ಜೀವನ ಸಂಗಾತಿ ಬಗ್ಗೆ ಮಾಹಿತಿ ನೀಡಿದ ‘ಕನ್ನಡತಿ’ ರಂಜನಿ ರಾಘವನ್’ಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು!

First Published | Aug 28, 2024, 11:47 AM IST

ಕನ್ನಡತಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟಿ ರಂಜನಿ ರಾಘವನ್ ಯಾವ ರೀತಿ ಸಂಗಾತಿ ಬೇಕು ಅನ್ನೋದನ್ನ ಹೇಳಿದ್ದು, ಈ ಹೇಳಿಕೆ ಇದೀಗ ವೈರಲ್ ಆಗ್ತಿದೆ. 
 

ಕನ್ನಡತಿ ಧಾರಾವಾಹಿ ಮೂಲಕ ಜನಮನ ಗೆದ್ದಂತಹ ಭುವಿ ಮೇಡಂ ಅಂದ್ರೆ ನಿಮ್ಮ ನೆಚ್ಚಿನ ರಂಜನಿ ರಾಘವನ್ (Ranjani Raghavan) ಸದ್ಯ ಸೀರಿಯಲ್ ನಿಂದ ದೂರ ಇದ್ದು, ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದಾದ ನಂತರ ಒಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 
 

ಇತ್ತೀಚೆಗಷ್ಟೇ ರಂಜನಿ ನಟಿಸಿರುವ ಕಾಂಗರೂ ಸಿನಿಮಾ ಬಿಡುಗಡೆಯಾಗಿದ್ದು, ರಂಜನಿ ನಟನೆಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಇದೀಗ ಸತ್ಯಂ ಮತ್ತು ಸ್ವಪ್ನ ಮಂದಿರ ಎನ್ನುವ ಎರಡು ಸಿನಿಮಾಗಳು ರಂಜನಿ ಕೈಯಲ್ಲಿವೆ. ಈ ಹಿಂದೆ ಸಂದರ್ಶನವೊಂದರಲ್ಲಿ ನಟಿ ಸದ್ಯಕ್ಕೆ ಸೀರಿಯಲ್ (serial) ಮಾಡೋದಿಲ್ಲ, ಕನ್ನಡತಿ ಭುವಿ ಪಾತ್ರ ಒಂದು ಸಲ ಮಾಡಿಯಾಗಿದೆ, ಇನ್ನು ಅಂತಹ ಪಾತ್ರ ಮಾಡೋದಿಲ್ಲ ಎಂದು ಹೇಳಿದ್ದರು. ಆದರೆ ರಂಜನಿ ಅಭಿಮಾನಿಗಳು ಮಾತ್ರ ನಟಿಯನ್ನು ಮತ್ತೆ ಕಿರುತೆರೆಯ ಮೇಲೆ ನೋಡೋದಕ್ಕೆ ಕಾಯ್ತಿದ್ದಾರೆ. 
 

Latest Videos


ಲೇಖಕಿಯೂ ಆಗಿರುವ ರಂಜನಿ ಈಗಾಗಲೇ ಎರಡು ಪುಸ್ತಕಗಳನ್ನ ಬರೆದಿದ್ದಾರೆ. ಒಂದು ಕಥೆ ಡಬ್ಬಿ, ಇದು ಹಲವು ಕಥೆಗಳ ಸಂಗ್ರಹವಾಗಿದ್ದು, ಮತ್ತೊಂದು ಸ್ವೈಪ್ ರೈಟ್ (Swipe Right). ಈ ಪುಸ್ತಕಗಳು ದೊಡ್ಡಮಟ್ಟದಲ್ಲಿ ಯಶಸ್ಸು ಪಡೆದಿದ್ದವು. 

ಇದೀಗ ರಂಜನಿ ಮತ್ತೊಂದು ಸಂದರ್ಶನದ ತುಣುಕು ವೈರಲ್ ಆಗುತ್ತಿದೆ, ಅದರಲ್ಲಿ ಅವರು ತಮ್ಮ ಸಂಗಾತಿ ಹೇಗಿರಬೇಕು ಅನ್ನೋದನ್ನ ಹೇಳಿದ್ದಾರೆ. ಭುವಿ ಮತ್ತು ಹರ್ಷ (Bhuvi Harsha) ಜೋಡಿಯನ್ನು ಇಷ್ಟಪಟ್ಟಿರೋ ಜನರಿಗೆ ಭುವಿಯನ್ನ ಮದುವೆಯಾಗುವ ಹುಡುಗ ಹೇಗಿರಬೇಕು ಅನ್ನೋದನ್ನು ತಿಳಿದು ಮಿಶ್ರಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟಕ್ಕೂ ರಂಜನಿ ಹೇಳಿದ್ದೇನು? ಜನ ಏನ್ ಹೇಳ್ತಿದ್ದಾರೆ ನೋಡೋಣ. 
 

ಬೆಸ್ಟ್ ಫ್ರೆಂಡ್ ಆಗಿರೋರೇ ಲೈಫ್ ಪಾರ್ಟ್ನರ್ (life partner) ಆದ್ರೆ ಚೆನ್ನಾಗಿರತ್ತೆ ಎಂದು ಹೇಳಿರುವ ರಂಜನಿ, ಈಗ ಸಮಾಜನೆ ಹಾಗಿದೆ. ಮೊದಲೆಲ್ಲಾ ಗಂಡ ಅಂದ್ರೆ ಹೇಗಿರಬೇಕು ಅಂತ ಒಂದು ಮನಸ್ಥಿತಿ ಇತ್ತು. ಆದ್ರೆ ಈಗ ನಮ್ಮನ್ನ ಚೆನ್ನಾಗಿ ತಿಳಿಗೊಂಡಿರುವ ಬೆಸ್ಟ್ ಫ್ರೆಂಡ್ ಹುಡುಗನ್ನ ಮದ್ವೆ ಆದ್ರೆ ಚೆನ್ನಾಗಿರುತ್ತೆ. ಒಳ್ಳೆಯ ಗೆಳೆತನ , ಒಡನಾಟ ಇದ್ರೆ ಅದಕ್ಕಿಂತ ಇನ್ನೇನೂ ಬೇಕು, ನಂಗೂ ಅದೆ ಇಷ್ಟ ಅಂದಿದ್ದಾರೆ ರಂಜನಿ. 

ರಂಜನಿ ಮಾತಿಗೆ ಹೆಚ್ಚಿನ ಜನ ಸಮ್ಮತಿ ಸೂಚಿಸಿದ್ದು, ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದು ತುಂಬಾ ದೊಡ್ಡ ತಪ್ಪು . ಪ್ರೀತಿನೇ ಬೇರೇ ಸ್ನೇಹನೇ ಬೇರೇ. ಈ ತರ ಕೆಟ್ಟ ಆಲೋಚನೆ ಇಂದಾನೆ ಒಳ್ಳೆ ಸ್ನೇಹಕ್ಕೆ ಕೆಟ್ಟ ಅರ್ಥಗಳು ಹುಟ್ಟಿಕೊಂಡಿರೋದು. ಒಂದು ನಿಜವಾದ ಸ್ನೇಹ ಯಾವತ್ತೂ ಪ್ರೀತಿ ಆಗೋಕೆ ಸಾಧ್ಯನೇ ಇಲ್ಲ. ಪ್ರೀತಿ ಅನ್ನೋದು ನೋ ಶೇರಿಂಗ್ ಓನ್ಲಿ ಕೇರಿಂಗ್ ಅದು ಇಬ್ಬರಿಗೆ ಸೀಮಿತ. ಆದ್ರೆ ಸ್ನೇಹ ಆಗಲ್ಲ ಅದನ್ನ ಎಲ್ಲರಿಗೂ ಶೇರ್ ಮಾಡುವಂತದ್ದು,  ನಿಮ್ಮ ಮಾತು ಸಮಾಜಕ್ಕೆ ಒಳ್ಳೆ ಸಂದೇಶವಲ್ಲ ದಯಮಾಡಿ ಈ ತರ ಹೇಳಿಕೆ ಕೊಡೋದು ಸರಿ ಅಲ್ಲ ಎಂದಿದ್ದಾರೆ ಜನ. 

ಬೆಸ್ಟ್ ಫ್ರೆಂಡ್ ಮೇಲೆ ಇರೋ ಪ್ರೀತಿನ ಹೇಳಿಕೊಳ್ಳೋಕೆ ಆಗದೆ ಎಷ್ಟೋ ಜನ ಸುಮ್ನೆ ಇರುತ್ತಾರೆ. ಹೇಳಿದ್ರೆ ಎಲ್ಲಿ ಫ್ರೆಂಡ್’ಶಿಪ್ ಹಾಳಾಗುತ್ತೆ ಅಂತ ಹೇಳದೆ ಇರೋರೆ ತುಂಬಾ ಜನ ಇದಾರೆ ಎಂದು ಒಬ್ಬರು ಹೇಳಿದ್ರೆ, ಮತ್ತೊಬ್ಬರು ಸ್ನೇಹ ಬೇರೆ ಪ್ರೀತಿನೆ ಬೇರೆ, ಅವೆರಡು ಒಂದೇ ನಾಣ್ಯದ ಎರಡು ಬೇರೆಬೇರೆ ಮುಖಗಳು ,ಈಗ ಬೆಸ್ಟ್ ಫ್ರೆಂಡ್ ಹತ್ರ ಶೇರ್ ಮಾಡಿಕೊಳ್ಳೊ ವಿಷಯವನ್ನ ನಾಳೆ ಅವರೆ ಜೀವನ ಸಂಗಾತಿ ಆದಾಗ ಹೇಳಿಕೊಳ್ಳೋದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. 

click me!