Lakshmi Nivasa: ಜಯಂತ ಎಲ್ಲಿರ್ತಿಯ ಅಲ್ಲಿಗೆ ಕಾರಲ್ಲಿ ಬಂದು ಗುದ್ದಿಸಿ ಸಾಯಿಸ್ತೀನಿ… ವೀಕ್ಷಕರು ಇಷ್ಟೊಂದು ಗರಂ ಆಗಿರೋದು ಯಾಕೆ?

First Published | May 23, 2024, 6:39 PM IST

ಲಕ್ಷ್ಮೀ ನಿವಾಸ ಸೀರಿಯಲ್ ನಲ್ಲಿ ಸೈಕೋ ಪಾತ್ರದಲ್ಲಿ ನಟಿಸುತ್ತಿರುವ ಜಯಂತ್ ಬಗ್ಗೆ ವೀಕ್ಷಕರು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಈ ಸೀರಿಯಲ್ ನಿಲ್ಸಿಬಿಡಿ, ನೋಡಕ್ಕೆ ಆಗ್ತಿಲ್ಲಾ ಅಂತಿದ್ದಾರೆ. 
 

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ ನಲ್ಲಿ ಜಯಂತ್ ಕ್ಯಾರೆಕ್ಟರ್ ಬಗ್ಗೆ ವೀಕ್ಷಕರೆಲ್ಲರೂ ಗರಂ ಆಗಿದ್ದಾರೆ. ತನ್ನ ಸೈಕೋ ಕ್ಯಾರೆಕ್ಟರ್ ಮೂಲಕ ತೆರೆ ಮೇಲೆ ಸದಾ ವಿಚಿತ್ರವಾಗಿ ವರ್ತಿಸುತ್ತಿರುವ ಜಯಂತ್ ಮೇಲೆ ಯಾಕೆ ಇಷ್ಟೊಂದು ಗರಂ ಆಗಿದ್ದಾರೆ ಅನ್ನೋದನ್ನು ನೀವು ಪೂರ್ತಿ ಓದಿದ್ರೇನೆ ಗೊತ್ತಾಗತ್ತೆ. 

ಜಾಹ್ನವಿ ತುಂಬಾ ಹೊತ್ತು ಫೋನ್ ನಲ್ಲಿ ಮಾತನಾಡೋದನ್ನು ಸಹಿಸದ ಜಯಂತ್ (Jayanth) ಆಕೆಯ ಫೋನ್ ನೆಟ್ ವರ್ಕ್ ಕನೆಕ್ಟ್ ಆಗದೇ ಇರೋತರ ಮಾಡಿ, ಮನೆಯ ಲ್ಯಾಂಡ್ ಲೈನ್ ಕನೆಕ್ಷನ್ ಕೂಡ ತೆಗೆದು ಹಾಕಿದ್ದಾನೆ. ಜಾಹ್ನವಿಯ ಎಲ್ಲಾ ಪ್ರೀತಿ ತನ್ನೊಬ್ಬನಿಗೆ ಸಿಗಬೇಕೆಂದು ಇಡೀ ದಿನ ಆಕೆ ಏನ್ ಮಾಡ್ತಾಳೆ ಅನ್ನೋದನ್ನು ಆಫೀಸ್ ನಲ್ಲಿ ಕುಳಿತು ನೋಡ್ತಿರ್ತಾನೆ ಜಯಂತ್. 

Tap to resize

ಎರಡು ದಿನದಿಂದ ಮಗಳ ಫೋನ್ ಕನೆಕ್ಟ್ ಆಗದೇ, ಮುದ್ದು ಮಗಳ ಜೊತೆ ಮಾತನಾಡದೆ ಇರಲಾರದೇ ಲಕ್ಷ್ಮೀ ಮತ್ತು ಶ್ರೀನಿವಾಸ್ ತಮ್ಮ ಕುಟುಂಬದ ಜೊತೆ ಮಗಳೀಗೆ ತೊಂದರೆಯಾಗಿದೆ ಎಂದು ಅಂದುಕೊಂಡು ಜಯಂತ್ ಮನೆ ಮುಂದೆ ಬಂದೆ ಬಿಡುತ್ತಾರೆ. ಇದನ್ನು ನಿರೀಕ್ಷಿಸಿಯೇ ಇರದ ಜಯಂತ್ ಗೆ ಸಿಕ್ಕಾಪಟ್ಟೆ ಕೋಪ ಬರುತ್ತೆ, ಅದನ್ನು ತೋರಿಸದೇ ಎಲ್ಲರೆದುರು ಚೆನ್ನಾಗಿರುತ್ತಾನೆ ಜಯಂತ್. 

ಎಲ್ಲರೂ ಮಾತನಾಡ್ತಿರ್ಬೇಕಾದ್ರೆ ಜಯಂತ್ ತಾನೇ ಅಡುಗೆ ಮಾಡೊದಾಗಿ ಹೇಳುತ್ತಾನೆ. ಲಕ್ಷ್ಮೀ ಎಷ್ಟೇ ಬೇಡ ಅಂದ್ರೂ ಇವತ್ತು ನಾನೇ ಅಡುಗೆ ಮಾಡ್ತೇನೆ ಅಂದ್ರು ಕೇಳದೆ ಜಯಂತ, ಇಲ್ಲ ನಾನೇ ಅಡುಗೆ ಮಾಡ್ತಾನೆ ಅಂದಿದ್ದಾನೆ. ಇದು ಎಲ್ಲರನ್ನೂ ಮನೆಯಿಂದ ಓಡಿಸೋ ಪ್ಲ್ಯಾನ್ ಇರಬಹುದೇ ಅಥವಾ ಅಡುಗೆ ಮನೆ ಗಲೀಜು ಆಗುವ ಬಗ್ಗೆ ಭಯವೇ ಗೊತ್ತಿಲ್ಲ. 

ಅಡುಗೆ ಜಯಂತ್ ಮಾಡ್ತಾನೆ ಎಂದು ಗೊತ್ತಾದ ಮೇಲೆ ಎಲ್ಲರೂ ಸೇರಿ ಕ್ಯಾರಂ ಆಡೋದಕ್ಕೆ ನಿರ್ಧರಿಸುತ್ತಾರೆ. ಜಾಹ್ನವಿ ಅಪ್ಪನ ಜೊತೆ ಟೀಮ್ ಕೂಡ ಮಾಡಿಕೊಳ್ತಾರೆ. ಆದರೆ ತನ್ನ ಹೊರತಾಗಿಯೂ ಜಾಹ್ನವಿ ಖುಷಿಯಾಗಿದ್ದಾಳೆ ಅನ್ನೋ ವಿಷ್ಯ ಜಯಂತ್‌ಗೆ ಮಾತ್ರ ಸಹಿಸೋಕಾಗ್ತಿಲ್ಲ! ಅಪ್ಪ ಅಮ್ಮನ ಜೊತೆ ಖುಷಿಯಾಗಿರುವ ಜಾಹ್ನವಿಯ ಸಂತೋಷ ನೋಡಿ ಜಯಂತ್ ಗೆ ಭಯ. ಜಾಹ್ನವಿ ತನ್ನ ಮನೆಯವರ ಜೊತೆ ನಗುತ್ತಿರುತ್ತಾಳೆ, ಅವರ ಜೊತೆ ಸಮಯ ಕಳೆಯುತ್ತಾಳೆ, ನನಗೆ ಸಮಯ ಕೊಡೋದಿಲ್ಲ. ಹೀಗೆ ಆದ್ರೆ ಜಾಹ್ನವಿ ನನ್ನನ್ನು ಮರಿಬಹುದು ಎನ್ನುವ ಚಿಂತೆ ಜಯಂತ್ ಗೆ ಮತ್ತಷ್ಟು ಕಾಡ್ತಿದೆ. 

ತಂದೆ ತಾಯಿಗೆ ಮಗಳು ಪ್ರೀತಿ ಕೊಡೋದನ್ನು ಸಹಿಸದ ಜಯಂತ್ ಮೇಲೆ ವೀಕ್ಷಕರು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ, ಜಯಂತ ಎಲ್ಲಿರ್ತಿಯ ಹೇಳಪ್ಪ ಅಲ್ಲಿಗೆ ಕಾರಲ್ಲಿ ಬಂದು ಗುದ್ದಿಸಿ ಸಾಯಿಸ್ತೀನಿ ಅಂತಿದ್ದಾರೆ ಜನ. ಅಷ್ಟೇ ಅಲ್ಲ ಇಂತಹ ಅಳಿಯ ಸಿಕ್ರೆ ಯಾರು ಬದುಕ್ತಾರೆ ಎಂದು ಕೇಳಿದ್ದಾರೆ. ಇದು ಅತಿ ಆಯ್ತು ಜಯಂತ್, ಇನ್ನು ಇರ್ಲಿ ಬಿಡು, ಉರ್ಕೊಂಡು ಏನೂ ಮಾಡೋಕ್ ಆಗ್ದೇ ವಿಲ ವಿಲ ಒದ್ದಾಡು ಎಂದು ಸಹ ಹೇಳಿದ್ದಾರೆ ಜನ.

ಇನ್ನು ಹಲವು ಜನರು ಮೊದಲು ಈ ಸೀರಿಯಲ್ ನ್ನು ನಿಲ್ಲಿಸಿ, ಇಲ್ಲಾಂದ್ರೆ ಈ ಪಾತ್ರವನ್ನಾದರೂ ನಿಲ್ಲಿಸಿ ನೋಡೋದಕ್ಕೆ ಆಗ್ತಿಲ್ಲ. ಈ ರೀತಿ ತೋರಿಸೋ ಮೂಲಕ ಸಮಾಜಕ್ಕೆ ಏನು ಮೆಸೇಜ್ ಕೊಡ್ತೀರಿ ನೀವು ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ರು ಜಯಂತ್ ಗೆ ಸೈಕೋ ಸೈಕೋ ಎಂದು ಹೇಳಿಯೇ ಆವರ ಫ್ಯಾನ್ ಆಗ್ಬಿಟ್ಟಿದ್ದಾರೆ ಜನ ಎಂದು ಸಹ ಹೇಳಿದ್ದಾರೆ. 
 

Latest Videos

click me!