BBK9 ಬಿಬಿ ಮನೆಯ ವಾಯ್ಸ್‌ ಬಾಕ್ಸ್‌ ಪ್ರಶಾಂತ್ ಸಂಬರಗಿ ಔಟ್

Published : Dec 11, 2022, 10:29 AM IST

77 ದಿನಗಳ ನಂತರ ಬಿಬಿ ಜರ್ನಿ ಮುಗಿಸಿದ ಪ್ರಶಾಂತ್ ಸಂಬರಗಿ. ಕಾರಣ ತಿಳಿಯದೆ ತಲೆ ಕೆಡಿಸಿಕೊಂಡ ನೆಟ್ಟಿಗರು...

PREV
16
BBK9 ಬಿಬಿ ಮನೆಯ ವಾಯ್ಸ್‌ ಬಾಕ್ಸ್‌ ಪ್ರಶಾಂತ್ ಸಂಬರಗಿ ಔಟ್

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 9ರ ಟಫ್‌ ಫೈಟರ್ ಪ್ರಶಾಂತ್ ಸಂಬರಗಿ 77 ದಿನಗಳ ಜರ್ನಿ ಮುಗಿಸಿ ಹೊರ ಬಂದಿದ್ದಾರೆ. 

26

ಹೌದು! ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ 8ನೇ ಸ್ಪರ್ಧಿ ಪ್ರಶಾಂತ್ ಸಂಬರಗಿ (Prashanth Sambargi) . ನಾಲ್ವರ ಗುಂಪಿನಿಂದ ಒಬ್ಬ ಔಟ್. 

36

ಆರಂಭದಲ್ಲಿದ್ದ ಪ್ರಶಾಂತ್ ಸಂಬರಗಿಗೂ ಕಳೆದ ಎರಡು ವಾರಗಳಿಂದ ಇದ್ದ ಪ್ರಶಾಂತ್ ಸಂಬರಗಿಗೂ ಅಜಗಜಾಂತರ ವ್ಯತ್ಯಾಸವಿದೆ ಆದರೂ ಹೇಗೆ ಎಲಿಮಿನೇಟ್ ಆಗಲು ಸಾಧ್ಯವೆಂದು ನೆಟ್ಟಿಗರು ಲೆಕ್ಕಾಚಾರ ಹಾಕುತ್ತಿದ್ದಾರೆ. 

46

 ರೂಪೇಶ್ ರಾಜಣ್ಣ, ಆರ್ಯವರ್ಧನ್, ರೂಪೇಶ್ ಶೆಟ್ಟಿ ಮತ್ತು ದೀಪಿಕಾ ದಾಸ್‌ ಜೊತೆ ಸದಾ ಇರುತ್ತಿದ್ದ ಪ್ರಶಾಂತ್ ಕಳೆದ ಎರಡು ವಾರಗಳಿಂದ ಯಾವ ಜಗಳವೂ ಆಡದೆ ಕೂಲ್ ಆಗಿದ್ದಾರೆ. 

56

ಬಿಗ್ ಬಾಸ್ ಮನೆಯ ವಾಯ್ಸ್‌ ಬಾಕ್ಸ್‌ ಆಗಿದ್ದ ಪ್ರಶಾಂತ್ ಮೌನವೇ ಎಲಿಮಿನೇಷನ್‌ಗೆ ಕಾರಣವಾಗಿರ ಬಹುದು. ಒಟ್ಟಿನಲ್ಲಿ ರಾಜಣ್ಣ ಜೊತೆ ಜಗಳ ಮಾಡಲು ಈಗ ಯಾರೂ ಇಲ್ಲದಂತಾಗಿದೆ. 

66

ಒಂದು ವಾರ ಕ್ಯಾಪ್ಟನ್, ಎರಡು ಮೂರು ಸಲ ಕಳಪೆ, ಒಂದು ಸಲ ಅತ್ಯುತ್ತಮ ಮತ್ತೊಂದು ಸಲ ಕಿಚ್ಚನ ಚಪ್ಪಾಳೆ ಪಡೆದುಕೊಂಡು ಪ್ರಶಾಂತ್ ಹೊರ ಬಂದಿದ್ದಾರೆ. 

Read more Photos on
click me!

Recommended Stories