ಸೀರೆಯಲ್ಲಿ ಮಿಂಚುತ್ತಿದ್ದ ನಮ್ಮ ರಾಧಾ ಮಿಸ್ ಈಗ ಸಖತ್ ಹಾಟ್ ಆಗ್ಬಿಟ್ಟಿದ್ದಾರೆ ಕಣ್ರೀ …

First Published | Aug 25, 2024, 2:08 PM IST

ರಾಧಾ ರಮಣ ಧಾರಾವಾಹಿಯಲ್ಲಿ ರಾಧಾ ಮಿಸ್ ಆಗಿ ಸದಾ ಸೀರೆಯುಟ್ಟು ಮಿಂಚಿದ ನಟಿ ಶ್ವೇತಾ ಆರ್ ಪ್ರಸಾದ್ ಈಗಂತೂ ಸಖತ್ ಬೋಲ್ಡ್ ಡ್ರೆಸ್, ಫೋಟೊ ಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. 
 

ರಾಧಾ ರಮಣ (Radha Ramana) ಧಾರಾವಾಹಿ ಇಷ್ಟಪಡದೇ ಇರೋರು ಯಾರೂ ಇಲ್ಲ ಅನ್ಸತ್ತೆ. ಅತ್ಯುತ್ತಮ ಕಥೆ, ಪಾತ್ರದಿಂದವೇ ಜನಮನ ಗೆದ್ದ ಧಾರಾವಾಹಿ ರಾಧಾ ರಮಣ. ಈ ಧಾರಾವಾಹಿಯ ಮುಖ್ಯ ಆಕರ್ಷಣೆ ರಾಧಾ ಮಿಸ್. ರಾಧಾ ಮಿಸ್ ಪಾತ್ರದಲ್ಲಿ ನಟಿಸಿ ಕನ್ನಡಿಗರ ಹೃದಯದಲ್ಲಿ ಇಂದಿಗೂ ರಾಧಾ ಮಿಸ್ ಆಗಿಯೇ ಉಳಿದ ನಟಿ ಶ್ವೇತಾ ಆರ್ ಪ್ರಸಾದ್.
 

ಶ್ರೀರಸ್ತು ಶುಭಮಸ್ತು ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರೂ, ರಾಧಾ ರಮಣ ಇವರಿಗೆ ಜನಪ್ರಿಯತೆ ನೀಡಿತು. ಸದ್ಯ ಸೀರಿಯಲ್ ನಟನೆಯಿಂದ ಕೊಂಚ ದೂರವೇ ಇದ್ದರೂ ಶ್ವೇತಾ ಹವಾ ಮಾತ್ರ ಕಡಿಮೆಯಾಗಿಲ್ಲ. ರಾಧಾ ರಮಣ ಬಳಿಕ ಅಂತರಪಟ, ನನ್ನ ದೇವ್ರು ಧಾರಾವಾಹಿಯಲ್ಲೂ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಶ್ವೇತಾ. ಅಷ್ಟೇ ಯಾಕೆ ಕಾಟೇರ ಸಿನಿಮಾದಲ್ಲಿ ಶ್ವೇತಾ (Shwetha R Prasad)ನಟಿಸಿದ್ದರು. 
 

Tap to resize

ರಾಧಾ ಮಿಸ್ (Radha Miss) ಪಾತ್ರದಲ್ಲಿ ಶ್ವೇತಾ ಯಾವಾಗ್ಲೂ ಸೀರೆಯುಟ್ಟು ಕಾಣಿಸಿಕೊಳ್ಳುತ್ತಿದ್ರು. ಹೆಚ್ಚಾಗಿ ಧಾರಾವಾಹಿಗಳಲ್ಲಿ ನಟಿಯನ್ನು ಅಭಿಮಾನಿಗಳು ನೋಡಿದ್ದೆ ಸಾಂಪ್ರದಾಯಿಕ ಲುಕ್ ನಲ್ಲಿ ಆದ್ರೆ ಇದೀಗ ನಟಿ ತಮ್ಮ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಜನ ಇದು ನಮ್ಮ ರಾಧಾ ಮಿಸ್ ಹೌದಾ ಅಂತಿದ್ದಾರೆ. 
 

ಸೋಶಿಯಲ್ ಮೀಡಿಯಾದಲ್ಲಿ (Social media) ಆಕ್ಟಿವ್ ಆಗಿರುವ ಶ್ವೇತಾ ಆರ್ ಪ್ರಸಾದ್ ಇತ್ತೀಚಿನ ದಿನಗಳಲ್ಲಿ ಸೀರೆಯನ್ನು ಬಿಟ್ಟು ಮಾರ್ಡನ್ ಉಡುಗೆಯಲ್ಲಿ ತುಂಬಾನೆ ಬೋಲ್ಡ್ ಆಗಿ ಫೋಸ್ ಕೊಡ್ತಿದ್ದಾರೆ. ಇವರ ಸ್ಟೈಲ್, ಲುಕ್ ನೋಡಿ ಇಂಟರ್ನೆಟಲ್ಲಿ ಟೆಂಪ್ರೇಚರ್ ಸಿಕ್ಕಾಪಟ್ಟೆ ಹೆಚ್ಚಾಗಿದೆ. 
 

ಹೆಚ್ಚಿನ ಅಭಿಮಾನಿಗಳು ಶ್ವೇತಾ ಹೊಸ ಲುಕ್ ನೋಡಿ ಮೆಚ್ಚಿಗೆ ಸೂಚಿಸಿದ್ರೆ, ಕೆಲವರು ಯಾಕೆ ಮೇಡಂ ಈ ಥರ ಎಲ್ಲಾ ಡ್ರೆಸ್ ಮಾಡ್ತೀರಾ? ನೀವು ಸೀರೆ ಉಟ್ಟರೇನೆ ನೋಡೊದಕ್ಕೆ ಚೆಂದ ಎಂದಿದ್ದಾರೆ. ಡ್ರೆಸ್ ಚೆನ್ನಾಗಿಲ್ಲ ಅಂತಾನೂ ಹೇಳಿದ್ದಾರೆ ಜನ. 
 

ಇನ್ನು ಹೆಚ್ಚಿನ ಜನ ತುಂಬಾನೆ ಹಾಟ್, ನಿಮ್ಮನ್ನ ನೋಡಿ ಹೃದಯ ತಾಳ ತಪ್ಪಿದೆ, ಬೇಗನೆ ಆಂಬುಲೆನ್ಸ್ ಕರೆಸಿ ಎಂದಿದ್ದಾರೆ. ಮತ್ತೊಬ್ಬರು ಅಪ್ಸರೆ ಅಂದ್ರೆ, ಇನ್ನೊಬ್ಬರು ಬೋಲ್ಡ್ ಆಂಡ್ ಬ್ಯೂಟಿಫುಲ್, ಗೊಂಬೆ ಎಂದು ಹಾಡಿ ಹೊಗಳಿದ್ದಾರೆ. 
 

ಒಂದೆರಡು ಸಿನಿಮಾ, ಸೀರಿಯಲ್ ಗಳಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸುತ್ತಿರುವ ಶ್ವೇತಾ ಪ್ರಸಾದ್, ಹಲವು ಜ್ಯುವೆಲ್ಲರಿ ಬ್ರ್ಯಾಂಡ್ ಗಳಿಗೆ ಮಾಡೆಲ್ ಕೂಡ ಆಗಿದ್ದಾರೆ. ಅಷ್ಟೇ ಅಲ್ಲ ತಮ್ಮ ಪ್ರಸಾದ್ ಸಂಸ್ಥೆಯ ಮೂಲಕ ಹಲವಾರು ಸಮಾಜ ಸೇವೆಗಳನ್ನು ಮಾಡಿಕೊಂಡು ಬಂದಿದ್ದಾರೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ಗಿಡಗಳನ್ನು ನೆಡುವ ಮೂಲಕ ಕಾಡು ಉಳಿಸುವ ಕಾರ್ಯಕ್ಕೂ ಪ್ರೇರಣೆಯಾಗಿದ್ದರು ನಟಿ. 
 

Latest Videos

click me!