ಮುಂದೆ ಕನ್ನಡದಲ್ಲೇ ನಟಿಸುತ್ತೇನೆ ಎನ್ನುತ್ತಲೇ ಮತ್ತೆ ತೆಲುಗು ಕಿರುತೆರೆಗೆ ಹಾರಿದ ರಶ್ಮಿ ಪ್ರಭಾಕರ್

Published : Mar 21, 2024, 05:55 PM IST

ಕನ್ನಡ ಕಿರುತೆರೆಯ ಖ್ಯಾತ ನಟಿ ರಶ್ಮಿ ಪ್ರಭಾಕರ್ ಮತ್ತೆ ತೆಲುಗು ಕಿರುತೆರೆಗೆ ಹಿಂದಿರುಗಿದ್ದಾರೆ. ತೆಲುಗಿನ ಕೃಷ್ಣ ಮುಕುಂದ ಮುರಾರಿ ಸೀರಿಯಲ್ ನಲ್ಲಿ ನಟಿಸಲಿದ್ದಾರೆ.   

PREV
18
ಮುಂದೆ ಕನ್ನಡದಲ್ಲೇ ನಟಿಸುತ್ತೇನೆ ಎನ್ನುತ್ತಲೇ ಮತ್ತೆ ತೆಲುಗು ಕಿರುತೆರೆಗೆ ಹಾರಿದ ರಶ್ಮಿ ಪ್ರಭಾಕರ್

ಕನ್ನಡ ಕಿರುತೆರೆಯಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಲಕ್ಷ್ಮೀ, ಚಿನ್ನು ಆಗಿ ಮನೆಮಾತಾದ ನಟಿ ರಶ್ಮಿ ಪ್ರಭಾಕರ್ (Rashmi Prabhakar) ಇವರು ಹಲವು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. 

28

ಕಳೆದ ಹತ್ತು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ರಶ್ಮಿ ಶುಭ ವಿವಾಹ (Shubha Vivaha), ಮಹಾಭಾರತ, ಜೀವನಚೈತ್ರ,, ಲಕ್ಷ್ಮೀ ಬಾರಮ್ಮ, ಮನಸೆಲ್ಲಾ ನೀನೆ ಮೊದಲಾದ ಸೀರಿಯಲ್ ಗಳಲ್ಲಿ ನಟಿಸಿದ್ದರು, ಕೊನೆಯದಾಗಿ ಕನ್ನಡದಲ್ಲಿ ರಶ್ಮಿ ಮನಸೆಲ್ಲಾ ನೀನೆ ಸೀರಿಯಲ್ (serial) ನಲ್ಲಿ ಕಾಣಿಸಿಕೊಂಡಿದ್ದರು. 
 

38

ನಂತರ ತಮಿಳು ಮತ್ತು ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದ ರಶ್ಮಿ ಅರುಂಧತಿ, ಕಣೈ ಕಲೈಮಾಲೆ ಎನ್ನುವ ತಮಿಳು ಸೀರಿಯಲ್ ಗಳಲ್ಲಿ ಹಾಗೂ ಕಾವ್ಯಾಂಜಲಿ, ಪೌರ್ಣಮಿ ಎನ್ನುವ ತೆಲುಗು ಸೀರಿಯಲ್ (telugu serial) ನಲ್ಲಿ ನಟಿಸುವ ಮೂಲಕ ಮೂರು ಕಿರುತೆರೆಯಲ್ಲಿ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ. 
 

48

ರಶ್ಮಿ ಕೊನೆಯದಾಗಿ ತಮಿಳಿನ ಕಣೈ ಕಲೈಮಾಲೆ ಸೀರಿಯಲ್ ನಲ್ಲಿ ನೆಗೆಟಿವ್ ಶೇಡ್ ನಲ್ಲಿ (negative shade) ನಟಿಸಿದ್ದರು. ಈ ಪಾತ್ರವನ್ನು ಜನ ತುಂಬಾನೆ ಇಷ್ಟಪಟ್ಟಿದ್ದರು. ಕಾರಣಾಂತರಗಳಿಂದ ಈ ಸೀರಿಯಲ್ ನಿಂತು ಹೋಗಿತ್ತು. ಇದಾದ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ ರಶ್ಮಿ ಇನ್ನು ಕನ್ನಡದಲ್ಲಿ ಮಾತ್ರ ನಟಿಸುತ್ತೇನೆ ಎಂದಿದ್ದರು. 

58

ಈ ಬಗ್ಗೆ ಮಾತನಾಡಿದ ರಶ್ಮಿ ಮುಂದೆ ಪ್ರಾಜೆಕ್ಟ್ ಮಾಡಿದ್ರೆ ಪ್ರಾಯಶ: ಕನ್ನಡದಲ್ಲಿ ಮಾಡ್ತೇನೆ. ಬೇರೆ ಭಾಷೆಯ ಪ್ರಾಜೆಕ್ಟ್‌ನಲ್ಲಿ ನಾನು ಸದ್ಯಕ್ಕೆ ನಟಿಸೋದಿಲ್ಲ. ಕನ್ನಡದಲ್ಲಿ ಒಳ್ಳೆಯ ತೂಕ ಇರುವ ಪಾತ್ರಕ್ಕಾಗಿ ನಾನು ಕಾಯುತ್ತಿದ್ದೇನೆ. ಅಂತಹ ಪಾತ್ರ ಸಿಕ್ಕಿದ್ರೆ, ಖಂಡಿತಾ ನಟಿಸುತ್ತೇನೆ ಎಂದಿದ್ದರು. 

68

ಆದರೆ ಇದೀಗ ರಶ್ಮಿ ಪ್ರಭಾಕರ್ ಮತ್ತೆ ತೆಲುಗು ಕಿರುತೆರೆಗೆ ಹಾರಿದ್ದಾರೆ. ತೆಲುಗಿನ ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೃಷ್ಣ ಮುಕುಂದ ಮುರಾರಿ (Krishna Mukunda Murari) ಸೀರಿಯಲ್ ನಲ್ಲಿ ಯಶ್ಮಿ ಗೌಡ ನಿರ್ವಹಿಸುತ್ತಿದ್ದ ಪಾತ್ರದಲ್ಲಿ ಇನ್ನು ಮುಂದೆ ರಶ್ಮಿ ಪ್ರಭಾಕರ್ ನಟಿಸಲಿದ್ದಾರೆ. 
 

78

ಕೃಷ್ಣ ಮುಕುಂದ ಮುರಾರಿ ಸೀರಿಯಲ್ ಕನ್ನಡದ ಮರಳಿ ಮನಸಾಗಿದೆ (marali manasagide) ಸೀರಿಯಲ್ ರಿಮೇಕ್ ಆಗಿದೆ. ಈ ಧಾರಾವಾಹಿಯಲ್ಲಿ ಹಿಂದೆ ಕನ್ನಡದವರೇ ಆದ ಗಗನ್ ಚಿನ್ನಪ್ಪ ನಟಿಸುತ್ತಿದ್ದರು, ಅವರಿಗೆ ನಾಯಕಿಯರಾಗಿ ಪ್ರೇರಣ ಕಂಬಂ, ಯಶ್ಮಿ ಗೌಡ ನಟಿಸುತ್ತಿದ್ದರು. 

88

ಗಗನ್ ಚಿನ್ನಪ್ಪ ಕಾರಣಾಂತರಗಳಿಂದ ಸೀರಿಯಲ್ ನಿಂದ ಹೊರ ಬಂದಿದ್ದರು, ಅವರ ಪಾತ್ರವನ್ನು ಮಧುಸೂಧನ್ ನಿರ್ವಹಿಸುತ್ತಿದ್ದಾರೆ. ಯಶ್ಮಿ ಗೌಡ ಮುಕುಂದ ಪಾತ್ರದಲ್ಲಿ ಇಲ್ಲಿವರೆಗೆ ನಟಿಸಿದ್ದು, ಇದೀಗ ಅವರು ಸೀರಿಯಲ್ ನಿಂದ ಹೊರ ಬಂದಿದ್ದು, ಅವರ ಪಾತ್ರದಲ್ಲಿ ರಶ್ಮಿ ಪ್ರಭಾಕರ್ ನಟಿಸಲಿದ್ದಾರೆ. 

Read more Photos on
click me!

Recommended Stories