‘ಕೃಷ್ಣ ರುಕ್ಮಿಣಿ ಅಂಜನಾ ಮತ್ತೆ ಕಿರುತೆರೆಗೆ ವಾಪಾಸ್

First Published | Apr 12, 2024, 8:08 AM IST

ಕನ್ನಡ ಕಿರುತೆರೆಯಲ್ಲಿ ಭಾರಿ ಸದ್ದು ಮಾಡಿದ್ದ ಧಾರಾವಾಹಿಗಳಲ್ಲಿ ಒಂದಾದ ಕೃಷ್ಣ ರುಕ್ಮಿಣಿ ಸೀರಿಯಲ್ ನಲ್ಲಿ ಡಾರ್ಲಿಂಗ್ ಕೃಷ್ಣನಿಗೆ ನಾಯಕಿಯಾಗಿ ನಟಿಸಿದ್ದ ನಟಿ ಅಂಜನಾ ಶ್ರೀನಿವಾಸ್ ಇದೀಗ ಅನೇಕ ವರ್ಷಗಳ ಬಳಿಕ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. 
 

ಹಲವು ವರ್ಷಗಳ ಹಿಂದೆ ಕನ್ನಡ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ಕೃಷ್ಣ ರುಕ್ಮಿಣಿ (Krishna Rukmini) ಸೀರಿಯಲ್ ನೆನಪಿದ್ಯಾ? ಖಂಡಿತಾ ನೆನಪಿರಲೇ ಬೇಕು ಅಲ್ವಾ? ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿದ್ದ ಮೊದಲ ಸೀರಿಯಲ್ ಇದು, ಈ ಸೀರಿಯಲ್ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಹಾಗಾಗಿ ಸುನೀಲ್ ಕುಮಾರ್ ಆಗಿದ್ದವರು ಕೃಷ್ಣ ಆಗಿ, ಮುಂದೆ ಅದನ್ನೇ ತಮ್ಮ ಹೆಸರನ್ನಾಗಿಸಿ, ಸದ್ಯ ಕನ್ನಡ ಸಿನಿಮಾದಲ್ಲಿ ಜನಪ್ರಿಯತೆ ಪಡೆಯುತ್ತಿದ್ದಾರೆ ಡಾರ್ಲಿಂಗ್ ಕೃಷ್ಣ (Darling Krishna). 
 

ಈ ಸೀರಿಯಲ್ ನಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ಅಂದರೆ ರುಕ್ಮಿಣಿಯಾಗಿ ನಟಿಸಿದ್ದವರು ಅಂಜನಾ ಶ್ರೀನಿವಾಸ್ (Anjana Shrinivas). ಈ ಸೀರಿಯಲ್ ಬಳಿಕ ಕೃಷ್ಣ ಕನ್ನಡ ಸಿನಿಮಾದಲ್ಲಿ ಬ್ಯುಸಿಯಾದರೆ, ಅಂಜನಾ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರು. ಇದೀಗ ಮತ್ತೆ ಹೊಸ ಧಾರಾವಾಹಿ ಮೂಲಕ ಅಂಜನಾ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. 
 

Tap to resize

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಜಾನಕಿ ಸಂಸಾರ' (Janaki Samsara) ಎನ್ನುವ ಹೊಸ ಧಾರಾವಾಹಿಯಲ್ಲಿ ನಾಯಕಿ ಜಾನಕಿಯಾಗಿ ಅಂಜನಾ ನಟಿಸುತ್ತಿದ್ದಾರೆ. ಸೀರಿಯಲ್ ಪ್ರೋಮೋ ಇದೀಗ ಬಿಡುಗಡೆಯಾಗಿದ್ದು, ಅಂಜನಾ ಅವರನ್ನು ಬಹಳ ವರ್ಷಗಳ ಬಳಿಕ ಮತ್ತೆ ಕನ್ನಡ ಕಿರುತೆರೆಯಲ್ಲಿ ನೋಡಿದ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. 
 

‘ಜಾನಕಿ ಸಂಸಾರ’ ಕೂಡು ಕುಟುಂಬದ ಕಥೆಯಾಗಿದೆ. ಅಂಜನಾ ಅವರು ಜಾನಕಿ ಪಾತ್ರ ಮಾಡುತ್ತಿದ್ದು, ಸೂರಜ್ ಹೊಳ್ಳ (Suraj Holla) ಈ ಧಾರಾವಾಹಿಯ ನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಇವರ ಮಗಳಾಗಿ ನಮ್ಮ ಲಚ್ಚಿ ಸೀರಿಯಲ್ ನಲ್ಲಿ ದಿಯಾ ಆಗಿ ನಟಿಸಿದ್ದ ಶ್ರೀದಿಶಾ ನಟಿಸುತ್ತಿದ್ದಾರೆ. ಅಲ್ಲದೇ  ಮರೀನಾತಾರ  ಅವರು ಕೂಡ ನಟಿಸುತ್ತಿದ್ದಾರೆ. 
 

ಕನ್ನಡದಲ್ಲಿ ಕೃಷ್ಣ ರುಕ್ಮಿಣಿ ಬಳಿಕ ಅಂಜನಾ ಕನ್ನಡ ಕಿರುತೆರೆಯಿಂದ ಸಂಪೂರ್ಣವಾಗಿ ದೂರವಾದರು. ಕಾರಣ ಅವಕಾಶಗಳ ಕೊರತೆ, ಆದರೆ ತೆಲುಗು, ತಮಿಳು ಕಿರುತೆರೆ ಅಂಜನಾ ಕೈ ಹಿಡಿಯಿತು. ಇವರು ಇತರ ಭಾಷೆಯಲ್ಲಿ ಸುಮಾರು ಏಳು ಸೀರಿಯಲ್ ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 
 

ಕೋಲಾರ ಮೂಲದ ಅಂಜನಾರಿಗೆ ಕೃಷ್ಣ ರುಕ್ಮಿಣಿ ಸೀರಿಯಲ್ ನಲ್ಲಿ ನಟಿಸೋವಾಗ ಬರೀ 17 ವರ್ಷ. ಕಳೆದ ಹತ್ತು ವರ್ಷಗಳಿಂದ ನಟನೆಯಲ್ಲಿ ಬ್ಯುಸಿಯಾಗಿರುವ ಅಂಜನಾ ಇನ್ನೂ ಸಹ ಸಿಂಗಲ್. ಸದ್ಯ ಬೆಂಗಳೂರಿನಲ್ಲೇ ನೆಲೆಸಿರುವ ಅಂಜನಾರನ್ನು ಮತ್ತೆ ತೆರೆಮೇಲೆ ನೊಡಲು ಜನರಂತೂ ಫುಲ್ ಉತ್ಸುಕರಾಗಿದ್ದಾರೆ. 
 

ಕೃಷ್ಣ ರುಕ್ಮಿಣಿಯ ಮೂಲಕ ಜನರಿಗೆ ಮೋಡಿ ಮಾಡಿದ್ದ ರುಕ್ಕು ನಿಮ್ಮನ್ನು ಮತ್ತೆ ಕಿರುತೆರೆಯಲ್ಲಿ ನೋಡಿ ತುಂಬಾನೆ ಖುಷಿಯಾಯಿತು. ಸೀರಿಯಲ್ ನೋಡೋದಕ್ಕೆ ನಾವು ಕಾಯುತ್ತಿದ್ದೇವೆ ಎಂದು ಕೃಷ್ಣ ರುಕ್ಮಿಣಿ ಅಭಿಮಾನಿಗಳು ಹೇಳಿದ್ದಾರೆ. 
 

Latest Videos

click me!