ಫೋಟೋಗೆ ವಿಚಿತ್ರ ಪೋಸ್ ಕೊಟ್ಟ ಇಶಾನಿ, ಕಾಗೆ ಕಕ್ಕ ಮಾಡ್ತಿದ್ಯಾ ಅಂತ ಟಾಂಟ್ ಕೊಟ್ಟ ನೆಟ್ಟಿಗರು

Published : Jul 17, 2024, 04:26 PM IST

ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿ ಮತ್ತು ರ್ಯಾಪರ್ ಇಶಾನಿ ಸೋಶಿಯಲ್ ಮಿಡಿಯಾದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ಸಖತ್ ಟ್ರೋಲ್ ಆಗ್ತಿದೆ.   

PREV
17
ಫೋಟೋಗೆ ವಿಚಿತ್ರ ಪೋಸ್ ಕೊಟ್ಟ ಇಶಾನಿ, ಕಾಗೆ ಕಕ್ಕ ಮಾಡ್ತಿದ್ಯಾ ಅಂತ ಟಾಂಟ್ ಕೊಟ್ಟ ನೆಟ್ಟಿಗರು

ಬಿಗ್‌ಬಾಸ್ ಸೀಸನ್ 10 (Bigg Boss Season 10) ರ ಮೂಲಕ ಸದ್ದು ಮಾಡಿದ ಸ್ಪರ್ಧಿ ಮೈಸೂರು ಮೂಲದ ಲಾಸ್ ಏಂಜಲೇಸ್‌ನಲ್ಲಿ ನೆಲೆಸಿದ ಗಾಯಕಿ ರ್ಯಾಪರ್ ಇಶಾನಿ. ಪಾಪ್, ಹಿಪ್ ಹಾಪ್, ರಾಪ್ ಸಂಗೀತವನ್ನ ಫ್ಯೂಶನ್ ಮಾಡಿ ಹಾಡ್ತಿದ್ದ ಇವ್ರು ಬಿಗ್ ಬಾಸ್ ಸೀಸನ್ 10 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ಬಳಿಕ ಕನ್ನಡಿಗರ ಮನೆಮಾತಾದರು. 
 

27

ಬಿಗ್‌ಬಾಸ್ ಮನೆಯಲ್ಲಿರುವಾಗ್ಲೂ ಅಲ್ಲಿಂದ ಹೊರ ಬಂದ ಮೇಲೂ ತಮ್ಮ ಮಾತುಗಳಿಂದಲೇ ಸಿಕ್ಕಾಪಟ್ಟೆ ಟ್ರೋಲ್ ಆಗಿ, ಜನರಿಂದ ಸಿಕ್ಕಾಪಟ್ಟೆ ಟೀಕೆಗಳನ್ನು ಎದುರಿಸಿದ ಇಶಾನಿ (Eshani) ಇದೀಗ ಮತ್ತೆ ತಮ್ಮ ಹೊಸ ಫೋಟೋ ಶೂಟ್ ಮೂಲಕ ಟ್ರೋಲ್ ಆಗ್ತಿದ್ದಾರೆ. 
 

37

ಇಶಾನಿ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಒಂದಿಷ್ಟು ಹೊಸ ಫೋಟೋಶೂಟ್ ಆಲ್ಬಂ ಹಾಕಿದ್ದಾರೆ. ಇದ್ರಲ್ಲಿ ಇಶಾನಿ ವಿವಿಧ ರೀತಿಯಲ್ಲಿ ಕುಳಿತುಕೊಂಡಿರೋ ಭಂಗಿಯಲ್ಲೇ ಚಿತ್ರವಿಚಿತ್ರವಾಗಿ ಪೋಸ್ ಕೊಟ್ಟಿದ್ದು, ಇವರ ಪೋಸ್ ಹಾವಾಭಾವ ನೋಡಿ ಜನ ಏನೇನೋ ಅನ್ನುತ್ತಿದ್ದಾರೆ. 
 

47

ಇಶಾನಿ ಗ್ರೀನ್ ಬಣ್ಣದ ಕ್ರಾಪ್ ಟಾಪ್ ಮತ್ತು ಪ್ಯಾಂಟ್ ಧರಿಸಿದ್ದು, ಅದಕ್ಕೆ ಮ್ಯಾಚ್ ಆಗುವ ದೊಡ್ಡದಾದ ಗೋಲ್ಡನ್ ಇಯರಿಂಗ್ಸ್ ಮತ್ತು ಬಳೆ ಧರಿಸಿದ್ದು, ಹೀಲ್ಡ್ ಜೊತೆ ಸ್ಟೈಲ್ ಮಾಡಿದ್ದಾರೆ. ಅಪೂರ್ವ ರಾಹುಲ್ ಮೇಕಪ್ ಮತ್ತು ಉಮೇಶ್ ಫೋಟೋಗ್ರಫಿಯವರ ಫೋಟೋ ಶೂಟ್ (Photoshoot) ನಲ್ಲಿ ಇಶಾನಿ ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ ನಿಜಾ, ಆದರೆ ಜನರಿಗ್ಯಾಕೋ ಇಶಾನಿ ಪೋಸ್ ಅಷ್ಟೊಂದು ಇಷ್ಟ ಆಗಿಲ್ಲ. 
 

57

ಇಶಾನಿ ಫೋಟೋ ನೋಡಿ ಜನ ಕಾಗೆ ಕಕ್ಕ ಮಾಡ್ತಿದೆ ಫ್ರೆಂಡ್ಸ್ ಎಂದು ಹೇಳೋ ಮೂಲಕ ಈ ಹಿಂದೆ ಇಶಾನಿ ಬಿಗ್ ಬಾಸ್ ನಲ್ಲಿ ಡ್ರೋನ್ ಪ್ರತಾಪ್ ಗೆ ಹೇಳಿದ ಮಾತನ್ನ ಮತ್ತೆ ನೆನಪಿಸಿದ್ದಾರೆ. ಬಿಗ್ ಬಾಸ್ ನಲ್ಲಿ ಇಶಾನಿ ಡ್ರೋನ್ ಪ್ರತಾಪ್ ಗೆ (Drone Prathap) ಕಾಗೆ ಗೊತ್ತಿಲ್ವಾ? ಕಾಗೆ ಕಕ್ಕ ಮಾಡಿಬಿಟ್ಟು.. ಎಲ್ಲಾ ಕಡೆ ಹೋಗ್ತಾನೇ ಇದೆ. ಸಿಂಪಥಿ ಕಾರ್ಡ್‌ ಯೂಸ್‌ ಮಾಡಿ.. ಉಳ್ಕೊಂಡಿದೆ ಎಂದಿದ್ದರು. 
 

67

ಈ ಕಾಮೆಂಟ್ ಗೆ ಅಂದು ಪ್ರತಾಮ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲೇ ಇಶಾನಿಗೆ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡಿದ್ದರು. ಇದಾದ ಬಳಿಕ ಇಶಾನಿ ಅದಕ್ಕೆ ಸಮಜಾಯಿಶಿ ಕೂಡ ನೀಡೀದ್ದರು. ಇದೀಗ ಇಶಾನಿ ಫೊಟೋ ನೋಡಿ, ಮತ್ತೆ ಆಕೆಯದ್ದೆ ಕಾಮೆಂಟನ್ನ ಆಕೆಗೆ ನೀಡಿದ್ದಾರೆ. 
 

77

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿರೋ ಇಶಾನಿ I can be sassy; classy and messy. That’s who I am. You either like me for me or you don’t ಎಂದು ಕ್ಯಾಪ್ಶನ್ ಕೊಟ್ಟಿದ್ದರು. ಇಶಾನಿ ಫೋಟೋಗೆ ಅನೇಕರು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದು, ಹಾಟ್, ಬೋಲ್ಡ್ , ಬ್ಯೂಟಿಫುಲ್ ಎಂದು ಸಹ ಕಾಮೆಂಟ್ ಮಾಡಿದ್ದಾರೆ. 
 

Read more Photos on
click me!

Recommended Stories