ಕಳ್ಳನ ಸಾಹಿತ್ಯ ಪ್ರೀತಿಗೆ ಕನ್ನಡತಿ ಖ್ಯಾತಿಯ ರಂಜನಿ ರಾಘವನ್ ಫುಲ್ ಫಿದಾ!

First Published | Jul 18, 2024, 4:19 PM IST

ಕನ್ನಡ ಕಿರುತೆರೆ ಹಿರಿತೆರೆ ನಟಿ, ಲೇಖಕಿಯಾಗಿರುವ ರಂಜನಿ ರಾಘವನ್ ಕಳ್ಳನೊಬ್ಬನ ಸಾಹಿತ್ಯ ಪ್ರೀತಿಯನ್ನು ಕೊಂಡಾಡಿದ್ದಾರೆ. 
 

ಪುಟ್ಟ ಗೌರಿ ಮದುವೆ, ಕನ್ನಡತಿ ಸೀರಿಯಲ್ ಮೂಲಕ ಕನ್ನಡಿಗರ ಮನ ಗೆದ್ದ ನಟಿ ರಂಜನಿ ರಾಘವನ್  (Ranjani raghavan) ಇದೀಗ ಕಳ್ಳನ ಸಾಹಿತ್ಯ ಪ್ರೀತಿಯನ್ನು ಮೆಚ್ಚಿಕೊಂಡು ಪ್ರಶಂಸಿಸಿದ್ದಾರೆ. 
 

ತಮ್ಮ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ನ್ಯೂಸ್ ಒಂದರ ತುಣುಕನ್ನು ಪೋಸ್ಟ್ ಮಾಡಿರುವ ರಂಜನಿ, ಕಳ್ಳನ ಸಾಹಿತ್ಯ ಪ್ರೇಮಕ್ಕೆ ನಾನು ಇಂಪ್ರೆಸ್ ಆಗಿದ್ದೀನಿ ಎಂದು ಹೇಳಿ, ಸಾಹಿತಿಗಳಿಗೆ ಸಲಹೆ ಕೂಡ ಕೊಟ್ಟಿದ್ದಾರೆ. 
 

Tap to resize

ರಂಜನಿ ಹಂಚಿಕೊಂಡಿದ್ದ ಸುದ್ದಿಯ ಸಾರಾಂಶ ಹೀಗಿತ್ತು. ಪ್ರಖ್ಯಾತ ಮರಾಠಿ ಕವಿ, ಸಾಹಿತಿ ಮತ್ತು ಕಾರ್ಮಿಕ ನಾಯಕರಾಗಿದ್ದ ನಾರಾಯಣ ಸುರ್ವೆ ಅವರಿಗೆ ಸೇರಿದ ಮನೆಯಿಂದ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದ ಕಳ್ಳ, ಅದು ಸಾಹಿತಿಗಳ ಮನೆ ಎಂದು ತಿಳಿದ ಬಳಿಕ ಕ್ಷಮಾಪತ್ರ ಬರೆದು ಕದ್ದ ಎಲ್ಲಾ ಸಾಮಾಗ್ರಿಗಳನ್ನು ಹಿಂದಿರುಗಿಸಿದ್ದ. 
 

ಈ ಸುದ್ದಿ ಸುದ್ದಿ ಪತ್ರಿಕೆಯಲ್ಲಿ ಪ್ರಸಾರವಾಗಿದ್ದು, ಅದರದ್ದೆ ತುಣುಕನ್ನು ರಂಜನಿ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿ, ಕಥೆ ಕವಿತೆಗಳನ್ನು ಬರೆಯುವವರು ಇನ್ಮೇಲೆ ಮನೆ ಮುಂದೆ ಸಾಹಿತಿಗಳು ಅಂತ ಬೋರ್ಡ್ ಹಾಕ್ಕೊಂಡ್ರೆ ಮನೆ ಕಳ್ಳತನ ಆಗುವ ಚಾನ್ಸ್ ಕಡಿಮೆ ಇದೆ ಅಂತ ಈ ವರದಿ ಸಾಬೀತು ಪಡಿಸಿದೆ. ಕಳ್ಳನ ಸಾಹಿತ್ಯ ಪ್ರೇಮಕ್ಕೆ ನಾನು ಇಂಪ್ರೆಸ್ ಆದೆ ಎಂದು ಬರೆದುಕೊಂಡಿದ್ದಾರೆ. 

ಸ್ವತಃ ಸಾಹಿತಿಯಾಗಿರುವ ರಂಜನಿ ಈಗಾಗಲೇ ಎರಡು ಪುಸ್ತಕಗಳನ್ನು ಬರೆದಿದ್ದಾರೆ. ಕಥೆ ಡಬ್ಬಿ ಮತ್ತು ಸ್ವೈಪ್ ರೈಟ್ ಪುಸ್ತಕ ಬರೆದಿದ್ದಾರೆ. ಇತ್ತೀಚೆಗೆ ಅವರ ಸ್ವೈಪ್ ರೈಟ್ ಪುಸ್ತಕಕ್ಕಾಗಿ ಯುವ ಸಾಹಿತ್ಯ ರತ್ನ ಪ್ರಶಸ್ತಿ ಕೂಡ ಬಂದಿತ್ತು. 

ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ನಟಿ ರಂಜನಿ ಸದ್ಯಕ್ಕಂತೂ ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಇವರು ನಟಿಸಿರುವ ಕಾಂಗರೂ, ನೈಟ್ ಕರ್ಫ್ಯೂ ಸಿನಿಮಾ ಬಿಡುಗಡೆಯಾಗಿತ್ತು. ಇದೀಗ ಸತ್ಯಮ್ ಮತ್ತು ಸ್ವಪ್ನ ಮಂಟಪ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 
 

Latest Videos

click me!