ಹಿನಾ ಖಾನ್‌ - ರುಬಿನಾ ದಿಲೈಕ್ :ಬಿಗ್ ಬಾಸ್ ಸ್ಪರ್ಧಿಗಳ ಬಿಕಿನಿ ಲುಕ್‌!

First Published | Sep 12, 2021, 10:30 AM IST

ಬಿಗ್ ಬಾಸ್ OTT ನಂತರ, ಮುಖ್ಯ ಸೀಸನ್ ಮುಂದಿನ ತಿಂಗಳು ಅಂದರೆ ಅಕ್ಟೋಬರ್‌ನಿಂದ ಆರಂಭವಾಗುತ್ತದೆ. ಅದರ ವಿವಾದಗಳ ಹೊರತಾಗಿ, ಬಿಗ್ ಬಾಸ್ ಯಾವಾಗಲೂ ಇನ್ನೊಂದು ಕಾರಣಕ್ಕಾಗಿ ಮುಖ್ಯಾಂಶಗಳಲ್ಲಿ ಉಳಿಯುತ್ತದೆ. ಆ ಕಾರಣ ಸ್ಪರ್ಧಿಗಳ ಬಿಕಿನಿ ಅವತಾರ. ಪ್ರತಿ ಬಾರಿಯೂ ಬಿಗ್ ಬಾಸ್ ಮನೆ ಒಂದು ದೊಡ್ಡ ಈಜುಕೊಳವನ್ನು ಹೊಂದಿರುತ್ತದೆ. ಟಿವಿಯ ಸಂಸ್ಕಾರಿ ಸೊಸೆ ಹಿನಾ ಖಾನ್ ಮತ್ತು ರುಬಿನಾ ಡಾಲಾಕ್‌ನಿಂದ ಸನ್ನಿ ಲಿಯೋನ್‌ವರೆಗೆ ಹಲವು ಬಿಗ್‌ ಬಾಸ್‌ ಕಂಟೆಸ್ಟೆಂಟ್‌ಗಳ ಬಿಕಿನಿಯ ಫೋಟೋಗಳು ಇಲ್ಲಿವೆ. 

Rubina Dilaik to Hina Khan Bigg Boss contestants bikini look

ಜಸ್ಲೀನ್ ಮಥಾರು: ಬಿಗ್ ಬಾಸ್‌ನಲ್ಲಿ ಅನುಪ್ ಜಲೋಟಾ ಜೊತೆಯ ತಮ್ಮ  ಸಂಬಂಧದಿಂದ ಒಮ್ಮೆ ಬಹಳ ಚರ್ಚೆಯಲ್ಲಿದ್ದ ಜಸ್ಲೀನ್ ಮಾಥಾರು ಅವರ ಬಿಕಿನಿ ಲುಕ್ ಸಾಕಷ್ಟು ಸುದ್ದಿ ಮಾಡಿತ್ತು. ಜಸ್ಲೀನ್ ಬಿಕಿನಿಯಲ್ಲಿ ಅನೇಕ ಬಾರಿ ಕಾಣಿಸಿಕೊಂಡಿದ್ದಾರೆ. ಜಸ್ಲೀನ್ ಮಾಥಾರು ಅವರ ಹಾಟ್‌ ಲುಕ್ ಅಭಿಮಾನಿಗಳ ನಿದ್ದೆಗೆಡಿಸಿತ್ತು.
 

ಲೋಪಮುದ್ರಾ ಮಾರ್ಗ: ಬ್ಯೂಟಿ ಶೋ ವಿನ್ನರ್‌ ಲೋಪಮುದ್ರಾ ರಾವುತ್ ಕೂಡ ಬಿಗ್ ಬಾಸ್ ಮನೆಯಲ್ಲಿ ಬಿಕಿನಿ ಲುಕ್‌ನಿಂದ ಸಕ್ಕತ್‌ ಸುದ್ದಿಯಾಗಿದ್ದರು. ಅವರ ಬಾಡಿ ಮತ್ತು ಹಾಟ್‌ ಅವತಾರ ತುಂಬಾ ವೈರಲ್‌ ಆಗಿತ್ತು. ಲೋಪಮುದ್ರಾ ಮಹಾರಾಷ್ಟ್ರದ ನಾಗಪುರದ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು.

Tap to resize

ಕಾಶ್ಮೀರ ಶಾ: ಕಾಮಿಡಿನ್‌ ಕೃಷ್ಣರ ಪತ್ನಿ ಮತ್ತು ಬಿಗ್ ಬಾಸ್‌  ಮೊದಲ ಸೀಸನ್‌ನ ಸ್ವರ್ಧಿ ಕಾಶ್ಮೀರಾ ಶಾ ಕೂಡ ಬಿಗ್ ಬಾಸ್‌ನಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಹೊರತಾಗಿ, ಕಾಶ್ಮೀರಾ ಬಿಕಿನಿ ಲುಕ್‌ನಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ.

ಪಾಯಲ್ ರೋಹತ್ಗಿ: ಬಿಗ್ ಬಾಸ್‌ನಲ್ಲಿ ಪಾಯಲ್ ರೋಹತ್ಗಿ  ಬಿಕಿನಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಾನು ಬಿಕಿನಿ ಧರಿಸಿ ಈಜುಕೊಳಕ್ಕೆ ಪ್ರವೇಶಿಸಲು ಬಯಸಲಿಲ್ಲ, ಆದರೆ ಪ್ರದರ್ಶನದಲ್ಲಿ ನಮಗೆ ಒಂದು ಟಾಸ್ಕ್ ನೀಡಲಾಯಿತು. ಈ ಕಾರಣದಿಂದಾಗಿ ನಾವು ಅದನ್ನು ಮಾಡಬೇಕಾಗಿತ್ತು ಎಂದು ಪಾಯಲ್ ಹೇಳಿದ್ದರು.

ರುಬಿನಾ ದಿಲೈಕ್: ಟಿವಿ ಸಿರಿಯಲ್‌ ಶಕ್ತಿ ಎಹ್ಸಾಸ್ ಕಿ ಧಾರಾವಾಹಿಯಲ್ಲಿ ಕಿನ್ನರ್ ಬಹು ಪಾತ್ರವನ್ನು ನಿರ್ವಹಿಸಿದ ರುಬಿನಾ ದಿಲೈಕ್, ಪತಿ ಅಭಿನವ್ ಶುಕ್ಲಾ ಅವರೊಂದಿಗೆ ಬಿಗ್ ಬಾಸ್ ಮನೆಗೆ ಪ್ರವೇಶಿಸಿದರು. ರೂಬಿನಾ ಬಿಗ್ ಬಾಸ್ ವಿಜೇತರಾಗಿದ್ದಾರೆ.

ಮೋನಾ ಲಿಸಾ: ಭೋಜ್‌ಪುರಿ ಸಿನಿಮಾ ನಟಿ ಮೊನಾಲಿಸಾ ಬಿಗ್ ಬಾಸ್ ಮನೆಯಲ್ಲಿ ಅವರ ಡ್ಯಾನ್ಸ್‌ ಮೂವ್‌ ಮತ್ತು ಬಿಕಿನಿ ಅವತಾರದಿಂದಾಗಿ ಸಾಕಷ್ಟು ಚರ್ಚೆಯಲ್ಲಿದ್ದರು. ಮೊನಾಲಿಸಾ ಬಿಗ್ ಬಾಸ್ ಮನೆಯಲ್ಲಿಯೇ ಬಾಯ್‌ಫ್ರೆಂಡ್‌ ವಿಕ್ರಾಂತ್ ಸಿಂಗ್ ರಜಪೂತ್ ಅವರನ್ನು ವಿವಾಹವಾಗಿದ್ದರು.

ರೋಶೆಲ್ ಮಾರಿಯಾ ರಾವ್: ರೋಶೆಲ್ ಮರಿಯಾ ರಾವ್ ತನ್ನ ಬಾಯ್‌ಡ್‌ ಕೀತ್ ಸಿಕ್ವೇರಾ ಜೊತೆ ಬಿಗ್ ಬಾಸ್ ಮನೆಗೆ ಪ್ರವೇಶಿಸಿದರು. ಇಬ್ಬರೂ ಈಜುಕೊಳದಲ್ಲಿ ಅನೇಕ ಬಾರಿ ಎಂಜಾಯ್‌ ಮಾಡುತ್ತಿದ್ದರು. ಕಪಿಲ್ ಶರ್ಮಾ ಅವರ ಕಾಮಿಡಿ ಶೋದಲ್ಲಿ ರೋಶೆಲ್ ಲಾಟರಿಯ ಪಾತ್ರವನ್ನು ನಿರ್ವಹಿಸಿದ್ದಾರೆ.

ಹೀನಾ ಖಾನ್: ಟಿವಿಯ ಸಂಸ್ಕಾರಿ ಸೊಸೆ ಟ್ಯಾಗ್ ಪಡೆದ ಹಿನಾ ಖಾನ್ ಬಿಗ್ ಬಾಸ್ ಮನೆಯಲ್ಲಿ ಫುಲ್‌ ಡಿಫೆರೆಂಟ್‌ ಸ್ಟೈಲ್‌ನಲ್ಲಿ ಕಾಣಿಸಿಕೊಂಡರು. ಹೀನಾ ಅನೇಕ ಬಾರಿ ಬಿಕಿನಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಆಗಾಗ ತನ್ನ ಬಾಯ್‌ಫ್ರೆಂಡ್‌ ಗೆಳೆಯ ರಾಕಿ ಜೈಸ್ವಾಲ್ ಜೊತೆ ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಎಂಜಾಯ್‌ ಮಾಡುತ್ತಾರೆ.
 

ಸನ್ನಿ ಲಿಯೋನ್:

ಬಾಲಿವುಡ್‌ನ ಬೋಲ್ಡ್‌  ನಟಿಯರಲ್ಲಿ ಒಬ್ಬರಾದ ಸನ್ನಿ ಲಿಯೋನ್ ಬಿಗ್ ಬಾಸ್ ಮೂಲಕ  ಹೆಚ್ಚಿನ ಖ್ಯಾತಿ ಪಡೆದರು. ಬಿಗ್ ಬಾಸ್ ಮನೆಯಲ್ಲಿ ಸನ್ನಿ ಲಿಯೋನ್ ತನ್ನ ಬೋಲ್ಡ್‌ನೆಸ್‌  ಹಲವು ಬಾರಿ ತೋರಿಸಿದ್ದರು. ಬಿಗ್ ಬಾಸ್ ನಂತರವೇ ಸನ್ನಿ ಸಿನಿಮಾಗಳಲ್ಲಿ ಕೆಲಸ ಮಾಡಲು ಆರಂಭಿಸಿದರು.

ನೇಹಾ ಭಾಸಿನ್:

ನೇಹಾ ಭಾಸಿನ್ ತನ್ನ ಬೋಲ್ಡ್‌ ಕೆಲಸಗಳಿಗೆ ಹೆಸರುವಾಸಿಯಾಗಿದ್ದಾರೆ. ನೇಹಾ ಇತ್ತೀಚೆಗೆ ಬಿಳಿ ಬಿಕಿನಿ ಧರಿಸಿ ಪಡ್ಡೆ ಹುಡುಗರ ನಿದ್ರೆಕೆಡಿಸಿದ್ದಾರೆ.. ನೇಹಾ ಭಾಸಿನ್ ಅವರ ಈ ಲುಕ್‌  ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿತ್ತು.

Latest Videos

vuukle one pixel image
click me!