ಕೀರ್ತಿ ಸತ್ಯದ ಸಮಾಧಿ ಮೇಲೆ ಜೀವನ ಆರಂಭಿಸಲು ಹೊರಟಿರೋ ವೈಷ್ಣವ್ - ಲಕ್ಷ್ಮೀಗೆ ಛೀಮಾರಿ ಹಾಕ್ತಿದ್ದಾರೆ ವೀಕ್ಷಕರು

First Published | Sep 2, 2024, 1:11 PM IST

ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಹೊಸ ಪ್ರೋಮೊ ಬಿಡುಗಡೆಯಾಗಿದ್ದು, ಪ್ರೊಮೋ ನೋಡಿರೋ ವೀಕ್ಷಕರು ಲಕ್ಷ್ಮೀ ಮತ್ತು ವೈಷ್ಣವ್ ಮೇಲೆ ಗರಂ ಆಗಿದ್ದಾರೆ, ಅಲ್ಲದೇ ಕೀರ್ತಿಯನ್ನು ಸಂಪೂರ್ಣವಾಗಿ ಮರೆತ ವೈಷ್ಣವ್ ಛೀಮಾರಿ ಹಾಕ್ತಿದ್ದಾರೆ. 
 

ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯ ಹೊಸದಾದ ಪ್ರೊಮೋ ಇದೀಗ ಬಿಡುಗಡೆಯಾಗಿದ್ದು, ಲಕ್ಷ್ಮೀ ಮತ್ತು ವೈಷ್ಣವ್ ಜೊತೆಯಾಗಿ ಕುಳಿತು ಮನದಾಳದ ಮಾತುಗಳನ್ನಾಡುತ್ತಿದ್ದಾರೆ. ನಿಮ್ಮನ್ನ ನನ್ನಿಂದ ಕಳೆದುಕೊಳ್ಳೊಕೆ ಇನ್ನು ನಾನು ಬಿಡಲ್ಲ, ಈ ಕ್ಷಣ ಈ ಜನ್ಮಕ್ಕೆ ಸಾಕು ಮಹಾಲಕ್ಷ್ಮಿಎನ್ನುತ್ತಾ ಲಕ್ಷ್ಮೀ ಹಣೆಗೆ ಮುತ್ತನಿಡುತ್ತಾನೆ. 
 

ಇನ್ನೊಂದೆಡೆ ಎಲ್ಲಾ ತಪ್ಪನ್ನು ಮಾಡಿ, ಇದೀಗ ಕೀರ್ತಿ ಭೂಟದ ಬಗ್ಗೆ ಹೆದರಿರುವ ಕಾವೇರಿ, ಲಕ್ಷ್ಮೀಯನ್ನು ಮಂತ್ರವಾದಿಗಳ ಬಳಿ ಕರೆದುಕೊಂಡು ಹೋಗಿ, ಅವಳ ಮೈಮೇಲೆ ಬಂದಿರುವ ಭೂತವನ್ನು ಬಿಡಿಸುವ ಯತ್ನ ಮಾಡ್ತಿದ್ದಾರೆ. ಇದನ್ನೆಲ್ಲ ನೋಡಿ ವೀಕ್ಷಕರು ಕೋಪಗೊಂಡಿದ್ದು, ವೈಷ್ಣವ್ ಮತ್ತು ಲಕ್ಷ್ಮೀ (Lakshmi and Vaishnav) ಮೇಲೆ ಅದರಲ್ಲೂ ಕೀರ್ತಿಯನ್ನು ಸಂಪೂರ್ಣವಾಗಿ ಮರೆತ ವೈಷ್ಣವ್ ಮೇಲೆ ಕಿಡಿ ಕಾರುತ್ತಿದ್ದಾರೆ. 
 

Tap to resize

ವೀಕ್ಷಕರ ಕಾಮೆಂಟ್ (viewers comment) ನೋಡಿದ್ರೆ, ಅವರು ಲಕ್ಷ್ಮೀ ಬಾರಮ್ಮ ಧಾರಾವಾಹಿಯನ್ನ ಯಾವ ರೀತಿ ಪರ್ಸನಲ್ ಆಗಿ ತೆಗೆದುಕೊಂಡಿದ್ದಾರೆ, ಅಥವಾ ಲಕ್ಷ್ಮೀ ಬಾರಮ್ಮ ಧಾರಾವಾಹಿ ಯಾವ ರೀತಿ ಜನರ ಮೇಲೆ ಪರಿಣಾಮ ಬೀರಿದೆ ಅನ್ನೋದನ್ನ ಕಾಣಬಹುದು. ಲಕ್ಷ್ಮೀ ಮತ್ತು ವೈಷ್ಣವ್ ಗೆ ವೀಕ್ಷಕರು ಛೀಮಾರಿ ಹಾಕಿದ ಒಂದಷ್ಟು ಕಾಮೆಂಟ್ ಗಳು ಇಲ್ಲಿವೆ. ನಿಮಗೂ ಹೀಗೆ ಅನಿಸ್ತಿದೆಯಾ? ಹೆಳಿ.. 
 

ಒಬ್ಬರು ವೀಕ್ಷಕರು ಕೀರ್ತಿ ಸತ್ಯದ ಸಮಾಧಿ ಮೇಲೆ ಇವರಿಬ್ಬರ ಜೀವನ ಶುರುಮಾಡಿರೋದಾಗಿ ಹೇಳಿದ್ರೆ ಮತ್ತೊಬ್ಬರು ಕೀರ್ತಿ ಸತ್ತಿರೋ ದುಃಖ ವೈಷ್ಣವ್ ಗೆ ಸ್ವಲ್ಪಾನೂ ಇಲ್ಲ, ಇದೆಂತ ಪ್ರೀತಿ ಅಂದಿದ್ದಾರೆ. ಅಲ್ಲದೇ ದಯವಿಟ್ಟು ಸೀರಿಯಲ್ ನಿಲ್ಲಿಸಿ, ಈ ಸೀರಿಯಲ್ ನಲ್ಲಿ ನಿಜವಾದ ಪ್ರೀತಿಗೆ ಬೆಲೆನೆ ಇಲ್ಲ ಅಂದ್ರೆ, ಮತ್ತೊಬ್ಬರು  ಕೀರ್ತಿ ಗೆ ಅನ್ಯಾಯ ಮಾಡಿ ಈಗ ಲಕ್ಷ್ಮೀ ಜೊತೆ ರೊಮ್ಯಾನ್ಸ್ ಮಾಡುತ್ತಿರುವ ವೈಷ್ಣವ್ ವಿರುದ್ಧ ಕಿಡಿ ಕಾರಿದ್ದು, ಈ ಸೀರಿಯಲ್ ನಲ್ಲಿ ಕೀರ್ತಿ ಗೆ ಮೋಸ ಮಾಡಿದ್ದಾರೆ. ಈ ಕುಟುಂಬ ಸರಿ ಇಲ್ಲ. ಜಸ್ಟೀಸ್ ಫಾರ್ ಕೀರ್ತಿ. ಕೀರ್ತಿ ಗೆ ನ್ಯಾಯ ಸಿಗಬೇಕು ಅಷ್ಟೇ ಎಂದಿದ್ದಾರೆ. 
 

ಇನ್ನೊಬ್ಬರು ವೈಷ್ಣವ್ ನಿಜವಾಗಿಯೂ ಕೀರ್ತಿಯನ್ನು (Keerthi) 10% ಆದ್ರೂ ಲವ್ ಮಾಡಿದ್ರೆ, ಅವಳ ಸಾವು ಹೇಗಾಯ್ತು ಅಂತ ತಿಳ್ಕೊಳ್ಳೋದಕ್ಕೆ, ಅವಳ ಬಗ್ಗೆ ಸ್ವಲ್ಪನಾದ್ರೂ ಯೋಚನೆ ಮಾಡ್ಬೇಕಿತ್ತು. ವೈಷ್ಣವ್ ನ ಹೀರೋ ತರ ನೇ ತೋರ್ಸಿ ಹೀಗೆ ತೋರಿಸ್ಬೇಡಿ ಅಂದ್ರೆ ಮತ್ತೊಬ್ಬರು ಕೀರ್ತಿ ಇಲ್ಲ ಆದ್ರೂ, ವೈಷ್ಣವ್ ಕೀರ್ತಿನ ಮರೆತು ಚೆನ್ನಾಗಿದ್ದಾನೆ, ಈ ಧಾರಾವಾಹಿನೆ ಬೇಡ, ಇಲ್ಲಿ ನಿಜವಾದ ಪ್ರೀತಿಗೆ ಬೆಲೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 
 

ಅಷ್ಟೇ ಅಲ್ಲ ಥೂ ವೈಷ್ಣವ ನಿಂದು ಒಂದು ಜನ್ಮನಾ, ಒಂದು ಹುಡುಗಿ ಮೋಸ ಮಾಡಿ ಈಗ ಲಕ್ಷ್ಮಿ ಜೊತೆ ರೋಮ್ಯಾನ್ಸ್ ಮಾಡ್ತಾ ಇದ್ದೀಯಲ್ವಾ? ನೀನು ಕೀರ್ತಿನಾ ನಿಜವಾಗಲೂ ಪ್ರೀತಿಸಿದ್ದೀಯ ಅಥವಾ ನಿಮ್ಮಮ್ಮನ್ ತರ ನಾಟಕ ಮಾಡ್ತಾ ಇದ್ಯಾ? ನಿಜವಾದ ಪ್ರೀತಿಗೆ ಬೆಲೆನೇ ಇಲ್ಲ ಗುರು. ಥೂ ನಿನ್ ಜನ್ಮಕಿಷ್ಟು ಅಂತ ಮಂಗಳಾರತಿ ಕೂಡ ಮಾಡಿದ್ದಾರೆ. 
 

ಇನ್ನೊಬ್ಬ ಸೀರಿಯಲ್ (Serial) ಅಭಿಮಾನಿಯಂತೂ ಇದೇನೂ ನಿಜ ಜೀವನದಲ್ಲಿ ನಡೆದೇ ಬಿಟ್ಟಿದೆ ಎನ್ನುವಂತೆ… ಅತ್ತ ಕೀರ್ತಿ ಜೀವನ ಸರ್ವನಾಶ ಮಾಡಿ, ಜೀವ ಸಮಾಧಿ ಮಾಡಿ ಇತ್ತ ಲಕ್ಷ್ಮೀ ಜೀವನ ಕಟ್ಟೋಕೆ ನೋಡ್ತಾ ಇದ್ದಾರೆ.ಇದಕ್ಕೇನಾ ಸ್ವಲ್ಪ ದಿನದ ಮಟ್ಟಿಗೆ ಕೀರ್ತಿನಾ ಕಣ್ಮರೆ ಮಾಡಿದ್ದು? ಒಂದು ಹೆಣ್ಣಿನ ಜೀವನ ಅನ್ಯಾಯವಾಗಿ ಹಾಳು ಮಾಡಿ ಅದರ ಮೇಲೆ ಇನ್ನೊಂದು ಹೆಣ್ಣಿನ ಜೀವನ ಕಟ್ಟೋಕೆ ನೋಡೋದು ಎಷ್ಟು ಸರಿ? ಮೂವರೂ ಸೇರಿ ಮಾಡೋ ನಿರ್ಧಾರದಿಂದ ಕೊನೆಗೂ ಪಲಾಯನ ಮಾಡಿದ್ರಾ? ಅದಕ್ಕೆ ಸತ್ಯ ಗೊತ್ತಾಗೋ ಮೊದ್ಲೇ ಲಕ್ಷ್ಮೀ ಜೀವನ ಶುರು ಮಾಡೋಕೆ ನೋಡ್ತಾ ಇದ್ದೀರಾ?ಲ ಕ್ಷ್ಮಿಗೆ ಒಳ್ಳೇದಾಗಬೇಕು ಅಂಥ ಕೀರ್ತಿಯ ಜೀವನದಲ್ಲಿ ಇಷ್ಟೆಲ್ಲಾ ಅನ್ಯಾಯ ಮಾಡೋ ಅಗತ್ಯವಿತ್ತೇ? ಇಲ್ಲಿ ಇಷ್ಟರವರೆಗೆ ನಡೆದಿದ್ದೆಲ್ಲವೂ ನ್ಯಾಯಯುತವಾಗಿದೆಯೇ? ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. 
 

Latest Videos

click me!