ಕಂಚಿ ಸೀರೆಯಲ್ಲಿ ಮಿಂಚಿದ ಕನ್ನಡತಿ ರಂಜನಿ… ಮದುವೆ ಯಾವಾಗ ಕೇಳ್ತಿದ್ದಾರೆ ಫ್ಯಾನ್ಸ್

First Published | Dec 20, 2024, 6:40 PM IST

ಕನ್ನಡತಿ ಸೀರಿಯಲ್ ಮೂಲಕ ಕನ್ನಡಿಗರ ಮನದಲ್ಲಿ ಮನೆಮಾಡಿರುವ ಕನ್ನಡದ ಹುಡುಗಿ ರಂಜನಿ ರಾಘವನ್ ಕಂಚಿಪುರಂ ಸೀರೆಯಲ್ಲಿ ಸೌಂದರ್ಯ ದೇವತೆ ಥರ ಕಾಣಿಸ್ತಿದ್ದಾರೆ. 
 

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಕನ್ನಡತಿಯ ಮೂಲಕ ಭುವನೇಶ್ವರಿ ಆಲಿಯಾಸ್ ಭುವಿ ಆಗಿ ಕನ್ನಡಿಗರ ಮನಸ್ಸಿನಲ್ಲಿ ಭದ್ರ ಸ್ಥಾನ ಪಡೆದ ನಟಿ ರಂಜನಿ ರಾಘವನ್. ಇದೀಗ ತಮ್ಮ ಹೊಸ ಫೋಟೊ ಶೂಟ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. 
 

ರಂಜನಿ ರಾಘವನ್ (Ranjani Raghavan) ನೇರಳೆ ಬಣ್ಣದ ಬಾರ್ಡರ್ ಇರುವ ಪೀಚ್ ಬಣ್ಣದ ಕಂಚಿ ಸೀರೆಯುಟ್ಟಿದ್ದು, ಕಂಚಿ ಸೀರೆಯ ಕಂಪೇ ಬೇರೆ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಸೀರೆಯಲ್ಲಿ ಕನ್ನಡತಿಯ ಬೆಡಗಿ ತುಂಬಾನೆ ಸುಂದರವಾಗಿ ಕಾಣಿಸುತ್ತಿದ್ದಾರೆ. ನಟಿಯ ಅಂದ ನೋಡಿ ಅಭಿಮಾನಿಗಳು ಮನಸೋತಿದ್ದು, ಕಾಮೆಂಟ್ ಮೂಲಕ ಪ್ರೀತಿಯ ಸುರಿಮಳೆ ಸುರಿಸಿದ್ದಾರೆ. 

Tap to resize

ಕಂಚಿ ಸೀರೆಯಲ್ಲಿ ರಂಜನಿ ರಾಘವನ್ ಅಂದ ನೋಡಿ, ಅಮರ ಶಿಲ್ಪಿ ಜಕ್ಕಣ್ಣ ಇವಳ ನೋಡಿ ಬೆರಗಾದ,, ಕುಂಚ ರಾಜ ರವಿವರ್ಮ ಮೈ ಮರೆತು ಶರಣಾದ ಎಂದಿದ್ದಾರೆ. ಅಷ್ಟೇ ಅಲ್ಲ ನಮ್ ಭುವನೇಶ್ವರಿ ಅವರಿಗೆ ದೃಷ್ಟಿ ಆಗುತ್ತೆ. ಇದೆ ತರ ಖುಷಿಯಾಗಿರಿ ಅಂತಾನೂ ಹಾರೈಸಿದ್ದಾರೆ. ತುಂಬಾನೆ ಚೆನ್ನಾಗಿ ಕಾಣಿಸ್ತೀರಿ, ಕಂಚಿ ಸೀರೆಗೆ ಮೆರಗು ತಂದಿರೂ ಸುಂದರ ನೀರೆ ನೀವು ಎಂದೂ ಹೇಳಿದ್ದಾರೆ. ಬ್ಯೂಟಿ ವಿತ್ ಬ್ರೈನ್, ನೀವು ಎಲ್ಲವನ್ನೂ ಚೆನ್ನಾಗಿ ಕ್ಯಾರಿ ಮಾಡ್ತಿದ್ದೀರಿ. ಕನ್ನಡ ಇಂಡಷ್ಟ್ರಿಯ ಲೇಡಿ ಸೂಪರ್ ಸ್ಟಾರ್ ಎಂದು ಕೂಡ ಹಾಡಿ ಹೊಗಳಿದ್ದಾರೆ. 
 

ಈ ಸೀರೆಯನ್ನು ರಂಜನಿ ರಾಘವನ್ ಅವಾರ್ಡ್ ಕಾರ್ಯಕ್ರಮವೊಂದಕ್ಕೆ ಧರಿಸಿದ್ದರು. KWAA ಅವಾರ್ಡ್ಸ್ ಅಂದರೆ ಕರ್ನಾಟಕ ವುಮೆನ್ ಅಚೀವರ್ಸ್ ಅವಾರ್ಡ್ (Karnataka Women Achievers Awards) ಕಾರ್ಯಕ್ರಮದಲ್ಲಿ ರಂಜನಿ ರಾಘವನ್ ಅವರಿಗೆ ಟೆಲಿವಿಶನ್ ನಲ್ಲಿ ಅದ್ಭುತ ಸಾಧನೆ ಮಾಡಿರೋದಕ್ಕಾಗಿ ಪ್ರಶಸ್ತಿ ಲಭ್ಯವಾಗಿದೆ. ಪ್ರಶಸ್ತಿ ಪಡೆಯುತ್ತಿರುವ ಫೋಟೊವನ್ನು ರಂಜನಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. 
 

ಇನ್ನೂ ಕೆಲವರು ರಂಜನಿ ಫೊಟೊ ನೋಡಿ ಮದುವೆ ಯಾವಾಗ ಆಗ್ತೀರ ಅಕ್ಕ ಅಂತಾನೂ ಕೇಳಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಬಾಳ ಸಂಗಾತಿಯಾಗುವ ವ್ಯಕ್ತಿಯ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಸಾಗರ್ ಭಾರಧ್ವಜ್ (Sagar Bharadwaj) ಎಂಬುವವರ ಜೊತೆ‌ ರಂಜನಿ ರಾಘವನ್ ಎಂಗೇಜ್ ಆಗಿದ್ದು, ಜೀವನ ಸಂಗಾತಿ, ನನ್ನ ಹುಡುಗ ಎಂದು ಹ್ಯಾಶ್ ಟ್ಯಾಗ್ ಕೊಟ್ಟು ಫೋಟೋ ಶೇರ್ ಮಾಡಿದ್ದಾಗಿ. ಇತ್ತೀಚೆಗೆ ಇವರ ಸಹೋದರಿಯ ಮದುವೆ ಕೂಡ ಆಗಿತ್ತು. ಆದ್ರೆ ರಂಜನಿ ಮದುವೆ ಯಾವಾಗ ಅನ್ನೋದು ಮಾತ್ರ ಗೊತ್ತಿಲ್ಲ.  
 

Latest Videos

click me!