ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿಯಲ್ಲಿ ರಾಜಿ ಪಾತ್ರದಿಂದ ಈಗಾಗಲೇ ನಟಿ ಹಂಸಾ ಹೊರ ಬಂದಾಗಿದೆ. ಆ ಬಗ್ಗೆ ಒಂದಷ್ಟು ಕಾಂಟ್ರವರ್ಸಿ ಕೂಡ ಆಗಿತ್ತು. ಅದೇನು ಅನ್ನೋದು ನಿಮಗೂ ಗೊತ್ತಿದೆ. ಹಂಸಾ ಬಿಗ್ ಬಾಸ್ ಮನೆಗೆ ಹೋಗಿದ್ದು, ಅಲ್ಲಿಂದ ಬಂದ ನಂತ್ರ ಮತ್ತೆ ಸೀರಿಯಲ್ ಗೆ ಬರೋದಿಲ್ಲ ಅಂತಾನೂ ಹೇಳಿದ್ರು.
ಹಂಸಾ (Hamsa) ಬಿಗ್ ಬಾಸ್ ಗೆ ತೆರಳಿದ್ದ ಸಂದರ್ಭದಲ್ಲಿ ಪುಟ್ಟಕ್ಕನ ಮಕ್ಕಳು ನಿರ್ದೇಶಕ ಆರೂರು ಜಗದೀಶ್ ಸಂದರ್ಶನವೊಂದರಲ್ಲಿ ಮಾತನಾಡಿ, ಹಂಸಾ ನಮಗೆ ಮೋಸ ಮಾಡಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗುವ ವಿಷಯವೇ ನಮಗೆ ತಿಳಿಸಿರಲಿಲ್ಲ. ರಜೆ ಕೂಡ ಕೇಳಿರಲಿಲ್ಲ, ಬಿಗ್ ಬಾಸ್ ಮನೆಯಲ್ಲಿ ಆಕೆಯನ್ನು ನೋಡಿ ಶಾಕ್ ಆಗಿರೋದಾಗಿ ಹೇಳಿದ್ದರು.
ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತ್ರ ಹಂಸಾ ಆರೂರು ಜಗಧೀಶ್ (Arur Jagadish) ಅವರ ವಿರುದ್ಧ ಮಾತನಾಡಿ ನಾನು ಇಪ್ಪತ್ತು ವರ್ಷಗಳಿಂದ ನಟನೆಯಲ್ಲಿದ್ದವಳು. ನಾನು ಮೊದಲೇ ಫೇಮಸ್. ನನ್ನಿಂದ್ಲೇ ಇವ್ರು ಕಾಸು ಮಾಡಿಕೊಂಡರೇ ಹೊರತು, ಅವರು ಕೊಟ್ಟ ಪಾತ್ರದಿಂದ ನಾನು ಫೇಮಸ್ ಆಗಿಲ್ಲ.
ಪುಟ್ಟಕ್ಕನ ಮಕ್ಕಳು ರಾಜಿ ಪಾತ್ರಕ್ಕೆ ಹೆಚ್ಚು ಅವಕಾಶವೇ ಇರಲಿಲ್ಲ. ವಾರದಲ್ಲಿ ಐದಾರು ದಿನ ಶೂಟಿಂಗ್ ಇರುತ್ತೆ ಎಂದಿದ್ರು. ಅದರೆ ಅದು 2-3 ದಿನಕ್ಕೆ ಇಳಿಯಿತು. ಮೂರು ವರ್ಷದಿಂದ ಪೇಮೆಂಟ್ ಕೂಡ ಹೆಚ್ಚು ಮಾಡಲಿಲ್ಲ. ನನಗೆ ನೈತಿಕತೆ ಇದ್ದುದರಿಂದಲೇ ಮೂರು ವರ್ಷ ಅಲ್ಲೇ ಇದ್ದೆ. ಇಲ್ಲದಿದ್ದರೆ ಯಾವಾಗಲೋ ಹೊರಕ್ಕೆ ಬರುತ್ತಿದ್ದೆ. ನನ್ನಿಂದ ಕಾಸು ಮಾಡುಕೊಂಡು ನೈತಿಕತೆ ಬಗ್ಗೆ ಹೇಳುವ ಅಧಿಕಾರ ಅವರಿಗೆ ಇಲ್ಲ ಎಂದು ಹಂಸ ನಿರ್ದೇಶಕರ ಮೇಲೆ ಕಿಡಿ ಕಾರಿದ್ದರು.
ಇದೆಲ್ಲದರ ಮಧ್ಯೆ ರಾಜಿ ಪಾತ್ರವನ್ನು ಯಾವ ಮುನ್ಸೂಚನೆಯಿಲ್ಲದೇ ಮುಗಿಸಿಯೇ ಬಿಡುತ್ತಾರೆಯೇ? ಇನ್ನು ಮುಂದೆ ರಾಜಿ ಪಾತ್ರವೇ ಇರೋದಿಲ್ಲವೇ ಎನ್ನುವ ಸುದ್ದಿ ಬರುತ್ತಿರುವ ಹೊತ್ತಿದೆ. ಇದೀಗ ರಾಜಿ ಪಾತ್ರಕ್ಕೆ ನಟಿ ಸ್ವಾತಿ ಆಯ್ಕೆಯಾಗಿದ್ದಾರೆ ಎನ್ನುವ ವಿಷಯ ಕೇಳಿ ಬಂದಿದೆ. ಸ್ವಾತಿ (Swathi hv) ಈಗಾಗಲೇ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು.
ಸ್ವಾತಿ ಎಚ್ ವಿ ಮಾಡೆಲ್ ಆಗಿದ್ದು ಕನ್ನಡ ಕಿರುತೆರೆಯ ಹಲವು ಸೀರಿಯಲ್ ಗಳಲ್ಲಿ ವಿಲನ್ ಪಾತ್ರಗಳಲ್ಲಿ ಹಲವು ವರ್ಷಗಳಿಂದ ಮಿಂಚುತ್ತಿದ್ದಾರೆ. ಶುಭ ವಿವಾಹ', 'ಪುಟ್ಟಗೌರಿ ಮದುವೆ', 'ಗಂಗಾ', 'ರಂಗನಾಯಕಿ', 'ಸರ್ವಮಂಗಳ ಮಾಗಲ್ಯೇ', 'ನಾಗಕನ್ನಿಕೆ''ಗಟ್ಟಿಮೇಳ', 'ಬೆಟ್ಟದ ಹೂ', 'ಕನ್ಯಾ ಕುಮಾರಿ' ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ್ದರು.
ಅಷ್ಟೇ ಅಲ್ಲ ಮಿಸ್ ಕರ್ನಾಟಕ 2009 ವಿಜೇತೆ ಸ್ವಾತಿ ಎಚ್ ವಿ ಅವರು ಹಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. 'ದಂಡುಪಾಳ್ಯ', 'ಬಿಡಲಾರೆ ನಿನ್ನ', 'ವಾರಸ್ದಾರ', 'ಉಡ', 'ಹುಂಜ', 'ವಿಘ್ನೇಶ್ವರ' ಇವರು ನಟಿಸಿದಾ ಚಿತ್ರಗಳು. ಕಿರುತೆರೆ, ಹಿರಿತೆರೆಯಲ್ಲಿ ಸೈ ಎನಿಸಿಕೊಂಡಿರುವ ಸ್ವಾತಿ ರಾಜಿ ಪಾತ್ರಕ್ಕೆ ನ್ಯಾಯ ಒದಗಿಸುತ್ತಾರಾ? ಕಾದು ನೋಡಬೇಕು.