ಅಮ್ಮನ ಮಡಿಲಿನಲ್ಲಿ ಕುಳಿತ ಈ ಮಗು ಯಾರು ಎಂದು ನಿಮಗೆ ಗೊತ್ತಿದೆಯಾ? ಸೀರಿಯಲ್ ಕಲಾವಿದೆಯಾಗಿ ಮಿಂಚುತ್ತಿರುವ ನಟಿ, ಕಿರುತೆರೆ ಮೂಲಕ ಎಲ್ಲರ ಗಮನ ಸೆಳೆದು, ಕರುನಾಡಿನ ಮನೆ ಮಗಳಾಗಿದ್ದಾರೆ. ತಾಯಿ ಹಟ್ಟುಹಬ್ಬದ ಹಿನ್ನೆಲೆ ನಟಿ ತಮ್ಮ ಬಾಲ್ಯದ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
27
ನಟಿಯ ಬಾಲ್ಯದ ಫೋಟೋ ನೋಡಿದ ನೆಟ್ಟಿಗರು ಅಂದು-ಇಂದು ನೀವು ತುಂಬಾ ಕ್ಯೂಟ್ ಎಂದು ಹೊಗಳುತ್ತಿದ್ದಾರೆ. ತಮ್ಮ ಇಂದಿನ ಸಾಧನೆಗೆ ತಾಯಿಯೇ ಕಾರಣ ಎಂದು ನಟಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
37
ರಾಮಾಚಾರಿ ಸೀರಿಯಲ್ ಅಂದ್ರೆ ಕಣ್ಮುಂದೆ ಬರೋದು ಚಾರು-ಚಾರಿಯ ಲವ್ ಸ್ಟೋರಿ. ಧಾರಾವಾಹಿಯಲ್ಲಿ ಚಾರುಲತಾ ಆಗಿ ಕಾಣಿಸಿಕೊಂಡಿರುವ ನಟಿ ಮೌನಾ ಗುಡ್ಡೆಮನೆ ತಮ್ಮ ನಟನೆಯಿಂದ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ.
47
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ ಮೌನಾ, ತಮ್ಮ ಯಶಸ್ಸಿನ ಹಿಂದಿರುವ ವ್ಯಕ್ತಿಯನ್ನು ಪರಿಚಯ ಮಾಡಿಸಿದ್ದಾರೆ. ಈ ಸಂಬಂಧ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್‌ಗೆ 74 ಸಾವಿರಕ್ಕೂ ಅಧಿಕ ಲೈಕ್ಸ್, ನೂರಾರು ಕಮೆಂಟ್‌ಗಳು ಬಂದಿವೆ.
57
ತಾಯಿ ಕುಸುಮಾ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಹಂಚಿಕೊಂಡು ಅಮ್ಮನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ತಾಯಿ ಜೊತೆಗಿದ್ದರೆ ಏನು ಬೇಕಾದರೂ ಸಾಧಿಸಬಹುದು. ಮಕ್ಕಳು ತಂದೆ ತಾಯಿ ಪ್ರೀತಿ ಗೆ ಬೆಲೆ ಕಟ್ಟಕ್ ಆಗಲ್ಲ ಮಾಣಿಕ್ಯ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
67
ಮೌನ ಪೋಸ್ಟ್ ಹೀಗಿದೆ
ನನ್ನ ಯಶಸ್ಸಿನ ಹಿಂದಿರುವ ಶಕ್ತಿ, ನನ್ನ ಜೀವನದ ಪ್ರೇರಣಾ ದೀಪ್ತಿ, ನನ್ನ ತಾಯಿ, ನನ್ನ ದೇವತೆ. ನೀನು ನನ್ನ ಎಲ್ಲಾ ಜಯಗಳ ಹಿಂದಿರುವ ಕಾರಣ, ಹುಟ್ಟುಹಬ್ಬದ ಶುಭಾಶಯಗಳು, ಅಮ್ಮಾ ಎಂದು ಮೌನಾ ಗುಡ್ಡೆಮನೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
77
ಹುಟ್ಟುಹಬ್ಬದ ಶುಭಾಶಯಗಳು ಎಲ್ಲಾ ಒಳ್ಳೇದಾಗ್ಲಿ ಮೇಡಂ ನಿಮಗೆ, ಮೌನಾ ನೋಡಲು ನಿಮ್ಮ ಹಾಗೆ ಕಾಣಿಸುತ್ತಾರೆ ಎಂದು ಕಮೆಂಟ್ ಮಾಡಿರುವ ನೆಟ್ಟಿಗರು ಕುಸುಮಾ ಅವರಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. ಮೌನಾ ಇನ್‌ಸ್ಟಾಗ್ರಾಂನಲ್ಲಿ 3.5 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.