ಪುಟ್ಟ ಎಲ್ಸಾಗೆ 5 ವರ್ಷ! ಮಗಳು ಧೃತಿಯ ಬರ್ತ್‌ಡೇಯನ್ನು ಅದ್ಧೂರಿಯಾಗಿ ಆಚರಿಸಿದ ಅಮೃತಾ-ರಾಘು

Published : Oct 27, 2026, 10:59 PM IST

ಕನ್ನಡ ಕಿರುತೆರೆಯ ಜನಪ್ರಿಯ ಜೋಡಿಗಳಾದ ಅಮೃತಾ ರಾಮಮೂರ್ತಿ ಮತ್ತು ರಾಘವೇಂದ್ರ ಅವರ ಮುದ್ದಿನ ಮಗಳು ಧೃತಿ ಐದನೇ ವರ್ಷದ ಹುಟ್ಟುಹಬ್ಬವನ್ನು ಜೋಡಿ ಅದ್ಧೂರಿಯಾಗಿ ಆಚರಿಸಿದ್ದು, ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.

PREV
15
ಕನ್ನಡ ಕಿರುತೆರೆಯ ಜನಪ್ರಿಯ ಜೋಡಿ

ಕನ್ನಡ ಕಿರುತೆರೆಯ ಜನಪ್ರಿಯ ಜೋಡಿಗಳಲ್ಲಿ ಒಬ್ಬರು ಅಮೃತಾ ರಾಮಮೂರ್ತಿ ಮತ್ತು ರಾಘವೇಂದ್ರ. ಇಬ್ಬರೂ ಸಹ ಕನ್ನಡ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ನಟರು. ರಾಘು ತೆಲುಗು ಕಿರುತೆರೆಯಲ್ಲೂ ಸಹ ಫೇಮಸ್, ಇದೀಗ ಮುದ್ದಿನ ಮಗಳ ವಿಶೇಷ ದಿನವನ್ನು ಸೆಲೆಬ್ರೇಟ್ ಮಾಡಿದ್ದಾರೆ.

25
ಧೃತಿ ಹುಟ್ಟುಹಬ್ಬದ ಸಂಭ್ರಮ

ಅಮೃತಾ ಮತ್ತು ರಾಘು ದಂಪತಿಗಳ ಮುದ್ದಿನ ಮಗಳು ಧೃತಿ, ಇದೀಗ ಐದು ವರ್ಷವನ್ನು ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಜೋಡಿ ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಜೊತೆಗೆ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

35
ಲಿಟಲ್ ಎಲ್ಸಾ

ನಮ್ಮ ಪುಟ್ಟ ಎಲ್ಸಾಗೆ 5 ವರ್ಷ ತುಂಬಿತು. ಇದು ಮೋಜು, ನಗು ಮತ್ತು ತುಸು ಹುಚ್ಚಾಟಗಳಿಂದ ತುಂಬಿದ್ದ ಒಂದು ಅದ್ಭುತ ಸಂಜೆಯಾಗಿತ್ತು. ಎಂದು ರಾಘು ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಹಂಚಿಕೊಂಡು ಕ್ಯಾಪ್ಶನ್ ಕೊಟ್ಟಿದ್ದಾರೆ. ಸುತ್ತಲೂ ಆನಿಮಿ ವರ್ಲ್ಸ್ ಕ್ರಿಯೇಟ್ ಮಾಡಿ, ಮಗಳ ಸಂಭ್ರಮವನ್ನು ಹೆಚ್ಚಿಸಿದ್ದಾರೆ ಜೋಡಿ.

45
ಪುನೀತ್ ನೆನಪಲ್ಲಿ ಧೃತಿ ಎಂದು ನಾಮಕರಣ

ಅಮೃತಾ ಹಾಗೂ ರಾಘು ಇಬ್ಬರೂ ಸಹ ಪುನೀತ್ ರಾಜಕುಮಾರ್ ಅವರ ಅಭಿಮಾನಿಯಾಗಿದ್ದು, ಹಾಗಾಗಿ, ಅಪ್ಪು ನೆನಪಲ್ಲಿ, ಅವರ ಪುತ್ರಿಯ ಹೆಸರನ್ನೆ ತಮ್ಮ ಮಗಳಿಗೂ ಇಟ್ಟಿದ್ದರು ಈ ಜೋಡಿ. ಇದೀಗ ಧೃತಿ ಐದನೇ ವರ್ಷದ ಸಂಭ್ರಮದಲ್ಲಿದ್ದಾರೆ.

55
ರಾಘು ಅಮೃತಾ ಸೀರಿಯಲ್ ಗಳು

ರಾಘು ಮತ್ತು ಅಮೃತಾ ಜೋಡಿಯಾಗಿ ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಧಾರಾವಾಹಿಯಲ್ಲಿ ನಟಿಸಿದ್ದರು. ಅಲ್ಲಿಂದಲೇ ಇಬ್ಬರ ಪ್ರೇಮಕಥೆ ಆರಂಭವಾಗಿತ್ತು. ಬಳಿಕ ಅಮೃತಾ ಕುಲವಧು, ಆಸೆ, ಮಹಾಲಕ್ಷ್ಮೀ ಮದುವೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ರಾಘು ನಮ್ಮನೆ ಯುವರಾಣಿ, ಪ್ರೇಮಾ-ಕಾವ್ಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories