ತೆರೆ ಮೇಲೆ ಆಡಂಬರ, ರಿಯಲ್ ಲೈಫಲ್ಲಿ ಸರಳ; ಸೀರಿಯಲ್ ನಟ-ನಟಿಯರ ಮದುವೆ ಹೇಗಿತ್ತು ನೋಡಿ?

Published : Jan 06, 2023, 03:31 PM ISTUpdated : Jan 06, 2023, 03:41 PM IST

ಕನ್ನಡ ಕಿರುತೆರೆಯ ಹಲವು ನಟ -ನಟಿಯರು ಬಹಳ ಸಡಗರ, ಸಂಭ್ರಮದಿಂದ ಅದ್ಧೂರಿಯಾಗಿ ಕಳೆದ ಒಂದು ವರ್ಷದಲ್ಲಿ ಮದುವೆಯಾಗಿದ್ದಾರೆ. ಕೆಲವರು ಹತ್ತಿರದ ಜನರನ್ನು ಮಾತ್ರ ಆಮಂತ್ರಿಸಿ ಮದುವೆಯಾಗಿದ್ದರೆ, ಇನ್ನೂ ಕೆಲವು ಸೆಲೆಬ್ರಿಟಿಗಳು ಬಹಳ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ರಶ್ಮಿ ಪ್ರಭಾಕರ್-ನಿಖಿಲ್ ಭಾರ್ಗವರಿಂದ ಹಿಡಿದು ಐಶ್ವರ್ಯಾ ಸಾಲಿಮಠ್-ವಿನಯ್ ವರೆಗೆ, ಇತ್ತೀಚೆಗೆ ಮದುವೆಯಾದ ಜನಪ್ರಿಯ ಸೆಲೆಬ್ರಿಟಿಗಳ ಫೋಟೋಸ್ ಇಲ್ಲಿದೆ.

PREV
18
ತೆರೆ ಮೇಲೆ ಆಡಂಬರ, ರಿಯಲ್ ಲೈಫಲ್ಲಿ ಸರಳ; ಸೀರಿಯಲ್ ನಟ-ನಟಿಯರ ಮದುವೆ ಹೇಗಿತ್ತು ನೋಡಿ?

ಕನ್ನಡ ಕಿರುತೆರೆಯ ಆನ್-ಸ್ಕ್ರೀನ್ ತಾಯಿಯಾಗಿ ಜನಪ್ರಿಯತೆ ಗಳಿಸಿದ ಸ್ವಾತಿ ಎಚ್.ವಿ ವೈವಾಹಿಕ ಜೀವನಕ್ಕೆ (married life) ಕಳೆದ ವರ್ಷ ಕಾಲಿಟ್ಟರು.. ಸ್ವಾತಿ ನವೆಂಬರ್ 25ರಂದು ಮೈಸೂರಿನಲ್ಲಿ ಪ್ರಿಯಕರ ನಾಗಾರ್ಜುನ ರವಿ ಅವರೊಂದಿಗೆ ಸಪ್ತಪದಿ ತುಳಿದರು. ಮೈಸೂರಿನ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಅದ್ಧೂರಿ ಸಾಂಪ್ರದಾಯಿಕ ವಿವಾಹದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಅಡಿ ಇಟ್ಟಿತು. 
 

28

ಕಾಮಿಡಿ ಕಿಲಾಡಿಗಳು ಖ್ಯಾತಿಯ (comedy khiladigalu fame) ಸದಾನಂದ ಮತ್ತು ನೇತ್ರಾವತಿ ಕೂಡ ಕಳೆದ ವರ್ಷ ಮೇ 21 ರಂದು ವಿವಾಹವಾದರು. ಸದಾನಂದ ಅವರ ಜನ್ಮದಿನದಂದು ಪ್ರೇಮಿಗಳು ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಸರಳವಾಗಿ, ತಮ್ಮ ಹಿತೈಷಿಗಳ ಸಮ್ಮುಖದಲ್ಲಿ ವಿವಾಹವಾದರು.

38

ಸಾಗರ್ ಅವರ ಹೋಮ್ ಬ್ಯಾನರ್ ಅಡಿ ನಿರ್ಮಿಸಿದ ಧಾರಾವಾಹಿ ಮಹಾಸತಿಯ ಸೆಟ್ ನಲ್ಲಿ ಭೇಟಿಯಾಗಿದ್ದ ಸಾಗರ್ ಪುರಾಣಿಕ್ ಮತ್ತು ದೀಪಾ, ಬಳಿಕ ಉತ್ತಮ ಸ್ನೇಹಿತರಾಗಿ, ಸೆಟ್‌ನಲ್ಲೆ ಪ್ರೀತಿಯಲ್ಲಿ ಬಿದ್ದರು. ಆದಾಗ್ಯೂ, ಸುಮಾರು ಹತ್ತು ವರ್ಷಗಳ ಪರಿಚಯದ ನಂತರ, ಸಾಗರ್ ಮತ್ತು ದೀಪಾ ತಮ್ಮ ಸ್ನೇಹವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದರು. ಅವರು ಮೇ ತಿಂಗಳ ಆರಂಭದಲ್ಲಿ ವಿವಾಹವಾದರು.

48

ಕಿರುತೆರೆ ನಟಿ ರಶ್ಮಿ ತಮ್ಮ ದೀರ್ಘಕಾಲದ ಗೆಳೆಯ ನಿಖಿಲ್ ಅವರನ್ನು ಬೆಂಗಳೂರಿನಲ್ಲಿ ವಿವಾಹವಾದರು. ಈ ದಂಪತಿ ಅಪ್ಪಟ ಕರ್ನಾಟಕ ಶೈಲಿಯಲ್ಲಿ ಸಾಂಪ್ರದಾಯಿಕವಾಗಿ ಮದ್ವೆಯಾದರು (traditional wedding), ಅದಕ್ಕೆ ಅವರ ಆಪ್ತರು ಸಾಕ್ಷಿಯಾದರು. ಇದು ನಿಜವಾಗಿಯೂ ರಶ್ಮಿ ಮತ್ತು ನಿಖಿಲ್ ಗೆ ಕನಸಿನ ಮದುವೆಯಾಗಿತ್ತು.

58

ನಾಗಿಣಿ 2 ನಟ ನಿನಾದ್ ಹರಿತ್ಸಾ ಅವರು ರಮ್ಯಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಳೆದ ವರ್ಷ ಮೇ 20 ರಂದು ಕಾಲಿಟ್ಟರು. ಬೆಂಗಳೂರಿನ ಕನ್ವೆನ್ಷನ್ ಹಾಲಿನಲ್ಲಿ ನಡೆದ ಸಮಾರಂಭದಲ್ಲಿ ನೀನಾದ್ ತನ್ನ ದೀರ್ಘಕಾಲದ ಗೆಳತಿ ರಮ್ಯಾ ಅವರನ್ನು ವಿವಾಹವಾದರು. ನಿನಾದ್ ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ನಟ.  

68

ಕನ್ನಡ ಕಿರುತೆರೆ ನಟರಾದ ಲಾವಣ್ಯ ಮತ್ತು ಶಶಿ ಹೆಗಡೆ ಮೇ 30 ರಂದು ವಿವಾಹವಾದರು. ಈ ಜೋಡಿ ಉತ್ತರ ಕರ್ನಾಟಕದಲ್ಲಿ ಅದ್ದೂರಿ ಸಾಂಪ್ರದಾಯಿಕ (north Karnataka style wedding) ವಿವಾಹದಲ್ಲಿ ವಿವಾಹವಾದರು. ಮದುವೆಯಲ್ಲಿ ಅವರ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು.

78

ಐಶ್ವರ್ಯಾ ಸಾಲಿಮಠ್ ಮತ್ತು ವಿನಯ್ ಯುಜೆ, ಸ್ನೇಹಿತರಾಗಿ ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದರು, ಅಂತಿಮವಾಗಿ ಅವರು ಮದುವೆಯ ಮೂಲಕ ತಮ್ಮ ಸ್ನೇಹಕ್ಕೆ ಪ್ರೀತಿಯ ರೂಪ ಕೊಟ್ಟರು. ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು, ಅವರು ಮೇ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
 

88

ಜೀ ಕನ್ನಡ ವಾಹಿನಿಯ ಜನಪ್ರಿಯ ಹಾಸ್ಯ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಮೂಲಕ ಮನೋರಂಜನ ಕ್ಷೇತ್ರಕ್ಕೆ ಕಾಲಿಟ್ಟ ಪ್ಯಾಕು ಪ್ಯಾಕು ಅಲಿಯಾಸ್ ಹಿತೇಶ್ ಕಾಪಿನಡ್ಕ ಜನವರಿ 1, 2023ರಂದು ಬಹುಕಾಲದ ಗೆಳತಿ ಸ್ವಾತಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ಧೂರಿಯಾಗಿ ಮದುವೆ ಕಾರ್ಯಕ್ರಮ ನಡೆದಿದೆ.

Read more Photos on
click me!

Recommended Stories