ಹೇಗಿದೆ ರಾಮಾಚಾರಿ ಧಾರಾವಾಹಿಯ ಅಣ್ಣ -ತಂಗಿಯ ಮುದ್ದಾದ ಜೋಡಿ?

First Published | Jul 28, 2024, 3:16 PM IST

ರಾಮಾಚಾರಿ ಧಾರಾವಾಹಿಯಲ್ಲಿ ಅಣ್ಣ ತಂಗಿಯಾಗಿ ನಟಿಸುತ್ತಿರುವ ರಿತ್ವಿಕ್ ಕೃಪಾಕರ್ ಮತ್ತು ಶೀಲಾ ಜೊತೆಯಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. 
 

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ (Ramachari) ಧಾರಾವಾಹಿಯ ಅಣ್ಣ ತಂಗಿಯ ಜೋಡಿಯಾದ ರಾಮಾಚಾರಿ ಮತ್ತು ಶ್ರುತಿ ಜೊತೆಯಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

ಧಾರಾವಾಹಿಯಲ್ಲಿ ಶ್ರುತಿ ಪಾತ್ರದಲ್ಲಿ ಮಿಂಚುತ್ತಿರುವ ಶೀಲಾ ತಮ್ಮ ಸೋಶಿಯಲ್ (Social media) ಮೀಡಿಯಾದಲ್ಲಿ ಫೋಟೊ ಹಂಚಿಕೊಂಡಿದ್ದಾರೆ, ಅಣ್ಣಯ್ಯ ಎಂದು ಬರೆದುಕೊಂಡು ರಾಮಾಚಾರಿ ಪಾತ್ರ ನಿರ್ವಹಿಸುತ್ತಿರುವ ರಿತ್ವಿಕ್ ಕೃಪಾಕರ್ ಜೊತೆಗಿನ ಫೋಟೋವನ್ನು ಶೇರ್ ಮಾಡಿದ್ದಾರೆ. 
 

Tap to resize

ರಿತ್ವಿಕ್ (Rithvik Krupakar)  ಮತ್ತು ಶೀಲಾ ಇಬ್ಬರೂ ಸಹ ಕಡು ನೀಲಿ ಬಣ್ಣದ ಡ್ರೆಸ್ ನಲ್ಲಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ರಿತ್ವಿಕ್ ನೀಲಿ ಬಣ್ಣದ ಪಂಚೆ ಮತ್ತು ನೀಲಿ ಬನ್ಣದ ಶಾಲ್ ಧರಿಸಿದ್ರೆ, ಶೀತಾ ನೀಲಿ ಬಣ್ಣದ ಲಂಗ ದಾವಣಿ ಧರಿಸಿದ್ದಾರೆ. 
 

ಇಬ್ಬರು ಬೇರೆ ಬೇರೆ ರೀತಿಯಲ್ಲಿ ತುಂಟಾಟ ಮಾಡುತ್ತಾ ಪೋಸ್ ನೀಡಿದ್ದು, ಇಬ್ಬರ ಜೋಡಿ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಮುದ್ದಾದ ಅಣ್ಣ -ತಂಗಿ, ಅಣ್ಣ ತಂಗಿ ಕ್ಯೂಟ್ ಜೋಡಿ, ಅಣ್ಣ ತಂಗಿ ಬಾಂಡಿಂಗ್ ಸೂಪರ್ ಎಂದು ಬರೆದುಕೊಂಡಿದ್ದಾರೆ. 
 

ರಾಮಾಚಾರಿ ತಂಗಿ ಶ್ರುತಿ ಪಾತ್ರದಲ್ಲಿ ಮೊದಲು ರಾಧಾ ಭಗವತಿ ನಟಿಸುತ್ತಿದ್ರು, ಅವರು ಈ ಸೀರಿಯಲ್ ಬಿಟ್ಟ ಬಳಿಕ ಆ ಜಾಗಕ್ಕೆ ಶೀಲಾ (Sheela) ಎಂಟ್ರಿ ಕೊಟ್ಟಿದ್ದಾರೆ. ಆಫ್ ಸ್ಕ್ರೀನ್ ಆನ್ ಸ್ಕ್ರೀನ್ ನಲ್ಲಿ ಶೀಲಾ ಸೀರಿಯಲ್ ನ ಎಲ್ಲಾ ನಟ-ನಟಿಯರೊಂದಿಗೆ ತುಂಬಾನೆ ಕ್ಲೋಸ್ ಆಗಿದ್ದಾರೆ. 
 

ಕಳೆದ ಕೆಲವು ವರ್ಷಗಳಿಂದ ಸೀರಿಯಲ್ ಗಳಲ್ಲಿ ನಟಿಸುತ್ತಿರುವ ಶೀಲಾ ಈಗಾಗಲೇ ಇಂತಿ ನಿಮ್ಮ ಆಶಾದಲ್ಲಿ ಊರ್ಮಿಯಾಗಿ, ಗಿಣಿರಾಮ ಸೀರಿಯಲ್ ನಲ್ಲಿ ಸೀಮಾ ಆಗಿ, ರಾಧಿಕಾ ಸೀರಿಯಲ್ ನಲ್ಲಿ ಅನಘ ಆಗಿ ನಟಿಸಿದ್ದರು. ಇದೀಗ ಶ್ರುತಿಯಾಗಿ ರಾಮಾಚಾರಿಯಲ್ಲಿ ಅದ್ಭುತವಾಗಿ ನಟಿಸುತ್ತಿದ್ದಾರೆ. 
 

ಸೋಶಿಯಲ್ ಮೀಡೀಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಶೀಲಾ ತಮ್ಮ ಫೋಟೋ ಶೂಟ್ ಶೇರ್ ಮಾಡ್ತಾ, ಸೀರಿಯಲ್ ತಂಡದ ಜೊತೆಗೆ ಹೆಚ್ಚಾಗಿ ರೀಲ್ಸ್ ಮಾಡ್ತಾ, ವಿಡಿಯೋಗಳನ್ನ ಹಂಚಿಕೊಳ್ಳುತ್ತಿರುತ್ತಾರೆ. 
 

Latest Videos

click me!