ಬಿಡುಗಡೆ ಮಾಡಿರುವ ಮೊದಲನೇ ಪ್ರೋಮೋದಲ್ಲಿ ಯಾರು ಸರಿ? ಯಾರು ತಪ್ಪು? ಎಂಬ ಕಿಚ್ಚನ ಪಂಚಾಯ್ತಿಯಲ್ಲಿ ಭೇಟಿ ಆಗೋಣ ಎಂದು ಹೇಳಲಾಗಿದೆ.
ಎರಡನೇ ಪ್ರೋಮೋದಲ್ಲಿ ಟಾಸ್ಕ್‌ನಲ್ಲಿ ಗಾಯಗೊಂಡು ಆಸ್ಪತ್ರೆಗೆ ಹೋಗಿದ್ದ ನಟಿ ಸಂಗೀತಾ ಶೃಂಗೇರಿ ಮತ್ತು ಡ್ರೋಣ್ ಪ್ರತಾಪ್ ಕಪ್ಪು ಕನ್ನಡಕ ಧರಿಸಿ ಬಿಗ್‌ಬಾಸ್ ಮನೆಗೆ ಮರಳಿ ಬರುತ್ತಿದ್ದು, ಅವರಿಬ್ಬರ ಕಣ್ಣಿಗೆ ದೊಡ್ಡ ಮಟ್ಟದಲ್ಲಿ ಹಾನಿಯಾದಂತೆ ತೋರುತ್ತಿದೆ.
ಸಂಗೀತಾ ಮತ್ತು ಪ್ರತಾಪ್ ಈ ರೀತಿಯಾಗಿ ಮನೆಗೆ ಬರುವುದನ್ನು ಗಮನಿಸಿದ ಸ್ಪರ್ಧಿಗಳು ಶಾಕ್ ಆಗಿದ್ದು, ಕಾರ್ತಿಕ್ ಮತ್ತು ತನಿಶಾ ಇಬ್ಬರನ್ನೂ ತಬ್ಬಿ ಅಳುತ್ತಿರುವ ದೃಶ್ಯ ಕಂಡುಬಂದಿದೆ.
ಇನ್ನೊಂದಡೆ ಕಿಚ್ಚ ಸುದೀಪ್ ಅವರು ಬಿಗ್‌ಬಾಸ್ ಸೀಸನ್ 10ರ ಬಳಿಕ ನಿರೂಪಣೆ ಮಾಡುವುದಿಲ್ಲ ಎನ್ನಲಾಗುತ್ತಿದೆ. ಕಿಚ್ಚ ಸುದೀಪ್ ನಿರೂಪಕರಾಗಿ #BBK10 ಕೊನೆಯ ಸೀಸನ್ ಆಗಲಿದೆಯಾ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಶಾಕ್ ಆಗಿ ಬರೆದುಕೊಂಡಿದ್ದಾರೆ. ಈ ಬಗ್ಗೆ ಚರ್ಚೆ ಕೂಡ ಆರಂಭವಾಗಿದೆ. ಸ್ಪರ್ಧಿಗಳ ವರ್ತನೆಯಿಂದ ಕಿಚ್ಚ ಬೇಸರಗೊಂಡಿರಬೇಕು ಎಂದಿದ್ದಾರೆ. ನಿರೂಪಣೆ ನಿಲ್ಲಿಸಿ ಸಿನೆಮಾ, ಸಿಸಿಎಲ್, ಕೆಸಿಸಿ ನಲ್ಲಿ ತೊಡಗಿಸಿಕೊಳ್ಳಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನೊಂದು ನೀವು ಕಿಚ್ಚನ ಜಾಗದಲ್ಲಿ ಇದ್ದಿದ್ರೆ..? ಎಂದು ಪ್ರಶ್ನೆ ಮಾಡಿ ಮತ್ತೊಂದು ಪ್ರೋಮೋ ಹಾಕಿದೆ. ಈ ಪ್ರೋಮೋಗೆ ತರಹೇವಾರಿ ಕಮೆಂಟ್ ಬಂದಿದ್ದು, ದಂಡಂ ದಶಗುಣಂ ಅಷ್ಟೇ ಎಂದು ವೀಕ್ಷಕರು ಬರೆದುಕೊಂಡಿದ್ದಾರೆ. ಇನ್ನು ಕೆಲವರು ತಪ್ಪಿತಸ್ಥರನ್ನು ನೇರವಾಗಿ ನಾಮಿನೇಟ್ ಮಾಡುತ್ತಿದ್ದೆವು ಎಂದಿದ್ದಾರೆ. ಇನ್ನು ಕಿಚ್ಚ ಒಬ್ಬರೇ ಇದಕ್ಕೆಲ್ಲ ತಕ್ಕ ಶಾಸ್ತಿ ಮಾಡಲು ಸಾಧ್ಯ ಎಂದು ಕೂಡ ಬರೆದುಕೊಂಡಿದ್ದಾರೆ.
ಗಂಧರ್ವರು ಮತ್ತು ರಾಕ್ಷಸರು ಟಾಸ್ಕ್‌ನಲ್ಲಿ ವರ್ತೂರು ಸಂತೋಷ್ ಅವರ ಟೀಂ , ಸಂಗೀತಾ ಅವರ ಟೀಂ ವಿರುದ್ಧ ತುಂಬಾ ಕ್ರೂರವಾಗಿ ಆಡಿದೆ. ಡಿಟರ್ಜೆಂಟ್ ಪೌಂಡರ್ ಮಿಕ್ಸ್ ಮಾಡಿ ನೀರು ಎರಚಿದ್ದು, ಇದು ಸಂಗೀತಾ ಮತ್ತು ಪ್ರತಾಪ್ ಅವರ ಕಣ್ಣಿಗೆ ಗಂಭೀರ ಹಾನಿಯಾಗುವಂತೆ ಮಾಡಿದೆ.
ಈ ಕ್ರೂರತನದ ಆಟಕ್ಕೆ ವಾರದ ಕಥೆ ಕಿಚ್ಚನ ಜೊತೆ ಕಿಚ್ಚನ ಪಂಚಾಯಿತಿಯಲ್ಲಿ ಸ್ಪರ್ಧಿಗಳನ್ನು ಪ್ರಶ್ನಿಸಲೇಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರು ಹಿಗ್ಗಾಮುಗ್ಗಾ ಬೈದು ಒತ್ತಾಯಿಸಿದ್ದಾರೆ. ಜೊತೆಗೆ ಬಿಗ್‌ಬಾಸ್ ಕಾರ್ಯಕ್ರಮ ನಡೆಸುವವರು ಇದನ್ನು ತಡೆಯಬಹುದಿತ್ತು. ಮಾನವೀಯತೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದು ಪ್ರೋಮೋ ರೀಲಿಸ್ ಮಾಡಿರುವ ಕಲರ್ಸ್ ಕನ್ನಡವಾಹಿನಿ ಕಿಚ್ಚನ ಪಂಚಾಯ್ತಿಯಲ್ಲಿ ಸುಂಟರಗಾಳಿ ಎಂದು ತಲೆಬರಹ ನೀಡಿ, ತುರ್ತು ಮುನ್ಸೂಚನೆ, ಈ ವಾರದ ಪಂಚಾಯಿತಿ ಕಟ್ಟೆಯಲ್ಲಿ ಸುಂಟಗಾಳಿ ಎಂಬ ವಿಡಿಯೋ ರಿಲೀಸ್ ಮಾಡಿದೆ. ಏನಿರಬಹುದು ಎಂಬುದು ಸದ್ಯಕ್ಕೆ ಮೂಡಿರುವ ಕುತೂಹಲ? ಈ ಎಲ್ಲದಕ್ಕೂ ಉತ್ತರ ಸಿಗಬೇಕಾದರೆ ಇಂದು ರಾತ್ರಿ 9 ಗಂಟೆಯಿಂದ ಎಪಿಸೋಡ್ ನೋಡಬೇಕು.