ಗಂಡನ ಜೊತೆ ಬೇಬಿ ಮೂನ್ ಎಂಜಾಯ್ ಮಾಡ್ತಿದ್ದಾರೆ ಗರ್ಭಿಣಿ ನಟಿ ಕಾವ್ಯಾ ಗೌಡ!

First Published | Dec 10, 2023, 4:43 PM IST

ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚಿದ ನಟಿ ಕಾವ್ಯಾ ಗೌಡ, ಗರ್ಭಿಣಿಯಾಗಿರುವ ಸುದ್ದಿ ನಿಮಗೆ ಗೊತ್ತೆ ಇದೆ, ಇದೀಗ ನಟಿ ಬೇಬಿ ಮೂನ್ ಮಾಡುತ್ತಿದ್ದು, ಸುಂದರ ಕ್ಷಣಗಳ ಫೋಟೋಗಳನ್ನು ಶೇರ್ ಮಾಡಿದ್ದಾರೆ. 

ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚಿದ ನಟಿ ಕಾವ್ಯಾ ಗೌಡ (Kavya Gowda) ಇತ್ತೀಚೆಗಷ್ಟೆ ತಮ್ಮ ಎರಡನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಗುಡ್ ನ್ಯೂಸ್ ಹಂಚಿಕೊಂಡಿದ್ದರು. ಇದೀಗ ಸೆಲೆಬ್ರೇಶನ್ ಮೂಡ್ ನಲ್ಲಿದ್ದಾರೆ ನಟಿ. 

ಕೆಲದಿನಗಳ ಹಿಂದೆ ನಟಿ ಕಾವ್ಯಾ ಗೌಡ, ತಾವು ಗರ್ಭಿಣಿಯಾಗಿರುವುದಾಗಿ (pregnant)ಹಾಗೂ ಮುಂದಿನ ವರ್ಷ ಮಗುವಿಗೆ ಜನ್ಮ ನೀಡುವುದಾಗಿ ತಮ್ಮ ಎರಡನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಭಿಮಾನಿಗಳ ಜೊತೆ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದರು. 

Tap to resize

ಪ್ಲೋರೆಲ್​ ಡ್ರೆಸ್​ ತೊಟ್ಟು ಪತಿ ಕೈ ಹಿಡಿದು, ಕಡಲ ತೀರಲ್ಲಿ ಹೆಜ್ಜೆ ಹಾಕುತ್ತಿರುವ ಬೇಬಿ ಬಂಪ್ (baby bump)ಫೋಟೋಗಳನ್ನು ಮತ್ತು ವಿಡೀಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದ ಕಾವ್ಯಾ ಗೌಡ ಜೀವನದ ಹೊಸ ಜವಾಬ್ಧಾರಿಯ ಬಗ್ಗೆ ತಿಳಿಸಿದ್ದರು. 

ಇದೀಗ ಸೋಶಿಯಲ್ ಮೀಡೀಯಾದಲ್ಲಿ (Social media) ಮತ್ತಷ್ಟು ಫೋಟೋಗಳನ್ನು ಶೇರ್ ಮಾಡಿರುವ ಕಾವ್ಯಾ ಗೌಡ, ತಮ್ಮ ತಾಯ್ತನವನ್ನು (motherhood) ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದು. 

ಸದ್ಯ ವೆಕೇಶನ್ ಮೂಡ್ ನಲ್ಲಿರುವ ಗರ್ಭಿಣಿ ಕಾವ್ಯಾ ಗೌಡ, ಕಲರ್ ಫುಲ್ ಫ್ಲೋರಲ್ ಡ್ರೆಸ್, ತಲೆ ಮೇಲೊಂದು ಹ್ಯಾಟ್, ಕಣ್ಣಲ್ಲಿ ಗಾಗಲ್ಸ್ ಹಾಕಿಕೊಂಡು, ಸುಡು ಬಿಸಿಲಿನಲ್ಲಿ ಯಾವುದೋ ಒಂದು ರೆಸ್ಟೋರೆಂಟ್ ನಲ್ಲಿ ಕುಳಿತ ಹಲವಾರು ಫೋಟೋಗಳನ್ನು ಶೇರ್ ಮಾಡಿದ್ದಾರೆ. 

ಸದಾ ದೇಶ ವಿದೇಶ ಪ್ರವಾಸ ಮಾಡುತ್ತಲೇ ಇರೋ ಕಾವ್ಯಾ ಗೌಡ, ಸದ್ಯ ಬೇಬಿ ಮೂನ್ ಮಾಡುತ್ತಿದ್ದು, ಯಾವ ತಾಣಕ್ಕೆ ಹೋಗಿದ್ದಾರೆ ಎನ್ನುವ ಮಾಹಿತಿ ಇಲ್ಲ, ಸುಡು ಬಿಸಿಲು, ಮರಳಿನ ಹಾದಿ ನೋಡುತ್ತಿದ್ದರೆ, ವರ್ಷದ ಕೊನೆಗೆ ಬೀಚ್ ವೆಕೇಶನ್ ಮಾಡುತ್ತಿರುವಂತೆ ಕಾಣುತ್ತಿದೆ. 

ಕಿರುತೆರೆಯಲ್ಲಿ ಗಾಂಧಾರಿ, ಶುಭ ವಿವಾಹ, ರಾಧಾ ರಮಣ ಧಾರಾವಾಹಿಯಲ್ಲಿ ನಟಿಸುವ ಮೂಲಕ ಜನಪ್ರಿಯತೆ ಪಡೆದ ನಟಿ ಕಾವ್ಯಾ ಗೌಡ ತಮ್ಮ ಅದ್ಭುತ ನಟನೆಯ ಮೂಲಕವೇ ಹೆಸರುವಾಸಿಯಾಗಿದ್ದರು. ಹಲವು ವರ್ಷಗಳಿಂದ ನಟನೆಯಿಂದ ದೂರ ವಿದ್ದರೂ ಸಹ ಇಂದಿಗೂ ಕಾವ್ಯಾ ಜನರ ಮೆಚ್ಚಿನ ನಾಯಕಿಯರಲ್ಲಿ ಒಬ್ಬರಾಗಿದ್ದಾರೆ. 

Latest Videos

click me!