ಉರ್ಫಿ ಮೈ ತುಂಬಾ ಕಿವಿ ಹಣ್ಣು; ದುಬಾರಿ ಹಣ್ಣಿನ ರುಚಿ ನೋಡೋ ಭಾಗ್ಯ ನಮಗಿಲ್ಲ ಎಂದು ಕಾಲೆಳೆದ ನೆಟ್ಟಿಗರು

ಕಿವಿ ಹಣ್ಣಿನಿಂದ ಬ್ಲೌಸ್ ಡಿಸೈನ್ ಮಾಡಿಕೊಂಡ ಉರ್ಫಿ ಜಾವೇದ್. ಕ್ರಿಯೇಟಿವಿಟಿ ಓಕೆ ಆದರೆ ಈ ರೇಂಜ್‌ಗೆ ಮಾಡೋದು ಎಷ್ಟು ಸರಿ ಎಂದು ಪ್ರಶ್ನಿಸಿದ ನೆಟ್ಟಿಗರು....
 

ಬಾಲಿವುಡ್ ನಟಿ, ಬಿಗ್ ಬಾಸ್ ಓಟಿಟಿ ಸ್ಪರ್ಧಿ ಉರ್ಫಿ ಜಾವೇದ್ ನೆಕ್ಸಟ್‌ ಟ್ರೆಂಡಿಂಗ್ ಡಿಸೈನರ್ ಅಂದ್ರೆ ತಪ್ಪಾಗಲ್ಲ ಏಕೆಂದರೆ ಈಕೆ ಕ್ರಿಯೇಟಿವಿಟಿಗೆ ಇಡೀ ದೇಶವೇ ಫಿದಾ ಆಗಿದೆ. 
 

ಯುಗಾದಿ ಹಬ್ಬದ ದಿನ ಎಲ್ಲರೂ ಖುಷಿ ಖುಷಿಯಾಗಿ ಸಂಪ್ರದಾಯಿಕ ಉಡುಪು ಧರಿಸಿ ಮಿಂಚುತ್ತಾರೆ ಆದರೆ ಉರ್ಫಿ ಮಾತ್ರ ಮೈ ಕಾಣುವಂತೆ ಡ್ರೆಸ್‌ ಧರಿಸಿ ಟ್ರೋಲ್ ಆಗುತ್ತಿದ್ದಾರೆ.


ದುಬಾರಿ ಹಣ್ಣುಗಳಲ್ಲಿ ಒಂದಾಗಿರುವ ಕಿವಿ ಹಣ್ಣನ್ನು ಉರ್ಫಿ ಜಾವೇದ್ ತಿನ್ನುತ್ತಿದ್ದಾರೆ.ಹಾಗೆ ಅದೇ ಹಣ್ಣಿನಿಂದ ಬ್ಲೌಸ್‌ ಡಿಸೈನ್ ಮಾಡಿಕೊಂಡು ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದಾರೆ.

'ನಾನು ಧರಿಸಿರುವ ಈ ಟಾಪನ್ನು ಯಾವುದರಲ್ಲಿ ಡಿಸೈನ್ ಮಾಡಿರುವುದು ಎಂದು ಹೇಳಿ?' ಎಂದು ಉರ್ಫಿ ಬರೆದುಕೊಂಡಿದ್ದರು. ಇದಕ್ಕೆ ಲಕ್ಷಾಂತರ ಕಾಮೆಂಟ್‌ಗಳು ಹರಿದು ಬಂದಿದೆ. 

'ನಾನು ಸಂಪೂರ್ಣ ಸಸ್ಯಹಾರಿ ಹೀಗಾಗಿ ಈ ಬಟ್ಟೆ ತುಂಬಾ ಇಷ್ಟವಾಗುತ್ತದೆ' ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ ಮತ್ತೊಬ್ಬರು 'ಇಷ್ಟೊಂದು ದುಬಾರಿ ಹಣ್ಣಿನ ರುಚಿ ನೋಡುವ ಭಾಗ್ಯ ನಮಗಿಲ್ಲ ನೀವು ಯಾಕೆ ವೇಸ್ಟ್‌ ಮಾಡುವುದು' ಎಂದು ಕಾಮೆಂಟ್ ಮಾಡಿದ್ದಾರೆ.

 ಹಣಕ್ಕಾಗಿ ಏನು ಬೇಕಿದ್ದರೂ ಉರ್ಫಿ ಜಾವೇದ್ ಮಾಡುತ್ತಾರೆ ಅನ್ನೋ ಕಿರೀಟ ಪಡೆದುಕೊಂಡಿದ್ದಾರೆ. ತಿನ್ನೋ ಪದಾರ್ಥಗಳಿಂದ ಈ ರೀತಿ ವರ್ತಿಸುವುದು ಸರಿ ಅಲ್ಲ ಎಂದು ಬುದ್ಧಿ ಹೇಳಿದ್ದಾರೆ. 

Latest Videos

click me!