Naavu Nammavaru Show: ಅಂದು ಮಾಡಿದ ಕೆಲಸಕ್ಕೆ ಇಂದು ಕೂಡ ಕ್ಷಮಿಸದ ರಜತ್‌ ಪತ್ನಿ ಅಕ್ಷಿತಾ ತಂದೆ!

Published : Aug 01, 2025, 04:50 PM IST

Bigg Boss Rajath And Akshitha Love Story: ಬಿಗ್‌ ಬಾಸ್‌ ಶೋನಲ್ಲಿ ಕಾಣಿಸಿಕೊಂಡಿದ್ದ ರಜತ್‌ ಈಗ ʼನಾವು ನಮ್ಮವರುʼ ಎನ್ನುವ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅಕ್ಷಿತಾ ಅವರು ತಮ್ಮ ಬೇಸರವನ್ನು ಹೇಳಿಕೊಂಡಿದ್ದಾರೆ. 

PREV
15

ಇವರಿಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಈ ಜೋಡಿ ಈಗಾಗಲೇ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದೆ. ಇವರಿಬ್ಬರಿಗೂ ಇಬ್ಬರು ಮಕ್ಕಳಿವೆ.

25

ಅಂದಹಾಗೆ ಅಕ್ಷಿತಾ ಹಾಗೂ ರಜತ್‌ ಅವರು ʼನಾವು ನಮ್ಮವರುʼ ಎನ್ನುವ ಶೋನಲ್ಲಿ ಭಾಗವಹಿಸಿದ್ದಾರೆ. ಸಂಬಂಧಗಳನ್ನು ಕೂಡಿಸುವ ಶೋ ಇದಾಗಿದೆ. ಆ ವೇಳೆ ತಮ್ಮ ಮನಸ್ಸಿನಲ್ಲಿರುವ ನೋವನ್ನು ಹೇಳಿಕೊಂಡಿದೆ. 

35

ಅಕ್ಷಿತಾ ಹಾಗೂ ರಜತ್‌ ಅವರು ಪಿಯುಸಿಯಿಂದಲೂ ಪರಿಚಯದವರು. ಇವರಿಬ್ಬರು ಒಂದೇ ಏರಿಯಾದಲ್ಲಿ ಇದ್ದರು. ರಜತ್‌ ಮನೆಯ ಟೆರೆಸ್‌ನಿಂದ ಅಕ್ಷಿತಾ ಅವರ ಮನೆ ಕಾಣಿಸುತ್ತಿತ್ತು. ಅಕ್ಷಿತಾ ಬಟ್ಟೆ ಒಣಗಿಸುವಾಗ ರಜತ್‌ ನೋಡುತ್ತಿದ್ದರು.

45

ಈ ವೇಳೆ ಅಕ್ಷಿತಾ ಅವರು, “ಎಲ್ಲರೂ ನಮ್ಮನ್ನು ಒಪ್ಪಿಕೊಂಡಿದ್ದಾರೆ. ನನ್ನ ತಂದೆ ಮಾತ್ರ ನಮ್ಮನ್ನು ಮಾತನಾಡಿಸ್ತಿಲ್ಲ” ಎಂದು ಹೇಳಿದ್ದಾರೆ. ಈ ಶೋ ಮುಗಿಯುವವೇಳೆಗೆ ನಿಮ್ಮ ತಂದೆ ನಿಮ್ಮನ್ನು ಒಪ್ಪಿಕೊಳ್ತಾರೆ ಎಂದು ನಟಿ ತಾರಾ ಹೇಳಿದ್ದಾರೆ. ನಟಿ ತಾರಾ, ಶರಣ್‌, ಅಮೂಲ್ಯ ಈ ಶೋನ ತೀರ್ಪುಗಾರರು. 

55

ಅಕ್ಷಿತಾ ಹಾಗೂ ರಜತ್‌ ಅವರು ಒಟ್ಟಿಗೆ ಎರಡು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಈಗ ಇನ್ನೊಂದು ಶೋನಲ್ಲಿಯೂ ಜೊತೆ ಆಗಿದ್ದಾರೆ. ಈ ಜೋಡಿ ಚಿತ್ರರಂಗದಲ್ಲಿ ಆಕ್ಟಿವ್‌ ಆಗಿದ್ದು, ಬ್ಯುಸಿನೆಸ್‌ ಕೂಡ ಮಾಡುತ್ತಿದೆ. 

Read more Photos on
click me!

Recommended Stories