ಬ್ಲ್ಯಾಕ್‌ ಗೌನ್‌ನಲ್ಲಿ ಫಿಟ್ & ಹಾಟ್ ಆದ ನಮ್ರತಾ ಗೌಡ: ಚೆರಿ ಚೆರಿ ಲೇಡಿ ನಮ್ ನಮ್ಮು ಎಂದು ಹಾಡಿದ ಫ್ಯಾನ್ಸ್‌

First Published | Jul 27, 2024, 12:23 PM IST

ನಾಗಿಣಿ ಖ್ಯಾತಿಯ ನಟಿ ನಮ್ರತಾ ಗೌಡ, ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಳತ್ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಬ್ಲ್ಯಾಕ್‌ ಲಾಂಗ್ ಗೌನ್‌ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. 

ಪುಟ್ಟ ಗೌರಿ ಮದುವೆ, ನಾಗಿಣಿ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ನಟಿ ನಮ್ರತಾ ಗೌಡ ಅವರು ಬಿಗ್​ಬಾಸ್ ಕನ್ನಡ ಸೀಸನ್ 10ರಲ್ಲಿ ಭಾಗವಹಿಸಿ ಮತ್ತಷ್ಟು ಖ್ಯಾತಿಯನ್ನು ಪಡೆದರು.

ಸದ್ಯ ನಮ್ರತಾ ಗೌಡ ಮಾಡ್ರನ್ ಲುಕ್‌ನಲ್ಲಿ ಮಿಂಚಿದ್ದಾರೆ. ಕಪ್ಪು ಬಣ್ಣದ ಲಾಂಗ್ ಗೌನ್ ತೊಟ್ಟು ಫಿಟ್ & ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ವಿವಿಧ ಭಂಗಿಗಳಲ್ಲಿ ನಮ್ರತಾ ಕ್ಯಾಮೆರಾಗೆ ಸಖತ್ ಹಾಟ್‌ ಆಗಿ ಪೋಸ್ ಕೊಟ್ಟಿದ್ದಾರೆ.

Tap to resize

ನಮ್ರತಾ ಗೌಡ ಧರಿಸಿರೋ ಬ್ಲ್ಯಾಕ್ ಲಾಂಗ್ ಗೌನ್ ವಿಶೇಷವಾಗಿಯೇ ಡಿಸೈನ್ ಮಾಡಲಾಗಿದೆ. ನಮ್ರತಾ ಹೊಸ ರೂಪಕ್ಕೆ ಇಬ್ಬರು ಕಾರಣ ಆಗಿದ್ದಾರೆ. ವಿಕಾಸ್ ಕಾಕೋಲು ಫೋಟೋಶೂಟ್ ಮಾಡಿದ್ದು, ದಿವ್ಯಾ ನಾಗರಾಜ್ ಮೇಕಪ್ ಮಾಡಿದ್ದಾರೆ. ಅಲ್ಲದೇ ಹೇರ್ ಸ್ಟೈಲ್ ಕೂಡ ಇವರೇ ಮಾಡಿದ್ದಾರೆ.

ನಮ್ರತಾ ಗೌಡ ತೊಟ್ಟ ಡ್ರೆಸ್ ಪಾರ್ಟಿಗಳಲ್ಲಿ ಹಾಕುವಂತಹದ್ದು. ಸ್ವತಃ ಅವರೇ ಕ್ಯಾಪ್ಷನ್‌ನಲ್ಲಿ ಬರೆದುಕೊಂಡಂತೆ ಇದೊಂದು ಹೊಸ ರೀತಿಯ ಹೊಸ ಪ್ರಯೋಗ ಅನ್ನೋದೇ ಆಗಿದ್ದು, ಲಾಂಗ್ ಗೌನ್‌ ಲುಕ್‌ನಲ್ಲಿ ಸಖತ್ ಮಾಡ್ರನ್ ಆಗಿಯೇ ನಮ್ಮು ಮಿಂಚಿದ್ದಾರೆ.

ನಮ್ರತಾ ಗೌಡ ಫೋಟೋಸ್ ನೋಡಿ, ನೆಟ್ಟಿಗರು, ಲೈಕ್ಸ್‌ಗಳ ಸುರಿಮಳೆಯನ್ನೇ ಸುರಿಸಿದ್ದು, ಈ ಡ್ರೆಸ್‌ನಲ್ಲಿ ಹಾಟ್ ಆಗಿ ಕಾಣ್ತೀರಾ, ಊಫ್ ಸೆಕೆ ಆಗ್ತಿದೆ, ನಿಮ್ಮ ದೇಹಕ್ಕಿಂತ ಕಣ್ಣೋಟ ತುಂಬಾ ಮಾದಕವಾಗಿದೆ, ಚೆರಿ ಚೆರಿ ಲೇಡಿ ನಮ್ ನಮ್ಮು ಅಂತೆಲ್ಲಾ ಕಮೆಂಟ್ ಮಾಡಿದ್ದಾರೆ.

ನಮ್ರತಾ ಗೌಡ ಆಕ್ಟಿಂಗ್ ಮಾತ್ರವಲ್ಲದೇ, ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡುವರು ಅನೇಕ ಜಾಹೀರಾತುಗಳಿಗೆ ಮಾಡೆಲ್ ಆಗಿ ಕೆಲಸ ಮಾಡುತ್ತಾ ಒಳ್ಳೆ ಸಂಭಾವನೆಯನ್ನು ಕೂಡ ಪಡೆಯುತ್ತಿದ್ದಾರೆ.

ನಮ್ರತಾ ಗೌಡ ಕಿರುತೆರೆಯಲ್ಲಿ ಧಾರವಾಹಿಯಲ್ಲಿ ನಟಿಸುವುದರ ಜೊತೆಗೆ ತಕಮಿಧಿತ ಡ್ಯಾನ್ಸ್ ಪ್ರೋಗ್ರಾಮ್ ಹಾಗೂ ಕನ್ನಡದ ಬಿಗ್‌ ಬಾಸ್‌ ರಿಯಾಲಿಟಿ ಶೋದಲ್ಲಿಯೂ ಕೂಡ ಭಾಗವಹಿಸಿದ್ದಾರೆ.  

Latest Videos

click me!