9 ವರ್ಷದ ಬಳಿಕ ಮತ್ತೆ ಬರ್ತಿದ್ದಾರೆ 90ರ ದಶಕದ ಸೂಪರ್ ಹೀರೋ ಶಕ್ತಿಮಾನ್!

Published : Nov 11, 2024, 07:54 PM ISTUpdated : Nov 11, 2024, 07:55 PM IST

90ರ ದಶಕದ ಮಕ್ಕಳ ಫೇವರಿಟ್, ಭಾರತದ ಮೊದಲ ಸೂಪರ್ ಹೀರೋ ಶಕ್ತಿಮಾನ್ ಮತ್ತೆ ಬರುತ್ತಿದ್ದಾರೆ. ಬರೋಬ್ಬರಿ 9 ವರ್ಷಗಳ ಬಳಿಕ ಶಕ್ತಿಮಾನ್ ಮೋಡಿ ಮಾಡಲು ಆಗಮಿಸುತ್ತಿದ್ದಾರೆ. 

PREV
14
9 ವರ್ಷದ ಬಳಿಕ ಮತ್ತೆ ಬರ್ತಿದ್ದಾರೆ 90ರ ದಶಕದ ಸೂಪರ್ ಹೀರೋ ಶಕ್ತಿಮಾನ್!
ಶಕ್ತಿಮಾನ್, ಮುಖೇಶ್ ಖನ್ನಾ

ಶಕ್ತಿಮಾನ್ ಸೀರಿಯಲ್ 90ರ ದಶಕದ ಪ್ರತಿಯೊಬ್ಬರಿಗೂ ತಿಳಿದಿದೆ. ಅಷ್ಚರಮಟ್ಟಿಗೆ ಶಕ್ತಿಮಾನ್ ಮೋಡಿ ಮಾಡಿದ ಸೀರಿಯಲ್.ಇದೀಗ ಅಧೇ ಶಕ್ತಿ ಮಾನ್ ಮತ್ತೆ ಬರುುತ್ತಿದೆ. ಭಾರತದ ಮೊದಲ ಸೂಪರ್ ಹೀರೋ ಶಕ್ತಿಮಾನ್ ಮತ್ತೆ ತೆರೆಗೆ ಅಪ್ಪಳಿಸುತ್ತಿದೆ..  90ರ ದಶಕದಲ್ಲಿ ಬಂದಿದ್ದ ಶಕ್ತಿಮಾನ್ ಸೀರಿಯಲ್ ಮತ್ತೆ ಪ್ರಸಾರವಾಗಲಿದೆ. 

24
ಶಕ್ತಿಮಾನ್ ವಾಪಸ್ ಬರ್ತಿದ್ದಾರೆ

 1997 ರಿಂದ 2005 ರವರೆಗೆ ಸುಮಾರು 8 ವರ್ಷಗಳ ಕಾಲ ಮಕ್ಕಳಿಗೆ ಅಚ್ಚುಮೆಚ್ಚಿನ ಸೀರಿಯಲ್ ಆಗಿ ಶಕ್ತಿಮಾನ್ ಜನಪ್ರಿಯತೆ ಗಳಿಸಿತ್ತು . ಮಕ್ಕಳು ಮಾತ್ರವಲ್ಲ ಪೋಷಕರು ಸೇರಿದಂತೆ ಕುಟುಂಬ ವರ್ಗ ಈ ಸೀರಿಯಲ್ ನೋಡಿ ಖುಷಿ ಪಟ್ಟಿತ್ತು. ಸುದೀರ್ಘ ವರ್ಷಗಳ ಕಾಲ ಶಕ್ತಿಮಾನ್ ಸೀರಿಯಲ್ ಮಕ್ಕಳ ಮನಸ್ಸನ್ನು ಹಿಡಿದಿಟ್ಟುಕೊಂಡಿತ್ತು. 

34
ಶಕ್ತಿಮಾನ್ ಟೀಸರ್

ಶಕ್ತಿಮಾನ್ ನಿಂತು 9 ವರ್ಷಗಳಿಗಿಂತ ಹೆಚ್ಚು ಸಮಯ ಕಳೆದ ನಂತರ, ಈಗ ಮತ್ತೆ ವಾಪಸ್ ಬರಲಿದೆ. ಈ ಬಗ್ಗೆ ಮುಖೇಶ್ ಖನ್ನಾ ಪ್ರಮುಖ ಘೋಷಣೆ ಮಾಡಿದ್ದಾರೆ. ಇದೀಗ ಎಲ್ಲೆಡೆ ಶಕ್ತಿಮಾನ್ ಚರ್ಚೆಯಾಗುತ್ತಿದೆ. ಶಕ್ತಿಮಾನ್ ಸೀರಿಯಲ್ ಇದೀಗ ಪ್ರಸಕ್ತ ದಶಕದ ಮಕ್ಕಳನ್ನು ಮೋಡಿ ಮಾಡಲು ಸಜ್ಜಾಗಿದೆ. 

44
ಶಕ್ತಿಮಾನ್ ವಾಪಸ್ ಬರ್ತಿದ್ದಾರೆ

ಶಕ್ತಿಮಾನ್ ಬಗ್ಗೆ ಮುಖೇಶ್ ಖನ್ನಾ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಘೋಷಿಸಿದ್ದಾರೆ.  ಬೀಷ್ಮ್ ಇಂಟರ್ನ್ಯಾಷನಲ್ ಯೂಟ್ಯೂಬ್ ಚಾನೆಲ್‌ನಲ್ಲಿ  ಟೀಸರ್ ಬಿಡುಗಡೆ ಮಾಡಲಾಗಿದೆ. ಹಳೇ ಖದರ್, ಹೊಸ ಮಕ್ಕಳನ್ನು ಮಂತ್ರಮುಗ್ದರನ್ನಾಗಿ ಮಾಡಲು ಮುಖೇಶ್ ಖನ್ನಾ ಎಲ್ಲಾ ತಯಾರಿ ನಡೆಸಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories