ಅಕ್ಕನ ಮದುವೆ ಸಂಭ್ರಮದಲ್ಲಿ ಮಿಂಚುತ್ತಿದ್ದಾರೆ ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿ

Published : Jul 28, 2024, 11:27 AM IST

ಜೊತೆ ಜೊತೆಯಲಿ ಅನು ಸಿರಿಮನೆ ಖ್ಯಾತಿಯ ನಟಿ ಮೇಘಾ ಶೆಟ್ಟಿಯವರ ಸಹೋದರಿಯ ಮದುವೆ ಸಂಭ್ರಮದಿಂದ ನಡೆದಿದ್ದು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.   

PREV
17
ಅಕ್ಕನ ಮದುವೆ ಸಂಭ್ರಮದಲ್ಲಿ ಮಿಂಚುತ್ತಿದ್ದಾರೆ ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿ

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರದ ಮೂಲಕ ಕನ್ನಡಿಗರ ಮನೆ ಗೆದ್ದು, ಸದ್ಯ ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿರುವ ಚೆಲುವೆ ಮೇಘಾ ಶೆಟ್ಟಿಯವರ (Megha Shetty) ಮನೆಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ. 
 

27

ಮೇಘಾ ಶೆಟ್ಟಿಯವರ ಹಿರಿಯ ಸಹೋದರಿ ನಿಶಾ ಶೆಟ್ಟಿ (Nisha Shetty) ವಿವಾಹವು ಬೆಂಗಳೂರಿನ ಖಾಸಗಿ ಹೊಟೇಲ್ ಒಂದರಲ್ಲಿ ಅದ್ಧೂರಿಯಾಗಿ ನಡೆದಿದ್ದು,ಫೋಟೋಗಳು, ವಿಡೀಯೋ ತುಣುಕುಗಳು ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿವೆ. 
 

37

ನಟಿ ಮೇಘಾ ಶೆಟ್ಟಿ ಕೂಡ ವಿವಾಹ ಸಮಾರಂಭದ ವಿಡಿಯೋ ತುಣುಕನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಹ್ಯಾಪಿ ಮ್ಯಾರೀಡ್ ಲೈಫ್ ಲವ್ಸ್ ಎಂದು ತಮ್ಮ ಸಹೋದರಿಗೆ ಶುಭ ಕೋರಿದ್ದರು. 
 

47

ಮೇಘಾ ಶೆಟ್ಟಿಯವರ ಇನ್ನೋರ್ವ ಸಹೋದರಿ ಮೇಕಪ್ ಆರ್ಟಿಸ್ಟ್ ಸುಷ್ಮಾ ಶೆಟ್ಟಿ ವಿವಾಹ ಕಳೆದ ವರ್ಷ ನಡೆದಿದ್ದು, ಇದೀಗ ಎರಡನೇ ಸಹೋದರಿಯ ಮದುವೆ ಎನ್ನಲಾಗುತ್ತಿದೆ. ವಿವಾಹ ಎಲ್ಲಿ ನಡೆಯುತ್ತಿದೆ, ಹುಡುಗನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. 
 

57

ಇನ್ನು ಮೇಘಾ ಶೆಟ್ಟಿ ಸಹೋದರಿಯ ಮದುವೆ ಹಿಂದೂ ಸಂಪ್ರದಾಯ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಕೂಡ ನಡೆದಿದ್ದು, ಆರತಕ್ಷತೆಯ ಫೋಟೋಗಳು ಮತ್ತು ಕ್ರಿಶ್ಚಿಯನ್ ವೆಡ್ಡಿಂಗ್ ಫೋಟೋಗಳು ಸದ್ಯ ವೈರಲ್ ಆಗುತ್ತಿವೆ. 
 

67

ಇನ್ನು ಮೇಘಾ ಶೆಟ್ಟಿ ಸೀರಿಯಲ್ ಗಳ ನಿರ್ಮಾಣ ಕೂಡ ಮಾಡಿರೋದರಿಂದ ಗೌರಿಶಂಕರ ಧಾರಾವಾಹಿ (Gouri Shankara) ತಂಡವು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ನಟ ಯಶವಂತ್, ಕಾವ್ಯಾ ರಮೇಶ್, ವಿದ್ಯಾ ಮೂರ್ತಿ, ಅಭಿಜ್ಞಾ ಭಟ್ ,  ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ನಟಿಸಿದ್ದ ಶರಣ್ಯಾ ಶೆಟ್ಟಿ ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು.
 

77

ಅಕ್ಕನ ಮದುವೆಯಲ್ಲಿ ನಟಿ ತಿಳಿ ನೀಲಿ ಬಣ್ಣದ ಲೆಹೆಂಗಾ ಧರಿಸಿದ್ದು, ತುಂಬಾನೆ ಸುಂದರವಾಗಿ ಕಾಣಿಸಿಕೊಂಡಿದ್ದಾರೆ, ಇನ್ನೊಂದು ಫೋಟೋದಲ್ಲಿ ತಿಳಿ ಹಸಿರು ಬಣ್ಣದ ಆಫ್ ಶೋಲ್ಡರ್ ಗೌನ್ ಧರಿಸಿದ್ದಾರೆ. 
 

Read more Photos on
click me!

Recommended Stories