ಕಿರುತೆರೆ ನಟಿ ಭವ್ಯಾ ಗೌಡ ಕೈಯಲ್ಲಿ ಕೇಸರಿ ದಾರ; ಮಾಂಸ ತಿನ್ನೋದು ಬಿಟ್ರಾ ಎಂದ ನೆಟ್ಟಿಗರು!

Published : Aug 26, 2024, 12:21 PM IST

ಗೀತಾ ಕೈಯಲ್ಲಿ ಕೇಸರಿ ದಾರ. ಎಷ್ಟು ಮಾಡರ್ನ್‌ ಆಗಿದ್ದರೂ ದಾರ ತೆಗೆದಿಟ್ಟಿಲ್ಲ ಅನ್ನೋದೇ ಖುಷಿ ಎಂದ ನೆಟ್ಟಿಗರು.....

PREV
17
 ಕಿರುತೆರೆ ನಟಿ ಭವ್ಯಾ ಗೌಡ ಕೈಯಲ್ಲಿ ಕೇಸರಿ ದಾರ; ಮಾಂಸ ತಿನ್ನೋದು ಬಿಟ್ರಾ ಎಂದ ನೆಟ್ಟಿಗರು!

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಗೀತಾ ಧಾರಾವಾಹಿಯಲ್ಲಿ ಮಿಂಚುತ್ತಿದ್ದ ಭವ್ಯಾ ಗೌಡ ಈಗ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.

27

ಸೀರಿಯಲ್ ಮುಗಿದ ಮೇಲೂ ಭವ್ಯಾ ಗೌಡ ಸುದ್ದಿಯಲ್ಲಿ ಇರಲು ಪ್ರಮುಖ ಕಾರಣವೇ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವುದು.

37

ಖಾಸಗಿ ಟಿವಿ ಕಾರ್ಯಕ್ರಮಗಳು, ಓಪನಿಂಗ್ ಕಾರ್ಯಕ್ರಮಗಳು, ಪ್ರೀಮಿಯರ್ ಶೋಗಳು, ಬ್ರ್ಯಾಂಡ್‌ ಜಾಹೀರಾತುಗಳು ಹೀಗೆ ಭವ್ಯಾ ಕೈಯಲ್ಲಿ ಇರುವುದು ಒಂದೆರಡಲ್ಲ.

47

ಕೆಲವು ದಿನಗಳ ಹಿಂದೆ ಮಾಯಾ ಡಿಸೈನರ್ ಸ್ಟುಡಿಯೋ ಅವರ ನೀಲಿ ಬಣ್ಣದ ಲಾಂಗ್ ಮ್ಯಾಕ್ಸಿ ಗೌನ್‌ನನ್ನು ಭವ್ಯಾ ಗೌಡ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ.

57

ಈ ಲುಕ್‌ನಲ್ಲಿ ಭವ್ಯಾ ಗೌಡ ತಮ್ಮ ಬಲಗೈಗೆ ಕಟ್ಟಿರುವ ಕೇಸರಿ ಬಣ್ಣದ ದಾರ ನೆಟ್ಟಿಗರ ಗಮನ ಸೆಳೆದಿದೆ. ಇದರ ಬಗ್ಗೆ ಸಾಕಷ್ಟು ಪ್ರಶ್ನೆ ಕೇಳಿದ್ದಾರೆ.

67

ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಗುಡಿಯಲ್ಲಿ ಈ ರೀತಿ ದಾರವನ್ನು ಹೆಚ್ಚಾಗಿ ಕೊಡುತ್ತಾರೆ. ದೇವಸ್ಥಾನದಲ್ಲಿ ಕಾಯಿ ಕಟ್ಟಿದವರು 16 ದಿನಗಳ ಕಾಲ ಕಟ್ಟಿಕೊಂಡಿರುತ್ತಾರಂತೆ.

77

ಏನ್ ಮೇಡಂ ಕೈಯಲ್ಲಿ ದಾರ ನೋಡಿದರೆ ಏನೋ ದೊಡ್ಡ ಬೇಡಿಕೆ ಇಟ್ಟು ಪೂಜೆ ಮಾಡುತ್ತಿದ್ದೀರಾ ಅನ್ಸುತ್ತೆ. ಈ ದಾರಿ ಕಟ್ಟಿದವರು ಮಾಂಸ ತಿನ್ನಬಾರದು ನೀವು ಬಿಟ್ಬಿಟ್ಟಿದೀರಾ ಹೇಗೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

Read more Photos on
click me!

Recommended Stories