ಧರ್ಮಸ್ಥಳ, ಕುಕ್ಕೆಗೆ ಭೇಟಿ ಕೊಟ್ಟ ಕಿರುತೆರೆ ವಿಲನ್… ನಟನೆ ನೋಡಿ ಶಾಪ ಹಾಕಿದೋರು, ಫೋಟೊ ನೋಡಿ ಪ್ರೀತಿ ಕೊಟ್ರು!

Published : Aug 28, 2024, 02:29 PM IST

ಕಿರುತೆರೆ ನಟಿ, ವಿಲನ್ ಪಾತ್ರಕ್ಕೆ ಜೀವ ತುಂಬುವ ನಟಿ ಐಶ್ವರ್ಯ ತಮ್ಮ ಪತಿ ಜೊತೆ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.   

PREV
17
ಧರ್ಮಸ್ಥಳ, ಕುಕ್ಕೆಗೆ ಭೇಟಿ ಕೊಟ್ಟ ಕಿರುತೆರೆ ವಿಲನ್… ನಟನೆ ನೋಡಿ ಶಾಪ ಹಾಕಿದೋರು, ಫೋಟೊ ನೋಡಿ ಪ್ರೀತಿ ಕೊಟ್ರು!

ಕಿರುತೆರೆ ನಟಿ ಐಶ್ವರ್ಯ ಸಾಲಿಮಠ್ (Aishwarya Salimath) ತೆರೆ ಮೇಲೆ ವಿಲನ್. ನಟಿಸುತ್ತಿರೋ ಎಲ್ಲಾ ಸೀರಿಯಲ್ ನಲ್ಲಿ ವಿಲನ್ ಪಾತ್ರದಲ್ಲಿ ಮಿಂಚುತ್ತಿರುವ ಇವರನ್ನ ನೋಡಿದ್ರೆ, ದೇವರಿಗೂ ಕೋಪ ಬರುತ್ತೆ ಅಂತಹ ಪಾತ್ರಗಳಲ್ಲಿ ನಟಿಸ್ತಾರೆ ಇವರು. ಆದ್ರೆ ರಿಯಲ್ ಲೈಫಲ್ಲಿ ದೈವ ಭಕ್ತೆ ಅನ್ನಬಹುದು. 
 

27

ಹೌದು ಕಲರ್ಸ್ ಕನ್ನಡದಲ್ಲಿ (Colors Kaannada) ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖ ಆಗಿ ರಾಮಾಚಾರಿಯ ಮನೆ ಮಂದಿಯನ್ನು ಮುಗಿಸೋ ಪ್ಲ್ಯಾನ್ ಮಾಡ್ತಿದ್ರೆ, ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಸೇವಂತಿ ಧಾರಾವಾಹಿಯಲ್ಲಿ ಸೇವಂತಿಯನ್ನೆ ಮುಗಿಸೋಕೆ ಹೊಂಚು ಹಾಕಿರುವ ವಿಲನ್ ಪ್ರಿಯಾ ಪಾತ್ರದಲ್ಲಿ ನಟಿಸುತ್ತಿದ್ದಾರೆ ಐಶ್ವರ್ಯ ಸಾಲಿಮಠ್. 
 

37

ತೆರೆಯ ಮೇಲಿನ ಇವರ ಕುತಂತ್ರ ಬುದ್ದಿಯ ಪಾತ್ರಗಳನ್ನ ನೋಡಿ ವೀಕ್ಷಕರು ಬೈದುಕೊಂಡಿದ್ದೇ ಹೆಚ್ಚು. ದೇವರೇ ಈ ವೈಶಾಖಂಗೆ ಒಳ್ಳೆ ಬುದ್ದಿ ಕೊಡಿ, ದೇವರೆ ಈ ಪ್ರಿಯಂಗೆ ತಕ್ಕ ಶಾಸ್ತಿ ಆಗುವ ಹಾಗೆ ಮಾಡಿ ಎನ್ನುತ್ತಲ್ಲೇ ಇರ್ತಾರೆ ಜನ. ಆದ್ರೆ ರಿಯಲ್ ಲೈಫಲ್ಲಿ ದೈವ ಭಕ್ತೆಯಾಗಿರೋ ಇವರು ಪ್ರತಿ ತಿಂಗಳು ಪತಿ ವಿನಯ್ ಜೊತೆ ಒಂದಲ್ಲ ಒಂದು ದೇವಸ್ಥಾನಗಳಿಗೆ ಭೇಟಿ ನೀಡುತ್ತಲೇ ಇರ್ತಾರೆ. 
 

47

ಹೌದು ನಟಿ ಐಶ್ವರ್ಯ ಸಾಲಿಮಠ್ (Aishwarya Salimath) ತಮ್ಮ ಪತಿ ವಿನಯ್ ಜೊತೆ ಹೆಚ್ಚಾಗಿ ಪ್ರವಾಸ ಮಾಡ್ತಾನೆ ಇರ್ತಾರೆ, ಸೋಶಿಯಲ್ ಮೀಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುವ ಐಶ್ವರ್ಯ ಫೋಟೊಗಳನ್ನು ಶೇರ್ ಮಾಡೋ ಮೂಲಕ ಅಭಿಮಾನಿಗಳ ಜೊತೆಗೆ ಕನೆಕ್ಟ್ ಆಗುತ್ತಿರುತ್ತಾರೆ. 
 

57

ಕೆಲವು ಸಮಯದ ಹಿಂದೆ ನಟಿ ಪತಿ ಜೊತೆ ಕೇದಾರನಾಥ ಯಾತ್ರೆ ಕೈಗೊಂಡು ಬಂದಿದ್ದರು, ಇದರ ಜೊತೆಗೆ ಕಾಶಿ ವಿಶ್ವನಾಥನ ದರ್ಶನ ಕೂಡ ಪಡೆದಿದ್ದರು. ಇತ್ತೀಚೆಗೆ ತಿರುಪತಿ ತಿಮ್ಮಪ್ಪನ ದರ್ಶನ ಕೂಡ ಮಾಡಿ ಬಂದಿದ್ದರು. ಇದೀಗ ದಕ್ಷಿಣ ಕನ್ನಡದ ತೀರ್ಥಸ್ಥಳಗಳಿಗೆ ಭೇಟಿ ನೀಡಿದ್ದಾರೆ. 
 

67

ಪತಿ ಹಾಗೂ ನಟ ವಿನಯ್ ಜೊತೆ ರಾಮಾಚಾರಿಯ ವೈಶಾಖ ಧರ್ಮಸ್ಥಳ ಮಂಜುನಾಥ (Dharmasthala Manjunatha) ದೇವಸ್ಥಾನ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ದೇವರ ದರ್ಶನ ಪದೆದು ಅಲ್ಲಿ ಪೂಜೆ ಮಾಡಿಸಿ ಬಂದಿದ್ದಾರೆ. 
 

77

ತೆರೆ ಮೇಲಿನ ವೈಶಾಖ ನಟನೆಯನ್ನು ನೋಡಿ ಹಿಡಿ ಶಾಪ ಹಾಕೋ ಹಾಗೂ ಬೈಯುತ್ತಿರುವ ಜನರು, ಐಶ್ವರ್ಯ ಮತ್ತು ವಿನಯ್ ಜೋಡಿ ನೋಡಿ ಮೆಚ್ಚಿಕೊಂಡಿದ್ದಾರೆ. ಇಬ್ಬರು ಯಾವಾಗ್ಲೂ ಹೀಗೆ ಖುಷಿಯಾಗಿರಿ, ನಿಮ್ಮಿಬ್ಬರ ಜೋಡಿ ಮೇಡ್ ಫಾರ್ ಈಚ್ ಅದರ್ ಅಂತಾನೂ ಹೇಳಿದ್ದಾರೆ. 
 

click me!

Recommended Stories