ಜೀ ಕನ್ನಡದ ಲಕ್ಷ್ಮೀ ನಿವಾಸ ಧಾರಾವಾಹಿಯ ನಟಿ ಅಶ್ವಿನಿ ಮೂರ್ತಿ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದು, ಟ್ರೆಡಿಷನಲ್ ಲುಕ್‌ಗೆ ಮಾಡರ್ನ್ ಟಚ್ ನೀಡಿದ್ದಾರೆ. ಲೆಹೆಂಗಾ ಬದಲು ಶಾರ್ಟ್ಸ್ ಧರಿಸಿ ಹೊಸ ಲುಕ್‌ನಲ್ಲಿ ಮಿಂಚುತ್ತಿದ್ದಾರೆ.
ಕಲಾವಿದರು ಅಂದ್ರೆ ತಮಗೆ ಸಿಗುವ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿಸುವ ಕಲಾದೇವಿಯ ಮಕ್ಕಳು. ತಾವು ಎಲ್ಲಾ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬುವುದು ಪ್ರತಿಯೊಬ್ಬ ಕಲಾವಿದನ ಆಸೆಯಾಗಿರುತ್ತದೆ. ಇದಕ್ಕಾಗಿ ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ಛಲ, ಹುಮ್ಮಸ್ಸು, ಉತ್ಸಾಹ ಅವರಲ್ಲಿರುತ್ತದೆ.
26
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀ ನಿವಾಸ ಧಾರಾವಾಹಿಯ ಚೆಲುವಿ ಎಂದೇ ಖ್ಯಾತಿ ಪಡೆದಿರುವ ನಟಿ ಅಶ್ವಿನಿ ಮೂರ್ತಿ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
36
ಧಾರಾವಾಹಿಯಲ್ಲಿ ಲಂಗ-ದಾವಣಿ ಹಾಕಿಕೊಂಡು ಮುಗ್ಧ ಹುಡುಗಿಯಾಗಿ ಅಶ್ವಿನಿ ಮೂರ್ತಿ ನಟಿಸುತ್ತಿದ್ದಾರೆ. ಇದೇ ಧಾರಾವಾಹಿ ತಮಿಳು ಭಾಷೆಗೆ ರಿಮೇಕ್ ಆಗಿದ್ದು, ಅಲ್ಲಿಯೂ ಚೆಲುವಿ ಪಾತ್ರದಲ್ಲಿ ಅಶ್ವಿನಿ ಮೂರ್ತಿ ನಟಿಸುತ್ತಿದ್ದಾರೆ.
46
ಇದೀಗ ಹೊಸ ಲುಕ್‌ನೊಂದಿಗೆ ಅಶ್ವಿನಿ ಮೂರ್ತಿ ಪ್ರೇಕ್ಷಕರ ಮುಂದೆ ಕಾಣಿಸಿಕೊಂಡಿದ್ದಾರೆ. ಹೊಸ ಫೋಟೋಶೂಟ್‌ನಲ್ಲಿ ಟ್ರೆಡಿಷನಲ್ ಲುಕ್‌ಗೆ ಮಾಡರ್ನ್ ಟಚ್ ಕೊಡಲಾಗಿದೆ. ಕೈ ತುಂಬಾ ಬಳೆ, ಚೆಂದದ ಕಿವಿಯೊಲೆ, ಬೈತಲೆ, ಬಿಂದಿ ಧರಿಸಿದ್ದಾರೆ.
56
ಇದೀಗ ಹೊಸ ಲುಕ್‌ನೊಂದಿಗೆ ಅಶ್ವಿನಿ ಮೂರ್ತಿ ಪ್ರೇಕ್ಷಕರ ಮುಂದೆ ಕಾಣಿಸಿಕೊಂಡಿದ್ದಾರೆ. ಹೊಸ ಫೋಟೋಶೂಟ್‌ನಲ್ಲಿ ಟ್ರೆಡಿಷನಲ್ ಲುಕ್‌ಗೆ ಮಾಡರ್ನ್ ಟಚ್ ಕೊಡಲಾಗಿದೆ. ಕೈ ತುಂಬಾ ಬಳೆ, ಚೆಂದದ ಕಿವಿಯೊಲೆ, ಬೈತಲೆ, ಬಿಂದಿ ಧರಿಸಿದ್ದಾರೆ.
66
ಇದೆಲ್ಲವೂ ಟ್ರೆಡಿಷನಲ್ ಲುಕ್ ಆದ್ರೆ, ಲೆಹೆಂಗಾ ಬದಲು ಶಾರ್ಟ್ಸ್ ಧರಿಸುವ ಮೂಲಕ ತಮ್ಮ ಫೋಟೋಶೂಟ್‌ಗೆ ಅಶ್ವಿನಿ ಮೂರ್ತಿ ಮಾಡರ್ನ್ ಟಚ್ ನೀಡಿದ್ದಾರೆ. ಹೈ ಹೀಲ್ ಧರಿಸಿ ವಿವಿಧ ಪೋಸ್ ನೀಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿಕೊಂಡಿರುವ ಅಶ್ವಿನಿ ಮೂರ್ತಿ, ಈ ಹುಡುಗಿ ನಿಮಗೆ ಗೊತ್ತಾ ಎಂದು ಬರೆದುಕೊಂಡಿದ್ದಾರೆ.