ತೆಲುಗು ನಾಡಿನಲ್ಲಿ ಕನ್ನಡಿಗರದ್ದೇ ಹವಾ… ಝೀ ಕುಟುಂಬಂ ಅವಾರ್ಡ್ಸ್ ನಲ್ಲಿ ಸಾಲು ಸಾಲು ಪ್ರಶಸ್ತಿ ಗೆದ್ದ ಕನ್ನಡ ತಾರೆಯರು

First Published Oct 24, 2024, 2:52 PM IST

ತೆಲುಗು ಝೀ ಕುಟುಂಬಂ ಅವಾರ್ಡ್ಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ತೆಲುಗು ಕಿರುತೆರೆಯಲ್ಲಿ ಕನ್ನಡದ ತಾರೆಯರೇ ಸದ್ದು ಮಾಡ್ತಿದ್ದಾರೆ. 
 

ತೆಲುಗು ಕಿರುತೆರೆಯ ಝೀ ವಾಹಿನಿಯಲ್ಲಿ ಕೂಡ ಝೀ ಕುಟುಂಬಂ ಅವಾರ್ಡ್ಸ್ (Zee Kutumbam Awards) ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ನಡೆದಿದ್ದು, ಹೆಚ್ಚಿನ ಅವಾರ್ಡ್ಸ್ ಕನ್ನಡಿಗರ ಪಾಲಾಗಿದೆ. ಹೌದು, ತೆಲುಗು ಕಿರುತೆರೆಯಲ್ಲಿ ಕನ್ನಡದ ನಟರೆ ಹೆಚ್ಚಾಗಿದ್ದು, ಹಾಗಾಗಿ ಪ್ರಶಸ್ತಿಗಳು ಕೂಡ ಕನ್ನಡಿಗರ ಪಾಲಾಗಿದೆ. ಕನ್ನಡದ ಯಾವ್ಯಾವ ನಟರಿಗೆ ಪ್ರಶಸ್ತಿ ಬಂದಿದೆ ನೋಡೋಣ. 
 

ಜಯಶ್ರೀ ರಾಜ್ : ಕನ್ನಡ ಕಿರುತೆರೆಯಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ ನಟಿಸಿದ್ದ ಜಯಶ್ರೀ ರಾಜ್ ಅವರಿಗೆ ಪಾಡಮಾಟಿ ಸಂಧ್ಯಾರಾಗಂ ಸೀರಿಯಲ್ ಗಾಗಿ ತೆಲುಗು ವೆಲುಗು ಅವಾರ್ಡ್ ಸಿಕ್ಕಿದೆ. 
 

Latest Videos


ಅಭಿನವ್ ವಿಶ್ವನಾಥನ್ (Abhinav Vishwanathan): ನನ್ನರಸಿ ರಾಧೆ ಮತ್ತು ತ್ರಿಪುರ ಸುಂದರಿಯಲ್ಲಿ ನಟಿಸಿದ್ದ ಅಭಿನವ್ ವಿಶ್ವನಾಥನ್ ಝೀ ಕುಟುಂಬಂ ಸಮಾರಂಭದಲ್ಲಿ ಹ್ಯಾಂಡ್ಸಮ್ ಹಂಕ್ ಪ್ರಶಸ್ತಿ ಪಡೆದಿದ್ದಾರೆ. ಇವರು ಮೇಘಸಂದೇಶಂ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 

ವೈಷ್ಣವಿ : ಮಿಥುನ ರಾಶಿ ಧಾರಾವಾಹಿಯಲ್ಲಿ ರಾಶಿ ಪಾತ್ರದಲ್ಲಿ ಮಿಂಚಿದ ನಟಿ ವೈಷ್ಣವಿ, ಸದ್ಯ ತೆಲುಗಿನ ಸೀತಾ ರಾಮುಡಿ ಕಥನಮ್ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಈ ಸೀರಿಯಲ್ ಗಾಗಿ ಬೆಸ್ಟ್ ದಂಪತಿ ಅವಾರ್ಡ್ ಲಭಿಸಿದೆ.
 

ಚಂದು ಗೌಡ - ಆಶಿಕಾ ಪಡುಕೋಣೆ (Chandu Gowda and Ashika Padukone) : ಇಬ್ಬರು ಕನ್ನಡ ತಾರೆಯರು. ಇವರು ತ್ರಿನಯನಿ ಧಾರಾವಾಹಿಗಾಗಿ ಎವರ್ ಗ್ರೀನ್ ಕಪಲ್ ಪ್ರಶಸ್ತಿ ಪಡೆದಿದ್ದಾರೆ. 
 

ಭೂಮಿಕಾ ರಮೇಶ್ (Bhoomika Ramesh) : ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿರುವ ಭೂಮಿಕಾ ರಮೇಶ್, ತೆಲುಗಿನಲ್ಲಿ ಮೇಘ ಸಂದೇಶಂ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ನವ ನಾಯಕಿ ಅವಾರ್ಡ್ ಪಡೆದಿದ್ದಾರೆ. 
 

ನಿಶಾ ಗೌಡ : ಇವರು ಕನ್ನಡ ಸೀರಿಯಲ್ ನಲ್ಲಿ ನಟಿಸಿರುವ ಬಗ್ಗೆ ಮಾಹಿತಿ ಇಲ್ಲ, ಆದರೆ ಇವರು ಬೆಂಗಳೂರಿನವರೇ, ಇವರು ನಿಂದು ನೋರೆಲ್ಲ ಸವಾಸಮ್ ಸೀರಿಯಲ್ ನಲ್ಲಿ  ನಟಿಸುತ್ತಿದ್ದು, ಭಾಗಮತಿ ಪಾತ್ರ ನಿರ್ವಹಿಸುತ್ತಿದ್ದಾರೆ. ಭಾಗಮತಿ -ಅಮರೇಂದ್ರ ಬೆಸ್ಟ್ ಕೆಮೆಸ್ಟ್ರಿ ಪ್ರಶಸ್ತಿ ಪಡೆದಿದ್ದಾರೆ. 
 

ಅರ್ಚನಾ ಅನಂತ್ : ಬೆಂಗಳೂರಲ್ಲಿ ಹುಟ್ಟಿ ಬೆಳೆದಿರುವ ಅರ್ಚನಾ, ಸದ್ಯ ತೆಲುಗು ಕಿರುತೆರೆಯಲ್ಲಿ ಬ್ಯುಸಿ. ಇವರು ಕನ್ನಡದಲ್ಲಿ ಮುದ್ದು ಲಕ್ಷ್ಮೀ ಧಾರಾವಾಹಿಯಲ್ಲಿ ನಟಿಸಿದ್ದರು. ಇದೀಗ ಚಿರಂಜೀವಿ ಲಕ್ಷ್ಮೀ ಸೌಭಾಗ್ಯವತಿ ಧಾರಾವಾಹಿಯಲ್ಲಿ ಉತ್ತಮ ಅತ್ತೆ ಪ್ರಶಸ್ತಿಯನ್ನು ಪಡೆದಿದ್ದಾರೆ. 
 

ದೀಪ್ತಿ ಮನ್ನೆ : ಪದ್ಮಾವತಿ ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಟಿ ದೀಪ್ತಿ ಮನ್ನೆ, ಈಗ ತೆಲುಗಿನಲ್ಲಿ ಜನಪ್ರಿಯ ನಟಿ. ಇವರು ಜಗಧಾತ್ರಿ ಸೀರಿಯಲ್ ನಾಯಕಿಯಾಗಿ ನಟಿಸುತ್ತಿದ್ದು, ಈ ಪಾತ್ರಕ್ಕೆ ಉತ್ತಮ ಕಥಾನಾಯಕಿ ಪ್ರಶಸ್ತಿ ಲಭ್ಯವಾಗಿದೆ. 
 

ಐಶ್ವರ್ಯ ಪಿಸ್ಸೆ : ಸರ್ವ ಮಂಗಲ ಮಾಂಗಲ್ಯೆ ಸೇರಿ ಕನ್ನಡದಲ್ಲಿ ಹಲವು ಸೀರಿಯಲ್ ಗಳಲ್ಲಿ ಮಿಂಚಿದ್ದ ನಟಿ ಐಶ್ವರ್ಯ ಪಿಸ್ಸೆ, ಮುಕ್ಕುಪುದಕ ಸೀರಿಯಲ್ ಗಾಗಿ ಸಹ ನಟನ ಜೊತೆಗೆ ಉತ್ತಮ ಗಂಡ- ಹೆಂಡತಿ ಪ್ರಶಸ್ತಿ ಗೆದ್ದಿದ್ದಾರೆ. 
 

ಪಲ್ಲವಿ ಗೌಡ : ಕನ್ನಡದಲ್ಲಿ ಮನೆಯೊಂದು ಮೂರು ಬಾಗಿಲು, ಪರಿಣಯ, ಗಾಳಿಪಟ, ಜೋಡಿ ಹಕ್ಕಿ, ಸೇವಂತಿ, ಮೊದಲಾದ ಸೀರಿಯಲ್ ಗಳಲ್ಲಿ ನಟಿಸಿದ್ದ ಪಲ್ಲವಿ ಗೌಡ, ತೆಲುಗಿನ ನಿಂದು ನೂರೆಲ್ಲಾ ಸವಾಸಮ್ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಝೀ ಕುಟುಂಬಾ ಅವಾರ್ಡ್ಸ್ ನಲ್ಲಿ ಬೆಸ್ಟ್ ಸಿಸ್ಟರ್ ಪ್ರಶಸ್ತಿ ಪಡೆದಿದ್ದಾರೆ. 
 

ರಾಘವೇಂದ್ರ : ನಮ್ಮನೆ ಯುವರಾಣಿ, ಮಿಸ್ಟರ್ ಆಂಡ್ ಮಿಸಸ್ ರಂಗೇಗೌಡ ಸೀರಿಯಲ್ ನಟಿ ರಾಘು ಇತರ ಮೂವರು ನಟರ ಜೊತೆಗೆ ಬೆಸ್ಟ್ ಫ್ರೆಂಡ್ಸ್ ಅವಾರ್ಡ್ ಪಡೆದುಕೊಂಡಿದ್ದಾರೆ. ಇವರು ಚಿರಂಜಿವಿ ಲಕ್ಷ್ಮೀ ಸೌಭಾಗ್ಯವತಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 
 

click me!