Diya Palakkal : ಅಂದು ‘ಕಿನ್ನರಿ’ಯಲ್ಲಿ ಬಾಲನಟಿಯಾಗಿದ್ದ ಈಕೆ ಇಂದು ಬ್ರಹ್ಮಗಂಟು ಧಾರಾವಾಹಿ ನಾಯಕಿ

Published : Mar 21, 2024, 03:02 PM IST

ಝೀ ಕನ್ನಡದಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ ಬ್ರಹ್ಮಗಂಟು ಈಗಾಗಲೇ ತನ್ನ ಪ್ರೊಮೋ ಮೂಲಕ ಸದ್ದು ಮಾಡುತ್ತಿದ್ದು, ಈ ಸೀರಿಯಲ್ ನಲ್ಲಿ ನಟಿಸುತ್ತಿರೋ ನಾಯಕಿ ಯಾರು ಅನ್ನೋದು ನಿಮ್ಮ ಪ್ರಶ್ನೆಯಾಗಿದ್ರೆ, ಇಲ್ಲಿದೆ ನಿಮಗೆ ಉತ್ತರ.   

PREV
18
Diya Palakkal : ಅಂದು ‘ಕಿನ್ನರಿ’ಯಲ್ಲಿ ಬಾಲನಟಿಯಾಗಿದ್ದ ಈಕೆ ಇಂದು ಬ್ರಹ್ಮಗಂಟು ಧಾರಾವಾಹಿ ನಾಯಕಿ

ಸಾಲು ಸಾಲು ಹೊಸ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿರುವ ಝೀ ಕನ್ನಡ (Zee Kannada) ವಾಹಿನಿಯು ಇದೀಗ ಬ್ರಹ್ಮಗಂಟು ಎಂಬ ಹೊಸ ಸೀರಿಯಲ್ ಪ್ರೊಮೋ ಬಿಡುಗಡೆ ಮಾಡಿದ್ದು, ಕಥೆಯನ್ನು ವೀಕ್ಷಕರು ಇಷ್ಟಪಟ್ಟಿದ್ದು, ಹೊಸ ಮುಖ ನೋಡಿ ಇನ್ನಷ್ಟು ಖುಷಿ ಪಟ್ಟಿದ್ದಾರೆ. 
 

28

ಅಕ್ಕ ತಂಗಿಯ ಕಥೆಯಾಗಿರುವ ಬ್ರಹ್ಮಗಂಟು (Bramhagantu) ಸೀರಿಯಲ್ ನಲ್ಲಿ ಕೊನೆಗೂ ಹಳೆ ಮುಖ ಬಿಟ್ಟು ಹೊಸ ನಾಯಕಿಯರನ್ನು ಹಾಕಿದ್ರಲ್ಲಾ ಎನ್ನುತ್ತಾ, ಯಾರಪ್ಪಾ ಈ ಹೊಸ ನಾಯಕಿ ಎಂದು ವೀಕ್ಷಕರು ಕೇಳ್ತಿದ್ದಾರೆ. ಅಕ್ಕನಿಗಾಗಿ ತನ್ನ ಜೀವನವನ್ನೆ ಮುಡಿಪಾಗಿಟ್ಟ ತಂಗಿಯ ಪಾತ್ರದಲ್ಲಿ ನಟಿಸ್ತಿರೋ ನಾಯಕಿ ಯಾರು ಗೊತ್ತಾ? 
 

38

ಬ್ರಹ್ಮಗಂಟು ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸ್ತಿರೋರು ದಿಯಾ ಪಾಲಕ್ಕಲ್ (Diya Palakkal). ಇವರೇನು ಮಲಯಾಳಂ ಇಂಡಷ್ಟ್ರಿಯಿಂದ ಬಂದವರೇನೂ ಅಲ್ಲ. ಅಚ್ಚ ಕನ್ನಡದ ಹುಡುಗಿ ದಿಯಾ. ಬಾಲನಟಿಯಾಗಿ ಕನ್ನಡದಲ್ಲಿ ಗುರುತಿಸಿಕೊಂಡು, ಇದೀಗ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. 
 

48

ಹೌದು ದಿಯಾ ಪಾಲಕ್ಕಲ್ ಈ ಮೊದಲು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ (Kinnari) ಧಾರಾವಾಹಿಯಲ್ಲಿ ಬಾಲನಟಿ ಐಶ್ವರ್ಯಾ ಪಾತ್ರದಲ್ಲಿ ನಟಿಸಿದ್ದರು. ಬಳಿಕ ಲಕ್ಷ್ಮೀ ಸ್ಟೋರ್ಸ್ ಎನ್ನುವ ಜನಪ್ರಿಯ ತಮಿಳು ಧಾರಾವಾಹಿಯಲ್ಲಿ ನಟಿ ಖುಷ್ಬು ಜೊತೆಗೂ ನಟಿಸಿದ್ದರು ದಿಯಾ. 
 

58

ಅಷ್ಟೇ ಅಲ್ಲ, ಕನ್ನಡದಲ್ಲಿ ಬಿಡುಗಡೆಯಾಗಿದ್ದ ಕುಂದ ಕನ್ನಡದ ಅಮ್ಮಚ್ಚಿಯೆಂಬ ನೆನಪು (Ammacchi emba nenapu) ಸಿನಿಮಾದಲ್ಲಿ ದಿಯಾ ಎನ್ನುವ ಪುಟ್ಟ ಹುಡುಗಿಯ ಪಾತ್ರ ನಿರ್ವಹಿಸಿ ವೀಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು ದಿಯಾ. ಈ ಸಿನಿಮಾದಲ್ಲಿ ರಾಜ್ ಬಿಶೆಟ್ಟಿ, ವೈಜಯಂತಿ ಅಡಿಗ ನಟಿಸಿದ್ದರು. 
 

68

ಅಷ್ಟೇ ಅಲ್ಲ ದಿಯಾ ಜಾನ್ ಜಾನಿ ಜನಾರ್ಧನ್, ಜಾನಿ ಜಾನಿ ಎಸ್ ಪಪ್ಪ ಮತ್ತು ಭರ್ಜರಿ ಸಿನಿಮಾಗಳಲ್ಲೂ ಬಾಲನಟಿಯಾಗಿ ಅಭಿನಯಿಸಿದ್ದಾರೆ. ಜೊತೆಗೆ 50 ಎನ್ನುವ ಕಿರುಚಿತ್ರದಲ್ಲೂ ನಟಿಸಿದ್ದಾರೆ ಈ ಬೆಡಗಿ. 
 

78

ಇನ್ನು ಈಗಷ್ಟೇ ಪಿಯುಸಿ ಶಿಕ್ಷಣ ಮುಗಿಸಿರುವ ದಿಯಾ ತಾಯಿ ರಮ್ಯಾ (Ramya Ajay) ಮತ್ತು ಚಿಕ್ಕಮ್ಮ ರಾಧಾ ಇಬ್ಬರೂ ಸಹ ಭರತನಾಟ್ಯ ಕಲಾವಿದರು ಮತ್ತು ನಟಿಯರಾಗಿದ್ದು, ಹಲವಾರು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ತಮ್ಮ ತಾಯಿಯಿಂದಲೇ ದಿಯಾ ನಟನೆಯತ್ತ ಒಲವು ಬೆಳೆಸಿಕೊಂಡಿದ್ದಾರೆ.
 

88

ಇದೀಗ ಮೊದಲ ಬಾರಿಗೆ ದಿಯಾ ಪಾಲಕ್ಕಲ್ ಬ್ರಹ್ಮಗಂಟು ಸೀರಿಯಲ್ ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಕ್ಕನಿಗಾಗಿ ಸರ್ವಸ್ವವನ್ನು ತ್ಯಾಗಮಾಡುವ ಕರುಣಾಮಯಿ ತಂಗಿಯ ಪಾತ್ರದಲ್ಲಿ ದಿಯಾ ನಟಿಸಿದ್ದಾರೆ. ದಿಯಾ ನಟನೆ ಹೇಗಿದೆ? ಸೀರಿಯಲ್ ಕಥೆ ಏನಾಗಲಿದೆ ಅನ್ನೋದನ್ನು ಕಾದು ನೋಡಬೇಕು. 
 

Read more Photos on
click me!

Recommended Stories