಿಟಿ ಫೋಟೊ ಶೂಟ್ ಮಾಡಿಸಿದ್ದು, ಮುದ್ದಾದ ಫೋಟೊವನ್ನು ಶೇರ್ ಮಾಡಿದ್ದಾರೆ. 

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲೇ ಕವಿತಾ ಮತ್ತು ಚಂದನ್ (Chandan)  ಜೊತೆಯಾಗಿ ನಟಿಸುತ್ತಿದ್ದರು, ಇಬ್ಬರು ಪ್ರೀತಿಸಿ ಕೊರೊನಾ ಸಮಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಇಬ್ಬರು ನಟನೆಯಿಂದ ಬ್ರೇಕ್ ತೆಗೆದುಕೊಂಡು, ತಮ್ಮ ಬ್ಯುಸಿನೆಸ್ ನೋಡಿಕೊಳ್ಳುತ್ತಿದ್ದರು. ಸೋಶಿಯಲ್ ಮಿಡಿಯಾದಲ್ಲಿ ಮಾತ್ರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಜೋಡಿ ಇದೀಗ ತಾವು ಪೋಷಕರಾಗುವುದಾಗಿ ಹೇಳಿಕೊಂಡ ಬಳಿಕ, ಜೊತೆಯಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬೊಂಬಾಟ್ ಭೋಜನ, ನೇಹಾ ಗೌಡ ಸೀಮಂತ ಸಮಾರಂಭದಲ್ಲೂ ತುಂಬು ಗರ್ಭಿಣಿ ಕವಿತಾ ಕಾಣಿಸಿಕೊಂಡಿದ್ದಾರೆ. 
 

Tap to resize

ಪ್ರೆಗ್ನೆನ್ಸಿಯಲ್ಲಿ ಫೋಟೊ ಶೂಟ್ (maternity photoshoot) ಮಾಡಿಸೋದು ಈಗ ಟ್ರೆಂಡ್ ಆಗಿದೆ. ಇತ್ತೀಚೆಗೆ ನೇಹಾ ಗೌಡ, ಮಿಲನಾ ನಾಗರಾಜ್ ಮುದ್ದಾಗಿ ಫೋಟೊ ಶೂಟ್ ಮಾಡಿಸಿಕೊಂಡಿದ್ದರು. ಇದೀಗ ಕವಿತಾ ಮತ್ತು ಚಂದನ್ ಕೂಡ ಜೊತೆಯಾಗಿ ತುಂಬಾ ಮುದ್ದಾದ ಫೋಟೊ ಶೂಟ್ ಮಾಡಿಸಿದ್ದು, ಇಬ್ಬರನ್ನು ಫೋಟೊ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. 
 

ಕೆಲವು ದಿನಗಳ ಹಿಂದೆ ಹಳದಿ ಬಣ್ಣದ ಗೌನ್‌ನೊಂದಿಗೆ ಕವಿತಾ ಗೌಡ ಮತ್ತು ಚಂದನ್‌ ಕುಮಾರ್‌ ಕಪ್ಪು ಬಣ್ಣದ ಸ್ವೆಟ್‌ ಟಿ ಶರ್ಟ್‌ ಹಾಗೂ ನೀಲಿ ಬಣ್ಣದ ಜೀನ್ಸ್‌ ಧರಿಸಿ ಪ್ರಗ್ನೆನ್ಸಿ ಫೋಟೋ ಶೂಟ್‌ ಮಾಡಿಸಿದ್ದರು, ಈ ಫೋಟೊಗಳು ಸಖತ್ ವೈರಲ್ ಆಗಿದ್ದವು. ಇದೀಗ ಅದಕ್ಕಿಂತಲೂ ತುಂಬಾನೆ ಮುದ್ದಾದ ಫೋಟೊ ಶೂಟ್ ಮಾಡಿಸಿದ್ದು, ಇದು ಕೂಡ ವೈರಲ್ ಆಗುತ್ತಿದೆ. 

ಕೆರೆಯಂಚಲ್ಲಿ ಕುಳಿತು ಕವಿತಾ ಗೌಡ ಹಾಗೂ ಚಂದನ್ ಹೊಸ ಫೋಟೋಶೂಟ್ (Photoshoot) ಮಾಡಿಸಿದ್ದಾರೆ. ಕವಿತಾ ತಿಳಿ ಗುಲಾಬಿ ಬಣ್ಣದ ಸ್ಲೀವ್ ಲೆಸ್ ಗ್ಲೌನ್ ಧರಿಸಿದರೆ, ಚಂದನ್ ಬಿಳಿ ಬಣ್ಣದ ಶರ್ಟ್, ನೀಲಿ ಜೀನ್ಸ್ ಧರಿಸಿದ್ದಾರೆ. ಚಂದನ್ ಈ ಫೋಟೊವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಒಂಬತ್ತನೇ ತಿಂಗಳು ಪ್ರಾರಂಭ ಎಂದು ಬರೆದುಕೊಂಡಿದ್ದಾರೆ. 
 

ಇನ್ನೊಂದು ಫೋಟೊ ಶೇರ್ ಮಾಡಿರುವ ಚಂದನ್ ಒಂಭತ್ತನೆ ತಿಂಗಳ ಆರಂಭ, ಈ ಸಮಯವು ಇಷ್ಟೊಂದು ಎಕ್ಸೈಟ್’ಮೆಂಟ್ ನಿಂದ ತುಂಬಿರುತ್ತೆ ಹಾಗೂ ಇಷ್ಟೊಂದು ಸಂತೋಷದಿಂದ ಕೂಡಿರುತ್ತೆ ಅಂತ ಅಂದುಕೊಂಡಿರಲಿಲ್ಲ. ನಮ್ಮ ಮುಂದಿನ ಜನರೇಶನ್ ನೋಡೋದಕ್ಕೆ ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. 
 

ಅಭಿಮಾನಿಗಳು ತುಂಬು ಗರ್ಭಿಣಿಗೆ ಹಾರೈಸಿದ್ದು, ಮುದ್ದಾದ ಕೃಷ್ಣ ಬರಲಿ, ಲಕ್ಷ್ಮೀ ಬರಲಿ, ಆರೋಗ್ಯಯಯುತ ಮಗುವಿನ ಜನನವಾಗಲಿ ಎಂದು ಶುಭ ಕೋರಿದ್ದಾರೆ. ಮತ್ತೊಂದು ಎಲ್ಲಾ ಚೆನ್ನಾಗಿದೆ ಒಂದು ಸೀಮಂತ ಮಾಡ್ತಿದ್ರೆ ಇನ್ನೂ ಚೆನ್ನಾಗಿರ್ತಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. 
 

Latest Videos

click me!