ಸಾದ ಸೀರೆ ಬಿಟ್ಟು ಟ್ರೆಂಡಿಯಾಗಿ ಸೀರೆಯುಟ್ಟ ಭೂಮಿಕಾ ಲುಕ್ ಗೆ ಫ್ಯಾನ್ಸ್ ಫಿದಾ… ಇದು ನಮ್ಮ ಲಕ್ಷ್ಮೀನಾ ಕೇಳ್ತಿದ್ದಾರೆ ಜನ!

Published : Oct 24, 2024, 04:51 PM ISTUpdated : Oct 25, 2024, 12:21 PM IST

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿರುವ ನಟಿ ಭೂಮಿಕಾ ರಮೇಶ್ ಸಖತ್ ಸ್ಟೈಲಿಶ್ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.   

PREV
17
ಸಾದ ಸೀರೆ ಬಿಟ್ಟು ಟ್ರೆಂಡಿಯಾಗಿ ಸೀರೆಯುಟ್ಟ ಭೂಮಿಕಾ ಲುಕ್ ಗೆ ಫ್ಯಾನ್ಸ್ ಫಿದಾ… ಇದು ನಮ್ಮ ಲಕ್ಷ್ಮೀನಾ ಕೇಳ್ತಿದ್ದಾರೆ ಜನ!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಲಕ್ಷ್ಮೀ ಪಾತ್ರಕ್ಕೆ ಜೀವ ತುಂಬಿ ನಟಿಸುವ ನಟಿ ಭೂಮಿಕಾ ರಮೇಶ್. ವಯಸ್ಸು ಇನ್ನೂ 20 ಆದರೂ ತಮ್ಮ ಅದ್ಭುತವಾದ ನಟನೆಯಿಂದಲೆ ಮೋಡಿ ಮಾಡುವ ಚೆಲುವೆ ಭೂಮಿಕಾ. 
 

27

ಕಳೆದ ಒಂದೂವರೆ ವರ್ಷದಿಂದ ಲಕ್ಷ್ಮೀ ಪಾತ್ರದ ಮೂಲಕ ಕಿರುತೆರೆ ವೀಕ್ಷಕರಿಗೆ ಭರ್ಜರಿ ಮನರಂಜನೆ ಕೊಟ್ಟಿದ್ದಾರೆ ಭೂಮಿಕಾ (Bhoomika Ramesh). ಮೊದಲಿಗೆ ಅಕ್ಕಮ್ಮನ ಪ್ರೀತಿಯ ಲಡ್ಡು ಆಗಿ, ತಪ್ಪಿನ ವಿರುದ್ಧ ಹೋರಾಡುವ ದಿಟ್ಟೆಯಾಗಿ, ಪ್ರೇಮಿಯಾಗಿ, ಒಳ್ಳೆಯ ಸೊಸೆಯಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಅತ್ತೆಗೆ ಬುದ್ಧಿ ಕಲಿಸುವ ಲಕ್ಷ್ಮೀ ರೂಪದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ ಭೂಮಿಕಾ. 
 

37

ಲಕ್ಷ್ಮೀ ಬಾರಮ್ಮ ಕಥೆ ಬಗ್ಗೆ ಹೇಳೋದಾದ್ರೆ ಸದ್ಯ ಕೀರ್ತಿಯ ಸಾವಿನ ರಹಸ್ಯವನ್ನು ತಿಳಿಯೋದಕ್ಕೆ ಲಕ್ಷ್ಮೀ ಎಲ್ಲಾ ರೀತಿಯಿಂದಲೂ ಪ್ರಯತ್ನ ಮಾಡುತ್ತಿದ್ದಾಳೆ. ಅಷ್ಟೇ ಅಲ್ಲ ಕೀರ್ತಿ ದೆವ್ವ ಮೈಮೇಲೆ ಬಂದಂತೆ ಕೂಡ ನಾಟಕ ಮಾಡಿದ್ದಾಳೆ. ಆದರೆ ಇಷ್ಟೆಲ್ಲಾ ಮಾಡಿದ್ರೂ ಕಾವೇರಿ ಒಂದಲ್ಲ ಒಂದು ರೀತಿಯಲ್ಲಿ ಮೋಸದಿಂದ ಗೆದ್ದಿದ್ದಾಳೆ. ಇದಿಷ್ಟು ಕಥೆ. ಲಕ್ಷ್ಮೀ ಆಲಿಯಾಸ್ ಭೂಮಿಕಾ, ಈ ಎಲ್ಲಾ ಪಾತ್ರಗಳನ್ನ ಅದ್ಭುತವಾಗಿ ಮಾಡುವ ಮೂಲಕ ಜನಮನ ಗೆದಿದ್ದಾರೆ. 
 

47

ಭೂಮಿಕಾ ಲಕ್ಷ್ಮೀ ಬಾರಮ್ಮ ಸೀರಿಯಲ್ ಜೊತೆ ಜೊತೆಗೆ ತೆಲುಗಿನ ಝೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮೇಘ ಸಂದೇಶಂ (Megha Sandesham) ಧಾರಾವಾಹಿಯಲ್ಲಿ ಭೂಮಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯ ನಾಯಕನಾಗಿ ಮತ್ತೊಬ್ಬ ಕನ್ನಡಿಗ ಅಭಿನವ್ ವಿಶ್ವನಾಥನ್ ನಟಿಸುತ್ತಿದ್ದಾರೆ. 
 

57

ಇದೀಗ ತೆಲುಗು ಝೀ ಕುಟುಂಬಂ ಅವಾರ್ಡ್ಸ್ (Zee Kutumbam Awards) ನಡೆದಿದ್ದು,  ಕಾರ್ಯಕ್ರಮದಲ್ಲಿ ಭೂಮಿಕ ನವನಟಿ ಅವಾರ್ಡ್ ಕೂಡ ಗೆದ್ದಿದ್ದಾರೆ. ಅವಾರ್ಡ್ ಸಮಾರಂಭಕ್ಕೆ ಭೂಮಿಕಾ ಸಖತ್ ಸ್ಟೈಲಿಶ್ ಆಗಿ ಸೀರೆಯುಟ್ಟು ರೆಡಿಯಾಗಿದ್ದು, ಲಕ್ಷ್ಮೀಯ ಹೊಸ ಅವತಾರ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. 
 

67

ಬ್ಲ್ಯಾಕ್ ಬಣ್ಣದ ಡಿಸೈನರ್ ನೆಟೆಡ್ ಬ್ಲೌಸ್ ಜೊತೆಗೆ ಕಪ್ಪು ಬಣ್ಣದ ಡ್ರೆಸ್ ರೀತಿಯ ಸೀರೆಯನ್ನು ಲಕ್ಷ್ಮೀ ಧರಿಸಿದ್ದು, ಓಪನ್ ಹೇರ್ ಬಿಟ್ಕೊಂಡು, ಹೈ ಹೀಲ್ಸ್ ಧರಿಸಿ, ಸಖತ್ ಸ್ಟೈಲಿಶ್ ಆಗಿ ಪೋಸ್ ಕೊಟ್ಟಿದ್ದಾರೆ. ಯಾವಾಗಲೂ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಸಾಧಾರಣ ಸೀರೆಯುಟ್ಟು ಕಾಣಿಸಿಕೊಳ್ಳುವ ಭೂಮಿಕಾಳ ಈ ಅವತಾರ ಫ್ಯಾನ್ಸ್ ಫಿದಾ ಆಗಿದ್ದಾರೆ. 
 

77

ಅದ್ಭುತ ಸೌಂದರ್ಯ, ಮುದ್ದು ಗೊಂಬೆ, ನಮ್ಮ ದೃಷ್ಟಿನೇ ಆಗುತ್ತೆ, ಇದು ನಮ್ಮ ಲಕ್ಷ್ಮೀನಾ, ನೀವು ಯಾವಾಗ್ಲೂ ಹೀಗೆ ರೆಡಿಯಾಗಿ ತುಂಬಾನೆ ಚೆನ್ನಾಗಿ ಕಾಣಿಸ್ತೀರಿ. ಸ್ಟನ್ನಿಂಗ್, ಗಾರ್ಜಿಯಸ್ , ಬ್ಯೂಟಿಫುಲ್, ಹುಣ್ಣಿಮೆ ಚಂದಿರ ಕಪ್ಪು ಸೀರೆ ಉಟ್ಟಂತಿದೆ, ಸೂಪರ್ ಮೇಕ್ ಓವರ್, ಎಂದೆಲ್ಲಾ ಕಾಮೆಂಟ್ ಮಾಡುವ ಮೂಲಕ ಪ್ರೀತಿಯ ಮಹಾಪೂರವನ್ನೇ ಹರಿಸಿದ್ದಾರೆ. 
 

Read more Photos on
click me!

Recommended Stories