Google Search: ಕಚ್ಚಾ ಬಾದಾಮ್‌ ಗರ್ಲ್‌ ಅಂಜಲಿ ಅರೋರಾ ಟ್ರೋಲ್‌!

Published : Dec 10, 2022, 04:25 PM IST

'ಕಚ್ಚಾ ಬಾದಮ್' ಹುಡುಗಿ ಎಂಬ ಹೆಸರಿನಿಂದ ಜನಪ್ರಿಯರಾಗಿರುವ ಅಂಜಲಿ ಅರೋರಾ (Anjali Arora) ಮತ್ತೊಮ್ಮೆ ನ್ಯೂಸ್‌ನಲ್ಲಿದ್ದಾರೆ. ಗೂಗಲ್‌ನ ಅತಿ ಹೆಚ್ಚು ಸರ್ಚ್‌ ಮಾಡಲಾದ  ಜನರ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿದೆ. ಇತ್ತೀಚೆಗೆ ಗೂಗಲ್ ಇಂಡಿಯಾ 2022 ರಲ್ಲಿ ಹೆಚ್ಚು ಹುಡುಕಲ್ಪಟ್ಟವರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಅಂಜಲಿ ಅರೋರಾ 6ನೇ ಸ್ಥಾನದಲ್ಲಿದ್ದಾರೆ. ಇದು ಅಂಜಲಿಗೆ ದೊಡ್ಡ ಸಾಧನೆಯಾಗಿರಬಹುದು, ಆದರೆ ಸಾಮಾಜಿಕ ಮಾಧ್ಯಮ (Social Media) ಬಳಕೆದಾರರು ಇದಕ್ಕಾಗಿ ಇವರನ್ನು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಅಂಜಲಿಯನ್ನು ಹಠಾತ್ತನೆ ಬೆಳಕಿಗೆ ತಂದ ಅವರ ಎಂಎಂಎಸ್ ಕ್ಲಿಪ್ ಅನ್ನು ಅವರು ನೆನಪಿಸುತ್ತಿದ್ದಾರೆ. 

PREV
16
Google Search: ಕಚ್ಚಾ ಬಾದಾಮ್‌ ಗರ್ಲ್‌ ಅಂಜಲಿ ಅರೋರಾ ಟ್ರೋಲ್‌!

2022ರ ಅತಿ ಹೆಚ್ಚು ಗೂಗಲ್‌ ಸರ್ಚ್ ಮಾಡಿದವರ ಪಟ್ಟಿಯಲ್ಲಿ ಅಂಜಲಿ ಅರೋರಾಗೆ ಸ್ಥಾನ ಸಿಕ್ಕ ಕೂಡಲೇ ಜನರು ಸಾಮಾಜಿಕ ಮಾಧ್ಯಮದಲ್ಲಿ ಅವರ ವೀಡಿಯೊಗಳ ಬಗ್ಗೆ ಕಾಮೆಂಟ್ ಮಾಡಲು ಪ್ರಾರಂಭಿಸಿದ್ದಾರೆ.

26

'ಸರ್ಚ್‌ನಲ್ಲಿ  ಏನಿದೆ ಎಂದು ಹೇಳಿ. ಅಂಜಲಿ ಎಂಎಂಎಸ್ ವೀಡಿಯೊ, ಇದನ್ನು ಎಲ್ಲರೂ ಹುಡುಕಿದ್ದಾರೆ' ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. 'ಎಂಎಂಎಸ್ ಅನ್ನು ನಾಚಿಕೆ ಇಲ್ಲದೆ ಮಾಡಿದಾಗ ಗೂಗಲ್‌ ಸರ್ಚ್‌ ಪಟ್ಟಿಯಲ್ಲಿ ಇರಲೇ ಬೇಕು' ಎಂದು ಇನ್ನೊಬ್ಬರು ಬರೆದಿದ್ದಾರೆ. 'ಎಂಎಂಎಸ್ ಇಷ್ಟೊಂದು ಪ್ರಭಾವ ಬೀರುತ್ತದೆ ಎಂದು ನಾನು ಭಾವಿಸಿರಲಿಲ್ಲ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

36

ಅಂಜಲಿ ಅರೋರಾ ಈ ವರ್ಷದ ಆಗಸ್ಟ್‌ನಲ್ಲಿ ಅಂತರ್ಜಾಲದಲ್ಲಿ ವೈರಲ್ ಆಗಿದ್ದ ಸೆಕ್ಸ್ ಕ್ಲಿಪ್‌ನಿಂದಾಗಿ ಬೆಳಕಿಗೆ ಬಂದಿದ್ದರು. ಈ ವೀಡಿಯೊ ಕ್ಲಿಪ್‌ನಲ್ಲಿ ಆಕ್ಷೇಪಾರ್ಹ ಸ್ಥಿತಿಯಲ್ಲಿ ಕಾಣುವ ಹುಡುಗಿ ಅಂಜಲಿ ಅರೋರಾ ಎಂದು ಅಂತರ್ಜಾಲದಲ್ಲಿ ಅನೇಕ ಬಳಕೆದಾರರು ಹೇಳಿಕೊಂಡಿದ್ದಾರೆ.


 

46

ಅಂಜಲಿ ಅರೋರಾ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಟಾರ್ಗೆಟ್ ಮಾಡಲಾಗಿದೆ. ಆದರೆ, ಈ ಟ್ರೋಲಿಂಗ್ ನೋಡಿದ ಅಂಜಲಿ ಮೌನ ಮುರಿದಿದ್ದು, ಇದು ಮಾರ್ಫಡ್ ವಿಡಿಯೋವಾಗಿದ್ದು, ಯಾರೋ ತಮ್ಮ ಹೆಸರಿಗೆ ಚ್ಯುತಿ ತರಲು ಇದನ್ನು ಸಿದ್ಧಪಡಿಸಿದ್ದಾರೆ ಎಂದು ಹೇಳಿದ್ದಾರೆ.


 

56

ಅಂಜಲಿ ಅರೋರಾ ಮಾಡೆಲ್, ಸಾಮಾಜಿಕ ಮಾಧ್ಯಮ ಪ್ರಭಾವಿ (Social Media Influencer) ಮತ್ತು ನಟಿ (Actress). ಇಂಟರ್ನೆಟ್‌ನಲ್ಲಿ  ಅವರ ರೀಲ್‌ಗಳು ಬಹಳ ಜನಪ್ರಿಯ. 'ಕಚ್ಚಾ ಬಾದಮ್'ನಲ್ಲಿ ಅವರ ರೀಲ್ ಅನ್ನು ಪ್ರೇಕ್ಷಕರು ಇಷ್ಷ ಪಟ್ಟಿದ್ದರು ಮತ್ತು ಅವರ ನೃತ್ಯದ ಚಲನೆಗಳು ಬಹಳ ಜನಪ್ರಿಯವಾಯಿತು.


 

66

ಅಂಜಲಿ ಅರೋರಾ ಮೂಲತಃ ದೆಹಲಿಯವರು. 'ಕಚ್ಚಾ ಬಾದಮ್' ಹಾಡುವುದರ ಜೊತೆಗೆ, ಅವರು ಕಂಗನಾ ರೌನತ್‌ ಅವರ ರಿಯಾಲಿಟಿ ಶೋ 'ಲಾಕಪ್ ಇಂಡಿಯಾ' (Lock Up India) ಕಾರಣದಿಂದ ಕೂಡ ಹೆಸರುವಾಸಿಯಾಗಿದ್ದಾರೆ, ಅಲ್ಲಿ ಅವರು ಸ್ಪರ್ಧಿಯಾಗಿ ಕಾಣಿಸಿಕೊಂಡರು ಮತ್ತು ಮುನಾವರ್ ಫಾರೂಕಿ ಜೊತೆಯ ನಿಕಟತೆಯು ಸುದ್ದಿಯಾಗಿತ್ತು.

Read more Photos on
click me!

Recommended Stories