ಭಾಗ್ಯಲಕ್ಷ್ಮೀ (Bhagyalakshmi) ಧಾರಾವಾಹಿಯಲ್ಲಿ ತಾಂಡವ್ ನ ಅತಿಯಾದ ಅಹಂಕಾರ, ದರ್ಪ, ದಬ್ಬಾಳಿಕೆಯನ್ನು ಇಲ್ಲಿವರೆಗೂ ಸಹಿಸಿಕೊಂಡು ಬಂದಿದ್ದ ಭಾಗ್ಯ ಇದೀಗ ಗಂಡನ ಮೋಸದ ವಿರುದ್ಧ ಸಿಡಿದೆದ್ದು, ಗಂಡನಿಗೆ ಸವಾಲು ಹಾಕಿ ಮನೆಬಿಟ್ಟು ಹೊರ ಬಂದಿದ್ದಾಳೆ. ತಾನು ಮಾತ್ರ ಅಲ್ಲ, ತನ್ನ ಮಕ್ಕಳು, ಅತ್ತೆ, ಮಾವ ಇಬ್ಬರನ್ನೂ ಕರೆದುಕೊಂಡು ಹೊರ ಬಂದಿದ್ದಾಳೆ.