ಫ್ಯಾಮಿಲಿ ಜೊತೆ ನಟಿ ಹಿನಾ ಖಾನ್‌ ಮೆಕ್ಕಾ ಯಾತ್ರೆ ಫೋಟೋ ವೈರಲ್‌

First Published | Mar 22, 2023, 4:30 PM IST

ಪ್ರಸಿದ್ಧ ಟಿವಿ ನಟಿ ಹಿನಾ ಖಾನ್‌ ಅವರು ರಂಜಾನ್ ತಯಾರಿಯಲ್ಲಿ, ಅಧ್ಯಾತ್ಮ ಉದ್ದೇಶಗಳಿಗಾಗಿ ಮೆಕ್ಕಾಗೆ ತೀರ್ಥಯಾತ್ರೆಯನ್ನು ಮಾಡುತ್ತಿದ್ದಾರೆ. ಇದು ಅವರ ಮೊದಲ ಉಮ್ರಾ (ಮೆಕ್ಕಾ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುವುದು) ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಪವಿತ್ರ ನಗರಕ್ಕೆ ತನ್ನ ಪ್ರವಾಸದ ಹಲವಾರು ಚಿತ್ರಗಳನ್ನು ನಟಿ ಟ್ವೀಟ್ ಸಹ ಮಾಡಿದ್ದಾರೆ. 
 

ಬಿಗ್ ಬಾಸ್ 11ರ ಸ್ಪರ್ಧಿ ಹಿನಾ ಖಾನ್ ಮಂಗಳವಾರ ತನ್ನ ಮೊದಲ ಉಮ್ರಾ ನಿರ್ವಹಿಸಲು ತನ್ನ ಕುಟುಂಬದೊಂದಿಗೆ ಪವಿತ್ರ ನಗರವಾದ ಮೆಕ್ಕಾಗೆ ಭೇಟಿ ನೀಡಿದ್ದಾರೆ.

Hina Khan

ಹಿನಾ ಖಾನ್‌ ತಮ್ಮಇನ್‌ಸ್ಟಾಗ್ರಾಮ್‌ ಆಕೌಂಟ್‌ನಲ್ಲಿ 'ಲಬೈಕ್ ಅಲ್ಲಾಹುಮಾ ಲಬ್ಬೈಕ್ ಬಿಸ್ಮಿಲ್ಲಾಹ್ ' ಎಂಬ ಶೀರ್ಷಿಕೆಯೊಂದಿಗೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರು ಸ್ಟೋರಿಯಲ್ಲೂ ಕೆಲವು ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ,

Tap to resize

ಫೋಟೋಗಳಲ್ಲಿ, ಹಿನಾ ಕೌಚ್‌ ಮೇಲೆ ಕುಳಿತು ಬಿಳಿ ಸೂಟ್ ಮತ್ತು ಹಿಜಾಬ್ ಅನ್ನು ಧರಿಸಿರುವುದನ್ನು ಕಾಣಬಹುದು. ಮತ್ತೊಂದರಲ್ಲಿ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ.

ಅವರ ಫೋಟೋಗಳಿಗೆ ಅಭಿಮಾನಿಗಳು ಕೆಂಪು ಹೃದಯದ ಎಮೋಜೋಜಿಗಳ ಜೊತೆಗೆ ಸಾಕಷ್ಟು ಕಾಮೆಂಟ್ ಮಾಡಿದ್ದಾರೆ. ಇದರ ನಂತರ ಹಿನಾ ಮೆಕ್ಕಾದಿಂದ ಸಹ ಫೋಟೋ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ.

Hina Khan

ಈ ನಡುವೆ, ಕೆಲಸದ ವಿಷಯಕ್ಕೆ ಬಂದರೆ ಹಿನಾ ಕೊನೆಯದಾಗಿ ಕುನಾಲ್ ರಾಯ್ ಕಪೂರ್ ಮತ್ತು ಚಂದನ್ ರಾಯ್ ಸನ್ಯಾಲ್ ಅವರೊಂದಿಗೆ ಮರ್ಡರ್ ಮಿಸ್ಟರಿ ಥ್ರಿಲ್ಲರ್ ವೆಬ್ ಶೋ 'ಷಡ್ಯಂತ್ರ'ದಲ್ಲಿ ಕಾಣಿಸಿಕೊಂಡರು

ಟಿವಿ ಧಾರಾವಾಹಿ 'ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ' ಮತ್ತು ಜನಪ್ರಿಯ ಧಾರಾವಾಹಿ 'ಕಸೌತಿ ಜಿಂದಾಯ್ ಕೇ' ನಲ್ಲಿನ ಅವರ ನಕಾರಾತ್ಮಕ ಪಾತ್ರಕ್ಕಾಗಿ ಅವರು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದರು. ಇದಲ್ಲದೆ, ಅವರು 'ರುಂಜುನ್', 'ಬಾರಿಶ್ ಬನ್ ಜಾನಾ', 'ರಾಂಝಾನಾ', 'ಮೈನ್ ಭಿ ಬರ್ಬಾದ್', 'ಹಮ್ಕೋ ತುಮ್ ಮಿಲ್ ಗಯೇ' ಮುಂತಾದ ಹಲವಾರು ಹಿಟ್ ಸಂಗೀತ ವೀಡಿಯೊಗಳ ಭಾಗವಾಗಿದ್ದಾರೆ.

Latest Videos

click me!