ಇಳ್ಕಲ್ ಸೀರೆ, ಮುತ್ತಿನ ಮೂಗುತಿಯಲ್ಲಿ ರಂಜನಿ ರಾಘವನ್ ಪೋಸ್ : ಆ ಮೂಗುತಿ ನಾನಾಗಬಾರದೇ ಎಂದ ನೆಟ್ಟಿಗರು!

First Published | Mar 23, 2023, 3:35 PM IST

ಕನ್ನಡತಿ ಸೀರಿಯಲ್ ಮೂಲಕ ಕರ್ನಾಟಕದಾದ್ಯಂತ ಜನಮನ ಗೆದ್ದ ನಾಯಕಿ ರಂಜನಿ ರಾಘವನ್. ಇದೀಗ ಅವರು ಯುಗಾದಿ ಸಂದರ್ಭದಲ್ಲಿ ಹೊಸ ಫೋಟೊ ಹರಿಯ ಬಿಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ತಾಗಿ ಸದ್ದು ಮಾಡ್ತಾ ಇದೆ. 
 

ರಂಜನಿ ರಾಘವನ್ ಎಂದ ಕೂಡಲೇ ನೆನಪಾಗೋದು ಕನ್ನಡತಿ ಸೀರಿಯಲ್ (Kannadathi Serial). ಕನ್ನಡತಿಯ ಈ ಕನ್ನಡ ಟೀಚರ್ ಧಾರಾವಾಹಿ ಮುಗಿದ ಬಳಿಕವೂ ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಸೋಶಿಯಲ್ ಮೀಡೀಯಾದಲ್ಲಿ ಆಕ್ಟೀವ್ ಆಗಿರುವ ಇವರು ಫೋಟೋ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಕನೆಕ್ಟ್ ಆಗುತ್ತಾರೆ. 

ರಂಜನಿ ಇಲ್ಲಿವರೆಗೆ ತಮ್ಮ ರೀಲ್ಸ್ ಮೂಲಕ, ಪುಸ್ತಕ, ಸಾಹಿತ್ಯದ ಬಗ್ಗೆ ಮಾಹಿತಿ ನೀಡುವ ಮೂಲಕ ಮತ್ತು ತಮ್ಮ ಸಿನಿಮಾದ ಬಗ್ಗೆ ಮಾಹಿತಿ ನೀಡುತ್ತಾ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡುತ್ತಿದ್ದರು. ಈ ಬಾರಿ ಯುಗಾದಿಗೆ (Yugadi) ಅವರು ತಮ್ಮ ಫೋಟೋ ಶೇರ್ ಮಾಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. 

Tap to resize

ಈ ಬಾರಿ ಯುಗಾದಿಗೆ ನಟಿ ಹಸಿರು ಬಣ್ಣದ ಇಳಕಲ್ ಸೀರೆ ಉಟ್ಟು, ಮೂಗಿಗೆ ಮುತ್ತಿನ ನತ್ತು ತೊಟ್ಟು, ಕಿವಿಗೆ ಜುಮುಕಿ, ಕತ್ತಿಗೆ ಸರ ತೊಟ್ಟು ,ಕೈಯಲ್ಲೊಂದು ಬುಕ್ ಹಿಡಿದು ಪೋಸ್ ನೀಡಿದ್ದು, ತುಂಬಾನೆ ಸುಂದರಿಯಾಗಿ ಕಾಣಿಸ್ತಿದ್ದಾರೆ. ಇವರ ಫೋಟೋ ನೋಡಿದ (photoshoot) ಅಭಿಮಾನಿಗಳು ಕನ್ನಡತಿಯ ಬ್ಯೂಟಿಗೆ ಸೋತು ಶರಣಾಗಿದ್ದಾರೆ. 

ನೆರಿಗೆ ಸ್ಟೋರಿ ವಿನ್ಯಾಸದ ಸೀರೆ ಹಾಗೂ ಬ್ಲೌಸ್ ಧರಿಸಿರುವ ರಂಜನಿ ರಾಘವನ್, ಫೋಟೋ ಶೂಟ್ ಶಶಾಂಕ್ ಶಿವಪುರಪು ಪರಿಕಲ್ಪನೆಯಲ್ಲಿ ನಡೆದಿದೆ. ಪೂಜಾ ನಾಡಿಗ್ ಸ್ಟೈಲಿಂಗ್  ಮಾಡಿದ್ದು, ಹೇರ್ ಸ್ಟೈಲ್ ಹಾಗೂ ಮೇಕಪ್ ಯಶಸ್ವಿನಿ ಮಾಡಿದ್ದಾರೆ. ಚಿತ್ರಪ್ರಿಯ ದರ್ಶನಿ ಕ್ಲಿಕ್ ಮಾಡಿರುವ ಈ ಪಕ್ಕಾ ಟ್ರೆಡಿಶನಲ್ ಫೋಟೋ ಶೂಟ್ ಗೆ (traditional photo shoot) ಅಭಿಮಾನಿಗಳು ಸಾಲು ಸಾಲಾಗಿ ತಮ್ಮ ನೆಚ್ಚಿನ ನಟಿಯನ್ನು ಹಾಡಿ ಹೊಗಳಿದ್ದಾರೆ. 
 

ಈ ಫೋಟೋಗೆ ತರಹೇವಾರಿ ಕಮೆಂಟ್‌ಗಳು ಬಂದಿದ್ದು, ಒಬ್ಬರು, ಎಷ್ಟು ಹೊಗಳಲಿ ನಿಮ್ಮ ಅಂದದ ನಗೆಯ.., ಮುಖದಲ್ಲೇ ಕಾಣುವ ಆ ಮುಗ್ದ ಭಾವನೆಯ..,ಮೂಗಿಗಿಂತ ಭಾರವಾದ ಆ ಮೂಗುತಿಯ..,ಸಂಸ್ಕೃತಿಗೆ ತಕ್ಕ ಸೀರೆ ಉಟ್ಟ ನಾರಿಯ.. ನಿಮಗೆ ಯುಗಾದಿಯ ಶುಭಾಶಯ ಎಂದು ಬರೆದಿದ್ದಾರೆ.

ಕೆಲವರು ಎಷ್ಟು ಮುದ್ದಾಗಿ ಕಾಣುಸ್ತಿದ್ದೀರ ಅಂದ್ರೆ ಯಪ್ಪಾ ನಿಮಗೆ ಈ ಇಳಕಲ್ ಸೀರೆ ಮತ್ತು ಮೂಗು ಬಟ್ಟು ಬಹಳ ಚೆನ್ನಾಗಿ ಒಪ್ಪುತ್ತೆ ಎಂದು ಬರೆದರೆ, ಇನ್ನು ಕೆಲವರು ಮೂಗು ಬೊಟ್ಟಾಗಿ ಹುಟ್ಟಿದ್ರೆ ನಾನು ಇವಳ ಮೂಗಲ್ಲಿ ಇರ್ಬೋದಿತ್ತು ಅಂತಾ ಹಾಡನ್ನೇ ಹಾಡಿ… ತಮ್ಮ ಭಾವನೆಗಳನ್ನು ತೋಡಿಕೊಂಡಿದ್ದಾರೆ. 

ಇನ್ನು ಹೆಚ್ಚಿನ ಜನರು ಹೊಸ ವರ್ಷದಲ್ಲಿ ,ಹೊಸ ಅವಕಾಶಗಳು ಬಾಗಿಲು ತಟ್ಟಲಿ, ನಿಮಗೆ ಹೊಸ ಸೀರಿಯಲ್ ಗಳಲ್ಲಿ, ಹೊಸ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗಲಿ ಎಂದು ಹಾರೈಸಿದ್ದಾರೆ. ಸದ್ಯ ಕನ್ನಡತಿ ಸೀರಿಯಲ್ ಮುಗಿದ ಬಳಿಕ ರಂಜನಿ ಕನ್ನಡ ಸಿನಿಮಾ ಒಂದರಲ್ಲಿ ಬ್ಯುಸಿಯಾಗಿದ್ದಾರೆ. 

Latest Videos

click me!