ಬಿಗ್‌ಬಾಸ್ ಕನ್ನಡ ಸೀಸನ್ 13ರ ಮನೆಗೆ ರಕ್ಷಿತಾ ಶೆಟ್ಟಿ ದಿಢೀರ್ ಆಗಮನವಾಗಿದ್ದು, ನಡೆಯುತ್ತಿರುವ ಸ್ವಯಂವರ ಟಾಸ್ಕ್‌ನಲ್ಲಿ ಹೊಸ ತಿರುವು ಸಿಕ್ಕಿದೆ. ಇವರು ವೈಲ್ಡ್‌ಕಾರ್ಡ್ ಸ್ಪರ್ಧಿಯೋ ಅಥವಾ ಅತಿಥಿಯೋ ಎಂಬ ಕುತೂಹಲ ಮೂಡಿದೆ. ರಕ್ಷಿತಾ ಎಂಟ್ರಿಯಿಂದ ವೀಕ್ಷಕರು ಸಂತಸಗೊಂಡಿದ್ದಾರೆ.
ಬಿಗ್‌ಬಾಸ್ ಮನೆಗೆ ಸೀಸನ್ 12ರ ಸ್ಪರ್ಧಿ ರಕ್ಷಿತಾ ಶೆಟ್ಟಿ ಆಗಮನವಾಗಿದೆ. ಮನೆಯಲ್ಲಿ ಸದ್ಯ ಸ್ವಯಂವರ ಪರೀಕ್ಷೆ ನಡೆಯುತ್ತಿದ್ದು, ಇದೀಗ ರಕ್ಷಿತಾ ಶೆಟ್ಟಿ ಆಗಮನದಿಂದ ಟಾಸ್ಕ್‌ನಲ್ಲಿ ಹೊಸ ಬದಲಾವಣೆ ತೆಗೆದುಕೊಂಡು ಬರಲಾಗಿದೆ. ದೊಡ್ಮನೆ ಪ್ರವೇಶಿಸುತ್ತಿದ್ದಂತೆ ರಕ್ಷಿತಾ ಶೆಟ್ಟಿ ಟಾಸ್ಕ್‌ನ ಭಾಗವಾಗಿದ್ದಾರೆ.
25
ಬರುತ್ತಿದ್ದಂತೆ ಟಾಸ್ಕ್ ಭಾಗವಾದ ರಕ್ಷಿತಾ ಶೆಟ್ಟಿ
ಹೌದು, ಮನೆಯ ಕ್ಯಾಪ್ಟನ್ ಆಗಿರುವ ಸೌಂದರ್ಯಾ ಶೆಟ್ಟಿಯವರ ವರಾನ್ವೇಷಣೆ ನಡೆಯುತ್ತಿದೆ. ಟಾಸ್ಕ್ ಪ್ರಕಾರ, ಸೌಂದರ್ಯಾ ಶೆಟ್ಟಿಯ ತಾಯಿ ಪಾತ್ರದಲ್ಲಿ ಪ್ರಶಾಂತ್ (ಪ್ರಶಾಂತಿ), ತಂದೆಯಾಗಿ ತಾಂಡವ್ ರಾಮ್ ನಟಿಸುತ್ತಿದ್ದಾರೆ. ಇದೀಗ ಇವರಿಬ್ಬರ ಮಗಳಾಗಿ ರಕ್ಷಿತಾ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ.
35
ಪ್ರಶಾಂತಿ ಲವ್ ಅಫೇರ್
ಪ್ರಶಾಂತಿ ಎಂಬಿಎ ಓದಲು ಮಲೇಷ್ಯಾಗೆ ಹೋಗಿದ್ದರು. ಆ ಸಂದರ್ಭದಲ್ಲಿ ಪ್ರಶಾಂತಿಗೆ ಲವ್ ಆಗಿತ್ತು. ಈ ಪ್ರೇಮದ ಸಾಕ್ಷಿಯೇ ರಕ್ಷಿತಾ ಶೆಟ್ಟಿ ಎಂದು ಬಿಗ್‌ಬಾಸ್ ಹೇಳಿದ್ದಾರೆ. ಈ ಮೂಲಕ ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಅವರನ್ನು ತಡಮಾಡದೇ ಆಟಕ್ಕೆ ಸೇರಿಸಿಕೊಳ್ಳಲಾಗಿದೆ.
ರಕ್ಷಿತಾ ಶೆಟ್ಟಿ ಬಿಗ್‌ಬಾಸ್ ಮನೆಗೆ ವೈಲ್ಡ್‌ಕಾರ್ಡ್ ಸ್ಪರ್ಧಿಯಾಗಿದ್ರಾ ಅಥವಾ ಅತಿಥಿಯಾಗಿ ಬಂದಿದ್ದೀರಾ ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಕಡಲೆಬೀಜ ಇಲ್ಲದ ಚಿತ್ರನ್ನಾ ಆಗಿದ್ದ ಬಿಗ್‌ಬಾಸ್ ಮನೆಗೆ ರಕ್ಷಿತಾ ಶೆಟ್ಟಿ ಜೋಶ್ ಕೊಡ್ತಾರಾ ಎಂಬುವುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
55
ರಕ್ಷಿತಾ ಶೆಟ್ಟಿ
ರಕ್ಷಿತಾ ಶೆಟ್ಟಿ ಆಗಮನಕ್ಕೆ ವೀಕ್ಷಕರು ಫುಲ್ ಖುಷಿಯಾಗಿದ್ದು, ಬಿಗ್‌ಬಾಸ್ ಶೋಗೆ ಮಜಾ ಬಂತು. ಹಾಗೆಯೇ ಒಂದೆರಡು ದಿನಕ್ಕಾದ್ರೂ ಗಿಲ್ಲಿ ನಟನನ್ನು ಕರೆದುಕೊಂಡು ಬನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ. ರಕ್ಷಿತಾ ಶೆಟ್ಟಿ ಅವರನ್ನು ಮೂರ್ನಾಲ್ಕು ವಾರಗಳಿದ್ರೂ ಉಳಿಸಿಕೊಳ್ಳಿ ಎಂಬ ಕೂಗು ಕೇಳಿ ಬಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.