ನಿಮ್ಮ ಮೆಚ್ಚಿನ ಕಿರುತೆರೆ ತಾರೆಯರ ರಿಯಲ್ ಲೈಫ್ ಪತಿಯರು ಇವರು

Published : Jan 19, 2023, 06:22 PM ISTUpdated : Jan 19, 2023, 06:27 PM IST

ಸೀರಿಯಲ್ ನಟ-ನಟಿಯರ ಆನ್ ಸ್ಕ್ರೀನ್ ಜೋಡಿಯನ್ನು ನೀವು ಯಾವಾಗಲೂ ಇಷ್ಟಪಡ್ತೀರಿ ಅಲ್ವಾ? ಕನ್ನಡ ಮಿನಿ ಸ್ಕ್ರೀನ್ ನಲ್ಲಿ ಎಷ್ಟೊ ಜನ ನಾಯಕಿಯರು ಮತ್ತು ನಾಯಕರ ಜೊತೆಗಿನ ಕೆಮಿಷ್ಟ್ರಿಯನ್ನು ನೀವು ಇಷ್ಟಪಟ್ಟಿರಬಹುದು. ಆದರೆ ಇಂದು ನಾವು ನಿಮ್ಮ ಮೆಚ್ಚಿನ ನಟಿಯರ ರಿಯಲ್ ಲೈಫ್ ಗಂಡನ ಬಗ್ಗೆ ಹೇಳ್ತೀವಿ….   

PREV
110
ನಿಮ್ಮ ಮೆಚ್ಚಿನ ಕಿರುತೆರೆ ತಾರೆಯರ ರಿಯಲ್ ಲೈಫ್ ಪತಿಯರು ಇವರು
ನೇಹಾ ಗೌಡ (Neha Gowda)

ಕನ್ನಡ ಕಿರುತೆರೆಯ ಬೊಂಬೆ ನೇಹಾ ಗೌಡ. ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ಜನಕ್ಕೆ ಹತ್ತಿರವಾಗಿದ್ದರು. ಈ ಸೀರಿಯಲ್ ನಲ್ಲಿ ಇವರ ಗಂಡ ಚಂದನ್ / ಚಂದು. ರಿಯಲ್ ಲೈಫ್ ನಲ್ಲೂ ಇವರು 25 ವರ್ಷಗಳಿಂದಲೂ ಪ್ರೀತಿಸ್ತಿದ್ದ ಬಾಲ್ಯದ ಗೆಳೆಯ ಚಂದನ್ ಅವರನ್ನು ಮದ್ವೆಯಾಗಿದ್ದಾರೆ. ಇವರಿಬ್ಬರು ರಾಜ -ರಾಣಿ ಸೀಸನ್ 1ರ ವಿನ್ನರ್ ಕೂಡ ಆಗಿದ್ದರು.

210
ರಶ್ಮಿ ಪ್ರಭಾಕರ್ (Rashmi Prabhakar)

ಲಕ್ಷ್ಮೀ ಬಾರಮ್ಮ ಸೀರಿಯಲ್ ನ ಲಚ್ಚಿ ಪಾತ್ರದಲ್ಲಿ ಮಿಂಚಿದ್ದ ನಟಿ ರಶ್ಮಿ ಪ್ರಭಾಕರ್, ಕಳೆದ ವರ್ಷವಷ್ಟೇ ತಮ್ಮ ಪ್ರೇಮಿ ನಿಖಿಲ್ ಭಾರ್ಗವ್ ಜೊತೆ ಹಸೆ ಮಣೆ ಏರಿದ್ದಾರೆ. ನಿಖಿಲ್ ಜಾಹೀರಾತು ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. 

310
ಶ್ವೇತಾ ಪ್ರಸಾದ್ (Shwetha Prasad)

ಶ್ರೀರಸ್ತು ಶುಭಮಸ್ತು, ರಾಧಾ ರಮಣ ಸೀರಿಯಲ್ ಗಳಲ್ಲಿ ನಟಿಸಿ ತಮ್ಮ ಫಿಟ್ ನೆಸ್, ಡ್ರೆಸ್ಸಿಂಗ್ ಮತ್ತು ಸೋಶಿಯಲ್ ವರ್ಕ್ ಗಳ ಮೂಲಕ ಸದಾ ಸುದ್ದಿಯಲ್ಲಿರುವ ನಟಿ ಶ್ವೇತಾ ಆರ್ ಪ್ರಸಾದ್. ಇವರ ಪತಿ ಕೂಡ ಫೇಮಸ್. ಆರ್. ಜೆ ಪ್ರದೀಪ್ ರೇಡಿಯೋ ಜಾಕಿಯಾಗಿ ಕೆಲಸ ಮಾಡ್ತಿದ್ದಾರೆ. ಇವರಿಬ್ಬರದೂ ಲವ್ ಮ್ಯಾರೇಜ್.

410
ಐಶ್ವರ್ಯ ಪಿಸ್ಸೆ (Aishwarya Pisse)

ಕನ್ನಡದ ಹುಡುಗಿಯಾಗಿದ್ದರೂ ತಮಿಳು, ತೆಲುಗು ಸೀರಿಯಲ್ ಗಳಲ್ಲಿ ಸಖತ್ ಫೇಮಸ್ ಆಗಿರುವ ನಟಿ ಐಶ್ವರ್ಯ ಪಿಸ್ಸೆ. ಇವರು ಕನ್ನಡದಲ್ಲಿ ಸರ್ವಮಂಗಳ ಮಾಂಗಲ್ಯೆ, ಸುಂದರಿ ಸೀರಿಯಲ್ ನಲ್ಲಿ ನಟಿಸಿದ್ದರು. ಸ್ಮಾಲ್ ಸ್ಕ್ರೀನ್ ನ ಈ ಸುಂದರಿಯ ಪತಿ ಹರಿ ವಿನಯ್. 

510
ಗೌತಮಿ ಜಾದವ್ (Gowthami Gadav)

ಸತ್ಯಾ ಸೀರಿಯಲ್ ಖ್ಯಾತಿಯ ರೀಲ್ ಲೈಫ್ ಗಂಡ ಅಮೂಲ್ ಬೇಬಿ ಬಗ್ಗೆ ನಿಮಗೆ ಗೊತ್ತೇ ಇದೆ. ಆದ್ರೆ ರಿಯಲ್ ಲೈಫ್ ಗಂಡ ಯಾರು ಗೊತ್ತಾ? ಇವರ ಗಂಡ ಅಭಿಷೇಕ್ ಕಾಸರಗೋಡು. ಇವರು ಕನ್ನಡ ಸಿನಿಮಾಗಳಲ್ಲಿ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡ್ತಿದ್ದಾರೆ. ಆಪರೇಶನ್ ಅಲಮೇಲಮ್ಮ, ಮಾಯಾಬಜಾರ್ ಮೊದಲಾದ ಚಿತ್ರಕ್ಕೆ ಇವರು ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ. 

610
ಮಯೂರಿ ಕ್ಯಾತ್ರಿ (Mayuri Kyatri)

ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಸಖತ್ ಜನಪ್ರಿಯತೆ ಪಡೆದ ನಟಿ ಮಯೂರಿ ಕ್ಯಾತ್ರಿ, ಬಳಿಕ ಸಿನಿಮಾದಲ್ಲೂ ನಟಿಸಿದ್ದರು. ಇವರು ತಮ್ಮ ಬಹು ಕಾಲದ ಗೆಳೆಯ ಅರುಣ್ ಎಂಬವರನ್ನು ಮದ್ವೆಯಾಗಿದ್ದಾರೆ. ಈ ಮುದ್ದಾದ ಜೋಡಿಗೆ ಒಬ್ಬ ಮುದ್ದಾದ ಮಗ ಕೂಡ ಇದ್ದಾನೆ. 

710
ಕಾವ್ಯ ಮಹಾದೇವ್  (Kavya Mahadev)

ನಮ್ಮನೆ ಯುವರಾಣಿ ಸೀರಿಯಲ್ ನಲ್ಲಿ ಆಹಲ್ಯಾ ಪಾತ್ರದ ಮೂಲಕ ತಮ್ಮ ನಟನೆ ಮೂಲಕವೇ ಜನರ ಮೆಚ್ಚುಗೆ ಪಡೆದ ನಟಿ ಕಾವ್ಯ ಮಹಾದೇವ್. ಇವರ ರಿಯಲ್ ಲೈಫ್ ಪತಿ ಹೆಸರು ಕುಮಾರ್. ಇವರಿಬ್ಬರೂ ಏಳು ವರ್ಷ ಲವ್ ಮಾಡಿ, ಆಮೇಲೆ ಮನೆಯವರ ಒಪ್ಪಿಗೆ ಪಡೆದು ಮದ್ವೆಯಾಗಿದ್ದರು. ಈ ಜೋಡಿ ಇತ್ತೀಚೆಗೆ ರಾಜ- ರಾಣಿಯಲ್ಲಿ ಭಾಗವಹಿಸಿ ವಿನ್ ಕೂಡ ಆಗಿದ್ದರು.

810
ಧನ್ಯಾ ದೀಪಿಕಾ  (Dhanya Deepika)

ಕುಲವಧು ಸೀರಿಯಲ್‌ನ ಧನ್ಯಾ ಎಲ್ಲರಿಗೂ ಚಿರಪರಿಚಿತ. ಇವರು ತಮ್ಮ ಆನ್‌ಸ್ಕ್ರೀನ್ ಗಂಡನನ್ನೆ ನಿಜ ಜೀವನದಲ್ಲಿ ಮದ್ವೆಯಾಗಿದ್ದಾರೆ. ಇವರ ಪತಿ ಆಕರ್ಷ್ ಕನ್ನಡದ ಹಲವು ಸೀರಿಯಲ್‌ಗಳಲ್ಲೂ ನಟಿಸಿದ್ದಾರೆ. 

910
ಆಶಿತಾ ಚಂದ್ರಪ್ಪಾ (Ashitha Chandrappa)

ಕನ್ನಡ ಮತ್ತು ತಮಿಳು ಸಿರಿಯಲ್ ಗಳಲ್ಲಿ ಜನಪ್ರಿಯರಾಗಿರುವ ಆಶಿತಾ ಚಂದ್ರಪ್ಪಾ ಕನ್ನಡದಲ್ಲಿ ಜೊತೆಜೊತೆಯಲಿ ಸೀರಿಯಲ್‌ನಲ್ಲಿ ನಟಿಸಿದ್ದರು, ಇದಾದ ಬಳಿಕ ಇವರು ಹಲವು ಸೀರಿಯಲ್‌ಗಳಲ್ಲಿ, ಚಿತ್ರಗಳಲ್ಲೂ ನಟಿಸಿದ್ದರು. ಇವರು ಬ್ಯುಸಿನೆಸ್ ಮ್ಯಾನ್ ರೋಹನ್ ರಾಘವೇಂದ್ರ ಅವರನ್ನು ಮದ್ವೆಯಾಗಿದ್ದಾರೆ.

1010
ಶ್ವೇತಾ ಚೆಂಗಪ್ಪಾ (Shwetha Changappa)

ಕಾದಂಬರಿ, ಸುಮತಿ ಮೊದಲಾದ ಸೀರಿಯಲ್ ಗಳಲ್ಲಿ ನಟಿಸಿ, ಮಜಾ ಭಾರತ್, ಮಜಾ ಟಾಕೀಸ್‌ನಲ್ಲಿ ಕಾಮಿಡಿ ಮಾಡುತ್ತಾ, ಬಳಿಕ ಕನ್ನಡ ಕಿರುತೆರೆಯಲ್ಲಿ ಆಂಕರ್ ಆಗಿ ಮಿಂಚುತ್ತಿರುವ ಕೊಡಗಿನ ಬೆಡಗಿ ಶ್ವೇತಾ ಚೆಂಗಪ್ಪಾ, ಕೊಡಗಿನ ಹುಡುಗ ಕಿರಣ್ ಅಪ್ಪಚ್ಚು ಅವರನ್ನು ಮದ್ವೆಯಾಗಿದ್ದು, ಮುದ್ದಾದ ಮಗನೂ ಇದ್ದಾನೆ. 
 

click me!

Recommended Stories