ಮಾನ್ಯತಾ - ವೈಶಾಖ ಮುಖವಾಡ ಕಳಚಿದ ಕಿಟ್ಟಿ... ಇದು ಬರೀ‌ ಕನಸು ಹೆಚ್ಚು ಖುಷಿ ಪಡ್ಬೇಡಿ ಅಂತಿದ್ದಾರೆ ವೀಕ್ಷಕರು

First Published | Aug 26, 2024, 1:47 PM IST

ರಾಮಾಚಾರಿ ಧಾರಾವಾಹಿಯಲ್ಲಿ ಭಾರಿ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ಮನೆಗೆ ಮರಳಿದ ಕಿಟ್ಟಿ ಆಲಿಯಾಸ್ ಕೃಷ್ಣ ಮತ್ತೆ ಮರಳಿದ್ದು, ವೈಶಾಖ ಮತ್ತು ಮಾನ್ಯತಾ ಮುಖವಾಡ ಕಳಚಿ ಬಿದ್ದಿದೆ. ಆದ್ರೆ ಇದು ನಿಜಾನ? 
 

ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ರಾಮಾಚಾರಿಯಲ್ಲಿ (Ramachari) ಅಂತೂ ಇಂತೂ ಚಾರಿ ಮತ್ತು ಚಾರು ಮದ್ವೆಯಾಗಿದೆ. ಎಲ್ಲಾ ಸಮಸ್ಯೆಗಳನ್ನ ನಿವಾರಿಸಿ ಮಾನ್ಯತಾ ಮತ್ತು ವೈಶಾಖ ಪ್ಲ್ಯಾನ್ ಉಲ್ಟಾ ಹೊಡೆಯುವಂತೆ ಕಿಟ್ಟಿ ಬಂದು ನಿಂತು ಮದುವೆ ಮಾಡಿಸಿದ್ದಾನೆ. 
 

ಇದೀಗ ರಿಲೀಸ್ ಆದ ಪ್ರೊಮೋ ನೋಡಿದ್ರೆ ಮತ್ತೊಂದು ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಅದೇನಂದ್ರೆ ಕಿಟ್ಟಿ ಮನೆಯವರ ಎದುರು ವೈಶಾಖ ಮತ್ತು ಮಾನ್ಯತಾ ಮುಖವಾಡ ಕಳಚಿ ಎಲ್ಲರಿಗೂ ಸತ್ಯ ಹೇಳಿದ್ದಾರೆ. ಈ ಪ್ರೊಮೊ ನೋಡಿ ವೀಕ್ಷಕರಂತೂ ಸಖತ್ ಖುಷಿ ಪಟ್ಟಿದ್ದಾರೆ. ಆದರೆ ಇದು ನಿಜಾನ? 
 

Tap to resize

ವೈಶಾಖ ಈ ಮನೆಯಲ್ಲಿ ಸ್ಮಶಾನ ಮಾಡಕ್ಕೆ ಬಂದಿರೋ ಕೊಲೆಗಾರ್ತಿ ಎನ್ನುತ್ತಾನೆ ಕಿಟ್ಟಿ. ಅಪ್ಪ ಯಾಕೆ ಸುಮ್ನೆ ಇದ್ದೀರಿ ಈವಾಗಾದ್ರೂ ಮಾತನಾಡಿ, ವೈಶಾಖ ಎಂಥವಳು ಅನ್ನೋದನ್ನ ಹೇಳಿ ಎನ್ನುತ್ತಾನೆ ಕೃಷ್ಣ. ಕೃಷ್ಣನ ಮಾತು ಕೇಳಿ ನಾರಾಯಣಾಚಾರ್ಯರು ಸಹ ಎಲ್ಲವನ್ನೂ ಹೇಳುತ್ತಾರೆ. 
 

ಮನೆ ಬೆಳಗೋದಕ್ಕೆ ಬಂದ ಸೊಸೆ, ಈ ಮನೆಯನ್ನು ಮನೆಯವರ ಮನಸನ್ನು ಸುಟ್ಟು ಬೂದಿ ಮಾಡಿದ್ದಾಳೆ ಎಂದು ನಿಜವನ್ನೂ ಕೊನೆಗೂ ನಾರಾಯಣಾಚಾರ್ಯರು ಒಪ್ಪಿಕೊಳ್ಳುತ್ತಾರೆ. ಕೃಷ್ಣ ಆರಂಭದಿಂದ ಎಲ್ಲಾ ಸತ್ಯವನ್ನು ಹೇಳುತ್ತಾನೆ, ತನ್ನ ಕೊಲೆ ಮಾಡೋದಕ್ಕೆ ಈ ಮನೆಗೆ ಕರೆಯಿಸಿದ ವಿಚಾರವನ್ನು ಹೇಳುತ್ತಾನೆ. ಅದನ್ನು ಸುಳ್ಳು ಎಂದು ಹೇಳುವ ವೈಶಾಖ ಕೆನ್ನೆಗೆ ಅವಳ ಗಂಡ ಕಪಾಳ ಮೋಕ್ಷನೂ ಮಾಡ್ತಾನೆ. 
 

ಆದರೆ ಇದೆಲ್ಲಾ ಇಷ್ಟು ಬೇಗ ಬೇಗನೆ ನಡೆಯೋದನ್ನ ನೋಡಿದ್ರೆ, ಇದೆಲ್ಲಾ ನಿಜಾನ? ಅಥವಾ ಕನಸೋ ಅನ್ನೋದು ಮಾತ್ರ ಗೊತ್ತಾಗ್ತಿಲ್ಲ. ಯಾಕಂದ್ರೆ ಅಷ್ಟು ಬೇಗ ಗೊತ್ತಾಗುತ್ತೆ ಅಂದ್ರೆ ಸೀರಿಯಲ್ ಬೇಗನೆ ಮುಗಿಯುತ್ತೆ ಅಂತಾನೆ ಅರ್ಥ. ಹಾಗಿದ್ರೆ ಬಿಗ್ ಬಾಸ್ (Bigg Boss) ಆರಂಭವಾಗೋ ಮುನ್ನ ರಾಮಾಚಾರಿ ಸೀರಿಯಲ್ ಮುಗಿಯುತ್ತಾ? 
 

ವೀಕ್ಷಕರು ಈಗಾಗಲೇ ಹೇಳಿದ್ದು ಆಗಿದೆ, ಇದು ಕನಸು ಅಂತ. ಒಬ್ಬರು ಹೇಳಿದ್ದಾರೆ ಇದು ಮಾನ್ಯತಾ ಕಾಣುವ ಕನಸು, ಕನಸಿನಲ್ಲೂ ಸಹ ರಾಮಾಚಾರಿ ಯಾವುದಕ್ಕೂ ರಿಯಾಕ್ಟ್ ಮಾಡೇ ಇಲ್ಲ ಅಂತ. ಕಥೆಯನ್ನ ಇನ್ನಷ್ಟು ಎಳೆದುಕೊಂಡು ಹೋಗೊದಕ್ಕೆ ಎಲ್ಲಾ ಸತ್ಯವನ್ನು ಒಂದೇ ಸಲಕ್ಕೆ ಹೇಳೋದಿಲ್ಲ ಅಂತಾನೂ ಜನ ಹೇಳಿದ್ದಾರೆ. 
 

ಆದರೆ ಇನ್ನೂ ಒಂದಷ್ಟು ಜನರು ಎಪಿಸೋಡ್ ಪ್ರೊಮೊ ನೋಡಿ ಖುಷಿ ಪಟ್ಟಿದ್ದು, ಅಬ್ಬಬ್ಬಾ ಇವತ್ತಿನ್ ಎಪಿಸೋಡ್ ಬೆಂಕಿ ಗುರು, ವಾವ್ ಕೊನೆಗೂ ಸತ್ಯ ಹೇಳೋ ಎಪಿಸೋಡ್ ನೋಡಿ ಸಮಾಧಾನ ಆಯ್ತು, ಕಿಟ್ಟಪ್ಪ ಸೂಪರ್, ಈ ವಾರದ ಕಿಚ್ಚನ ಚಪ್ಪಾಳೆ ಕಿಟ್ಟಿಗೆ ಕೊಡಬೇಕು ಅಂತಾನೂ ಹೇಳಿದ್ದಾರೆ ಜನ. 
 

ಇನ್ನೂ ಒಬ್ಬರು ಕಾಮೆಂಟ್ ಮಾಡಿ, ನಾವು 4 ವರ್ಷದಿಂದ ಸಿರಿಯಲ್ ನೋಡಿದ್ದು ವೇಸ್ಟ್. ಸತ್ಯ ಹೇಳಿದ ಮೇಲೆ ಯಾರು ಶಿಕ್ಷೆ ಕೊಡಲ್ಲ... ಅಯ್ಯೋ ಆಗಿದ್ದು ಆಯ್ತು ಎಲ್ಲರೂ ಚೆನ್ನಾಗಿರೋಣ ಅಂತ ಕ್ಷಮಿಸುತ್ತೀರಾ. ಆಮೇಲೆ ಮತ್ತೆ ಅದೇ ಚಾಳಿ ಹಿಡಿತಾರೆ ಈ ವೈಶಾಖ ಮತ್ತೆ ಮಾನ್ಯತ.. ಆಮೇಲೆ ಮತ್ತೆ ಸ್ಟಾರ್ಟ್ ಆಗುತ್ತೆ ಈ ಗೀತಾ ಸಿರಿಯಲ್ ತರ. ಏನೋ ಅರ್ಥ ಇಲ್ಲದ ಮುಕ್ತಾಯ ಹೇಳ್ತೀರಾ. ಇದನ್ನು ಬಿಟ್ಟು ಸರಿಯಾಗಿ ಬಾರಿಸಿ ಜೈಲಿಗೆ ಹಾಕಿ ಶಿಕ್ಷೆ ಕೊಡಿಸಿ. ಆ ಸಾಧನಾನ ಬಿಟ್ಟಂಗೆ ಬಿಡಬೇಡಿ ಎಂದು ಹೇಳ್ತಿದ್ದಾರೆ ವೀಕ್ಷಕರು. 
 

Latest Videos

click me!