‘Shubhasya Sheegram Serial’... ಹೀರೋ ಆಗಿಯೇ ಬಿಟ್ಟ ಅಮೃತಧಾರೆಯ ವಿಲನ್ ಜೈದೇವ್

Published : Aug 01, 2025, 08:53 PM IST

ಅಮೃತಧಾರೆ ಧಾರಾವಾಹಿಯಲ್ಲಿ ವಿಲನ್ ಜೈದೇವ್ ಪಾತ್ರಕ್ಕೆ ಖಡಕ್ ಅಭಿನಯ ಮಾಡುವ ಮೂಲಕ ವೀಕ್ಷಕರ ಮನ ಗೆದ್ದಿರುವ ರಾಣವ್ ಗೌಡ ಇದೀಗ ಹೀರೋ ಆಗಿ ಮಿಂಚಲು ರೆಡಿಯಾಗಿದ್ದಾರೆ. 

PREV
17

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯ ಪ್ರತಿಯೊಬ್ಬ ಪಾತ್ರಧಾರಿಯೂ, ಕೊಟ್ಟ ಪಾತ್ರಕ್ಕೆ ಜೀವ ತುಂಬಿ ನಟಿಸುತ್ತಾರೆ. ಅದರಲ್ಲೂ ವಿಲನ್ ಜೈದೇವ್ ಪಾತ್ರದಲ್ಲಿ ನಟಿಸುತ್ತಿರುವ ರಾಣವ್ ಗೌಡ ಖಡಕ್ ಡೈಲಾಗ್ ಗಳಿಗೆ, ಅಭಿನಯಕ್ಕೆ ಮನಸೋಲದವರು ಯಾರೂ ಇಲ್ಲ.

27

ವಿಲನ್ ಅಂದ್ರೆ ಹೀಗೆ ಇರಬೇಕು ಎನ್ನುವಷ್ಟು, ಪಾತ್ರಕ್ಕೆ ನ್ಯಾಯ ಒದಗಿಸುತ್ತಿರುವ ರಾಣವ್ ಗೌಡಾಗೆ (Raanav Gowda) ಸಿಕ್ಕಾಪಟ್ಟೆ ಅಭಿಮಾನಿಗಳು ಕೂಡ ಇದ್ದಾರೆ. ಇವರು ಹೀರೋ ಅಗುತ್ತಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಎಂದು ಹೇಳಿದವರು ಇದ್ದಾರೆ. ಆ ಸಂದರ್ಭ ಇದೀಗ ಕೂಡಿ ಬಂದಿದೆ.

37

ಹ್ಪೊಸ ಚಾನೆಲ್ ಝೀ ಪವರ್ ನಲ್ಲಿ ಶೀಘ್ರದಲ್ಲೇ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ ಶುಭಸ್ಯ ಶೀಘ್ರಂನಲ್ಲಿ ರಾಣವ್ ಗೌಡ ನಾಯಕನಾಗಿ ನಟಿಸಲಿದ್ದಾರೆ. ಸದ್ಯ ಸೀರಿಯಲ್ ಪ್ರೊಮೊ ಬಿಡುಗಡೆಯಾಗಿದ್ದು, ಸಖತ್ ಆಗಿ ಮೂಡಿ ಬಂದಿದೆ.

47

ಧಾರಾವಾಹಿ ನಾಯಕಿ ನಾನು ಶುಭ, ಪದಕ್ಕ ನಾಗಣ್ಣನ ನಾಲ್ಕು ಮಕ್ಕಳಲ್ಲಿ ನಾನು ಎರಡನೆಯವಳು ಎಂದು ಹೇಳುತ್ತಾ ಪ್ರೊಮೋ ಶುರುವಾಗುತ್ತೆ. ಅಮ್ಮ ಅಂಗಡಿ ನೋಡಿಕೊಳ್ಳುತ್ತಿದ್ದರೆ, ಅಪ್ಪ ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಿರುತ್ತಾರೆ. ಮಗಳು ಶುಭ ತನ್ನ ಬೈಕ್ ಮೇಲೆ ಶ್ರೀ ಗಣೇಶ ಗ್ರಂದಿಗೆ ಸ್ಟೋರ್ಸ್ ಎಂದು ಬರೆದು ಅಂಗಡಿ ಸಾಮಾನುಗಳನ್ನು ಸಾಗಿಸುತ್ತಿರುತ್ತಾಳೆ.

57

ಇವರೆಲ್ಲರಿಗೂ ಆಸೆ ಇರೋದು ಹಿರಿಯ ಅಕ್ಕನ ಮದುವೆ. ಆದರೆ ಅಕ್ಕನಿಗೆ ಕಿವಿ ಕೇಳಿಸೋದಿಲ್ಲ. ತಂಗಿ ಶುಭ ಅಕ್ಕನಿಗೆ ಹೇಗಾದರು ಮಾಡಿ ಮದುವೆಯಾಗಲಿ ಎಂದು ಆಶಿಸುತ್ತಿರುತ್ತಾರೆ. ಈ ಸಂದರ್ಭದಲ್ಲಿ ಆಕೆಗೆ ಎದುರಾಗೋದು ನಾಯಕ, ಎಲ್ಲಾ ಸೀರಿಯಲ್ ನಂತೆ ಜಗಳದಿಂದಲೇ ಆರಂಭವಾಗುತ್ತೆ ಇವರಿಬ್ಬರ ಭೇಟಿ.

67

ಹೀರೋಗೆ ಮದುವೆ ಅಂದ್ರೇನೆ ಇಷ್ಟ ಇರೋದಿಲ್ಲ. ಕೊನೆಗೆ ಅಕ್ಕನಿಗೋಸ್ಕರ ತಂಗಿ ಅದೇ ಹುಡುಗನನ್ನು ಮದುವೆಯಾಗುವಂತಾಗುತ್ತದೆ. ಇಷ್ಟವಿಲ್ಲದೇ ಮದುವೆಯಾಗುವ ಈ ಜೋಡಿಗಳ ಜೀವನದಲ್ಲಿ ಮತ್ತೆ ಏನೆಲ್ಲಾ ಆಗುತ್ತೆ ಅನ್ನೋದು ಕಥೆ ಇರಬಹುದು. ಈ ಪ್ರೊಮೋ ನೋಡಿ ಜನ ಇದು ಗಟ್ಟಿಮೇಳ ಸೀರಿಯಲ್ ನಂತೆ ಇದೆಯಲ್ಲ ಎಂದಿದ್ದಾರೆ.

77

ಇನ್ನು ವೀಕ್ಷಕರಿಗೆ ವಿಲನ್ ಆಗಿದ್ದ ಜೈದೇವ್ ಇದೀಗ ಹೀರೋ ಆಗಿರೋದನ್ನು ನೋಡಿ ಸಿಕ್ಕಾಪಟ್ಟೆ ಖುಷಿಯಾಗಿದೆ. ಅಕ್ಕನ ಮದುವೇನೆ ಇವಳ ಕನಸು - ಅವನಿಗೆ ಮದುವೆ ಅಂದ್ರೇನೆ ಮುನಿಸು! ಒಡಹುಟ್ಟಿದವರ ಒಳಿತಿಗಾಗಿ ಉರಿದುಬೀಳೋರಿಬ್ರು ಒಂದಾದ್ರೆ?ಎನ್ನುವ ಟ್ಯಾಗ್ ಲೈನ್ ಇರುವ ಈ ಕಥೆಯಲ್ಲಿ ರಾಣವ್ ಗೌಡರನ್ನು ನಾಯಕನಾಗಿ ನೋಡಲು ಎಷ್ಟು ಜನ ಕಾಯ್ತಿದ್ದೀರಿ?

Read more Photos on
click me!

Recommended Stories