ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ನಟಿ ಸಾನ್ಯಾ ಅಯ್ಯರ್

First Published | Apr 15, 2024, 4:15 PM IST

ಬಿಗ್ ಬಾಸ್ ಸೀಸನ್ 9ರ ಮೂಲಕ ಜನಪ್ರಿಯತೆಗಳಿಸಿದ ನಟಿ ಸಾನ್ಯಾ ಅಯ್ಯರ್,  ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಸನ್ನಿಧಿಗೆ ತೆರಳಿ, ದೇವಿ ದರ್ಶನ ಪಡೆದಿದ್ದಾರೆ. 
 

ಪುಟ್ಟಗೌರಿ ಮದುವೆ ಖ್ಯಾತಿಯ ಸಾನ್ಯಾ ಅಯ್ಯರ್ (Saanya Iyer) ಇತ್ತೀಚೆಗೆ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಸನ್ನಿಧಿಗೆ ಭೇಟಿ ನೀಡಿದ್ದರು. ಟ್ರೆಡಿಶನಲ್ ಲುಕ್ ನಲ್ಲಿ ಕಂಗೊಳಿಸಿದ ಸಾನ್ಯಾ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

ತಮ್ಮ ತಾಯಿ ದೀಪಾ ಅಯ್ಯರ್ (Deepa Iyer) ಜೊತೆ ಹೊರನಾಡು ಕ್ಷೇತ್ರಕ್ಕೆ ಭೇಟಿ ನೀಡಿರುವ ಸಾನ್ಯಾ ಅಲ್ಲಿ ತೆಗೆಸಿಕೊಂಡಿರುವ ಫೋಟೋಗಳನ್ನು ಹಂಚಿಕೊಂಡು ಭಿಕ್ಷಾಂ ದೇಹಿ ಕೃಪಾವಲಂಬನಕರೀ ಮಾತಾನ್ನಪೂರ್ಣೇಶ್ವರೀ ಎಂದು ಕ್ಯಾಪ್ಶನ್ ಹಾಕಿದ್ದಾರೆ. 
 

Tap to resize

ಆದಿಶಕ್ತಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನ ಅಥವಾ ಶ್ರೀ ಕ್ಷೇತ್ರ ಹೊರನಾಡು ದೇವಸ್ಥಾನ (Horanadu Temple) ಎಂದೂ ಕರೆಯುತ್ತಾರೆ. ಈ ದೇಗುಲ ಚಿಕ್ಕಮಗಳೂರಿನಿಂದ ಸುಮಾರು 100 ಕಿಮೀ ದೂರದಲ್ಲಿರುವ ಹೊರನಾಡಿನಲ್ಲಿದೆ. ಅಗಸ್ತ್ಯ ಮುನಿಗಳು ಈ ದೇಗುಲ ನಿರ್ಮಾಣ ಮಾಡಿದ್ದಾರೆ ಎನ್ನಲಾಗಿದೆ. 

ಸದ್ಯ ಗೌರಿ ಸಿನೆಮಾದ ಬಿಡುಗಡೆಯ ಕಾತುರದಲ್ಲಿರುವ ಸಾನ್ಯಾ ಅಯ್ಯರ್, ಈ ಹಿನ್ನೆಯಲ್ಲಿ ದೇಗುಲ ದರ್ಶನ ಮಾಡಿ ಕೃತಾರ್ಥರಾಗಿದ್ದಾರೆ. ಗೌರಿ ಸಿನಿಮಾ ಮೇ ತಿಂಗಳ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. 
 

ಕೆಂಪು ಬಣ್ಣದ ಸೀರೆಯುಟ್ಟಿರುವ ಸಾನ್ಯಾ, ಅದಕ್ಕೆ ಮ್ಯಾಚ್ ಆಗುವ ಗ್ರೀನ್ ಬ್ಲೌಸ್ ಧರಿಸಿದ್ದಾರೆ. ತುಂಬಾ ಮುದ್ದಾಗಿ ಕಾಣಿಸುತ್ತಿರುವ ನಟಿಗೆ, ಅಭಿಮಾನಿಗಳು ಸಹ ತಮ್ಮ ಮೆಚ್ಚಿನ ನಟಿಯ ಲುಕ್‌ಗೆ ಫಿದಾ ಆಗಿದ್ದಾರೆ. 
 

ರೆಡ್ ಹಾಟ್ ಚಿಲ್ಲಿ ತರ ಕಾಣಿಸ್ತಿದ್ದೀರಾ. ತುಂಬಾನೆ ಸುಂದರವಾಗಿ ಕಾಣಿಸುತ್ತೀರಿ. ತುಂಬಾ ಕ್ಯೂಟ್ ಆಗಿ ಕಾಣಿಸುತ್ತಿದ್ದೀರಿ. ಅಲ್ಲದೇ ನಿಮ್ಮ ನಗುವಿನ ಮೂಲಕ ನಮ್ಮ ಹೃದಯವನ್ನು ಕದಿಯುತ್ತಿದ್ದೀರಿ ಎಂದು ಸಹ ಹೇಳಿದ್ದಾರೆ. 

ಹೆಚ್ಚಾಗಿ ಮಾಡರ್ನ್ ಅವತಾರದಲ್ಲಿ ಕಾಣಿಸಿಕೊಳ್ಳುವ ಸಾನ್ಯಾ ಅಯ್ಯರ್, ಇದೀಗ ಸಾಂಪ್ರದಾಯಿಕವಾಗಿ ಕಾಣಿಸಿರೋದು ಅಭಿಮಾನಿಗಳಿಗೆ ಖುಷಿ ನೀಡಿದೆ. ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಚಿತ್ರದಲ್ಲಿ ಸಮರ್ಜಿತ್ ಲಂಕೇಶ್ ಗೆ ನಾಯಕಿಯಾಗಿ ನಟಿಸುತ್ತಿರುವ ಈ ಹೊಸ ಚಿತ್ರದ ಬಗ್ಗೆ ಭಾರಿ ಕುತೂಹಲ ಮೂಡಿದೆ. 

Latest Videos

click me!