‘ಪುಟ್ಟಕ್ಕನ ಮಕ್ಕಳು’ ಖ್ಯಾತಿಯ ಸ್ನೇಹಾ ಎಷ್ಟು ಗ್ಲಾಮರಸ್ ನೋಡಿ!

Published : Feb 18, 2023, 03:50 PM IST

ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಅನ್ಯಾಯವನ್ನು ಖಡಕ್ ಆಗಿ ಎದುರಿಸುವ ಗಟ್ಟಿಗಿತ್ತಿ ಸ್ನೇಹಾ ಬಗ್ಗೆ ನಿಮಗೆ ಗೊತ್ತೆ ಇರಬೇಕಲ್ಲ. ಕಂಠಿಯ ಮನ ಕದ್ದ ಸ್ನೇಹಾ ರಿಯಲ್ ಲೈಫ್ ನಲ್ಲಿ ತುಂಬಾನೆ ಗ್ಲಾಮರಸ್ ಆಗಿದ್ದಾರೆ. ಅವರ ಬಗ್ಗೆ ಫುಲ್ ಡಿಟೇಲ್ಸ್ ಇಲ್ಲಿದೆ.   

PREV
18
‘ಪುಟ್ಟಕ್ಕನ ಮಕ್ಕಳು’ ಖ್ಯಾತಿಯ ಸ್ನೇಹಾ ಎಷ್ಟು ಗ್ಲಾಮರಸ್ ನೋಡಿ!

ಸದ್ಯ ಕನ್ನಡ ಕಿರುತೆರೆಯಲ್ಲಿ ಹೆಚ್ಚಾಗಿ ಸದ್ದು ಮಾಡ್ತಿರೋ ಧಾರಾವಾಹಿಗಳಲ್ಲಿ ಒಂದು ಎಂದರೆ ಅದು 'ಪುಟ್ಟಕ್ಕನ ಮಕ್ಕಳು' (Puttakkana makkalu ) ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ. ಉಮಾಶ್ರೀ ಪ್ರಮುಖ ಪಾತ್ರದಲ್ಲಿ ನಟಿಸಿರುವ ಪುಟ್ಟಕ್ಕನ ಮಕ್ಕಳು ಸೀರಿಯಲ್ TRPಯಲ್ಲೂ ಮುಂದಿದೆ. 

28

ಈಗ ಈ ಸೀರಿಯಲ್ ಬಗ್ಗೆ ಯಾಕೆ ಹೇಳ್ತಿದೀವಿ ಅಂದ್ರೆ, ಸ್ನೇಹ ಬಗ್ಗೆ ಹೇಳೋದಿಕ್ಕೆ. ಈ ಧಾರಾವಾಹಿಯಲ್ಲಿ ಪುಟ್ಟಕ್ಕನ 2ನೇ ಮಗಳು ಸ್ನೇಹ ಪಾತ್ರ ಅತ್ಯಂತ ಪ್ರಮುಖವಾಗಿದೆ. ‘ಪುಟ್ಟಕ್ಕನ ಮಕ್ಕಳು’ಧಾರಾವಾಹಿಯಲ್ಲಿ ಖಡಕ್ ಸ್ನೇಹ ಪಾತ್ರ ಮಾಡುತ್ತಿರುವ ನಟಿ ಹೆಸರು ಸಂಜನಾ ಬುರ್ಲಿ (Sanjana Burli). ಇವರು ನಿಜ ಜೀವನದಲ್ಲಿ ಫುಲ್ ಗ್ಲಾಮರಸ್ ಆಗಿದ್ದಾರೆ. ಸೀರಿಯಲ್ ನಲ್ಲಿ ಐಪಿಎಸ್ ಓದುವ ಕನಸು ಕಾಣುತ್ತಿರುವ ಸ್ನೇಹ. ನಿಜ ಜೀವನದಲ್ಲಿ ಎಂಜಿನಿಯರಿಂಗ್ ಓದಿ ಮುಗಿಸಿದ್ದಾರೆ. 
 

38

ಸಂಜನಾಗೆ ಪುಟ್ಟಕ್ಕನ ಮಕ್ಕಳು ಮೊದಲ ಸೀರಿಯಲ್ ಅಲ್ಲ ಈ ಹಿಂದೆಯೂ ಕನ್ನಡದ ಕೆಲವು ಸೀರಿಯಲ್ ಗಳಲ್ಲಿ ನಟಿಸಿದ್ದರು. ಸಂಜನಾ ಬುರ್ಲಿ ಹಲವು ವರ್ಷಗಳಿಂದ ರಂಗಭೂಮಿಯಲ್ಲಿದ್ದಾರೆ. ರಂಗಭೂಮಿ ಕಲಾವಿದೆಯಾಗಿರುವ ಸಂಜನಾ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕೇವಲ ಕನ್ನಡ ಅಷ್ಟೇ ಅಲ್ಲದೇ ತಮಿಳಿನಲ್ಲಿಯೂ ನಟಿಸಿದ್ದಾರೆ.

48

ಫಿಟ್ ಮತ್ತು ಸ್ಟೈಲಿಶ್  (fit and stylish) ಆಗಿರುವ ಸಂಜನಾ ಬೆಂಗಳೂರಿನಲ್ಲೇ ಓದಿ ಬೆಳೆದಿದ್ದಾರೆ. ಇವರ ತಂದೆ ಅಜಿತ್ ಬುರ್ಲಿ ಮತ್ತು ತಾಯಿ ಭಾರತಿ. ಎಂಜಿನಿಯರ್ ಆಗಿರುವ ಸಂಜನಾ ಬುರ್ಲಿ ಬೆಂಗಳೂರಿನ ಡಾ, ಅಂಬೇಡ್ಕರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಓದುವಾಗಲೇ ಪುಟ್ಟಕ್ಕನ ಸೀರಿಯಲ್ ನಲ್ಲಿ ನಟಿಸಿದ್ದರು. ಶೂಟಿಂಗ್ ಹಾಗೂ ಕಾಲೇಜು ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದರು.
 

58

ಸಂಜನಾ 'ಪತ್ತೆದಾರಿ ಪ್ರತಿಭಾ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟರು. ಬಳಿಕ 'ಲಗ್ನಪತ್ರಿಕೆ' ಧಾರಾವಾಹಿಯಲ್ಲಿ ನಟಿಸಿದ್ದರು. ಆದರೆ ಸಿರಿಯಲ್ ಪ್ರಿಯರಿಗೆ ಈ ಸೀರಿಯಲ್ (serial) ಇಷ್ಟವಾಗದೆ ಅದು ಅರ್ಧಕ್ಕೆ ನಿಂತು ಹೋಗಿತ್ತು. ಆದಾದ ಬಳಿಕ ಅವರು ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

68

ಇನ್ನು ಸಂಜನಾ ಅವರು ಸಿನಿಮಾಗಳಲ್ಲೂ ನಟಿಸಿದ್ದು, 'ಸ್ನೇಹರ್ಷಿ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಇದಾದ ಬಳಿಕ 'ರಾಧ ಸರ್ಚಿಂಗ್ ರಮಣ ಮಿಸ್ಸಿಂಗ್' ಎಂಬ ಚಿತ್ರದಲ್ಲೂ ನಟಿಸಿದರು. ಅನಂತ್ ನಾಗ್ ಅವರ ಜೊತೆಗೆ 'ವೀಕೆಂಡ್' , 'ನಾನ್ ವೆಜ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಒಂದು ತಮಿಳು ಚಿತ್ರದಲ್ಲೂ ಇವರು ನಟಿಸಿದ್ದಾರೆ.
 

78

ತಮ್ಮ ಫಿಟ್ನೆಸ್ (fitness) ಬಗ್ಗೆ ತುಂಬಾನೆ ಕಾನ್ಶಿಯಸ್ ಆಗಿರುವ ಸಂಜನಾ ಬುರ್ಲಿ ಮೊದಲು ಬ್ಯಾಡ್ಮಿಟನ್, ಈಜು ಹಾಗೂ ಕೆಲ ಆಟಗಳನ್ನು ಆಡುತ್ತಿದ್ದರಂತೆ. ಆದರೆ, ಈಗ ನಿತ್ಯ ಒಂದು ಗಂಟೆಯ ಕಾಲ ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಾರೆ. ಅದನ್ನು ತಪ್ಪಿಸೋದೆ ಇಲ್ಲವಂತೆ. ಶೂಟಿಂಗ್ ಮಧ್ಯೆ ಟೈಮ್ ಸಿಕ್ಕರೂ ವ್ಯಾಯಾಮ ಮಾಡ್ತಾರಂತೆ ಇವರು. 

88

ಇನ್ನು ವೆಜಿಟೇರಿಯನ್ ಆಗಿರುವ ಸಂಜನಾ ತಮ್ಮ ಫಿಟ್‌ನೆಸ್ ಕಾಪಾಡಲು ಮಿತ ಆಹಾರವನ್ನು ಸೇವಿಸುತ್ತಾರಂತೆ. ಹೊರಗಡೆ ಹೋದಾಗ, ಟ್ರಾವೆಲಿಂಗ್‌ನಲ್ಲಿದ್ದಾಗ ಕರಿದಿರುವ ಪದಾರ್ಥಗಳನ್ನು ಅವಾಯ್ಡ್ ಮಾಡುತ್ತಾರಂತೆ. ಜೊತೆಗೆ ನಿತ್ಯ 7 ಗಂಟೆಗಳ ಕಾಲ ಚೆನ್ನಾಗಿ ನಿದ್ದೆ ಮಾಡೋದು, ಪ್ರೊಟೀನ್ ಹೆಚ್ಚಾಗಿರೋ ಆಹಾರ ಸೇವಿಸೋದು, ಇವರ ಫಿಟ್ನೆಸ್ ಸೀಕ್ರೆಟ್ (fitness secret) ಅಂತೆ..
 

Read more Photos on
click me!

Recommended Stories